ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂ.ಎಂ.ಕಲಬುರ್ಗಿ ಅವರ ಮೇಲೆ ದಾಳಿ ನಡೆದಿದ್ದು ಹೇಗೆ?

|
Google Oneindia Kannada News

ಧಾರವಾಡ, ಆ.30 : ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಮೇಲಿನ ಗುಂಡಿನ ದಾಳಿಗೆ 'ಕೌಟುಂಬಿಕ ಕಲಹ ಕಾರಣವಲ್ಲ' ಎಂದು ಅವರ ಪುತ್ರಿ ಸ್ಪಷ್ಟಪಡಿಸಿದ್ದಾರೆ. 'ಸೋಮವಾರ ಕಲಬುರ್ಗಿ ಅವರ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ' ಎಂದು ಅವರು ಹೇಳಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿರುವ ಎಂ.ಎಂ.ಕಲಬುರ್ಗಿ (77) ಅವರ ಪುತ್ರಿ ರೂಪದರ್ಶಿ ಅವರು ಘಟನೆ ಕುರಿತು ಮಾಹಿತಿ ನೀಡಿದ್ದಾರೆ. 'ಗುಂಡಿನ ದಾಳಿಗೆ ಕೌಟುಂಬಿಕ ಕಲಹ ಕಾರಣವಲ್ಲ. ನಮ್ಮದು ಸುಖೀ ಕುಟುಂಬ ಯಾವುದೇ ರೀತಿಯ ಕಲಹಗಳು ಇರಲಿಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ. [ಎಂಎಂ ಕಲಬುರ್ಗಿ ಅವರ ಸಂಕ್ಷಿಪ್ತ ಪರಿಚಯ]

kannada

ಘಟನೆ ನಡೆದದ್ದು ಹೇಗೆ? : ರೂಪದರ್ಶಿ ಅವರು ಇಂದು ಬೆಳಗ್ಗೆ ನಡೆದ ಘಟನೆ ಬಗ್ಗೆ ನೀಡಿದ ಮಾಹಿತಿಯ ಪ್ರಕಾರ 'ಕಲಬುರ್ಗಿ ಅವರು ಇಂದು ಯಾವುದೇ ಕಾರ್ಯಕ್ರಮ ಒಪ್ಪಿಕೊಂಡಿರಲಿಲ್ಲ. ಬೆಳಗ್ಗೆ ಎದ್ದವರಿಗೆ ರೂಪದರ್ಶಿ ಅವರೇ ಕಾಫಿ ಮಾಡಿಕೊಟ್ಟಿದ್ದರು. ಪೇಪರ್ ಓದುತ್ತಾ ಕಲಬುರ್ಗಿ ಅವರು ಕುಳಿತಿದ್ದರು'. [ಕಲಬುರ್ಗಿ ಅವರ ಮೇಲೆ ಗುಂಡಿನ ದಾಳಿ]

'8.40ರ ಸುಮಾರಿಗೆ ಮನೆಯ ಕಾಲಿಂಗ್ ಬೆಲ್ ಸದ್ದಾಯಿತು. ಕಲಬುರ್ಗಿ ಅವರೇ ಸ್ವತಃ ತೆರಳಿ ಬಾಗಿಲು ತೆರೆದರು. ತಕ್ಷಣ ಪಟಾಕಿ ಹೊಡೆದಂತೆ ಶಬ್ದ ಕೇಳಿಸಿತು. ತಕ್ಷಣ ಬಂದು ನೋಡಿದಾಗ ಅಪ್ಪ ಕೆಳಗೆ ಬಿದ್ದಿದ್ದರು. ಏನೂ ಮಾತನಾಡುತ್ತಿರಲಿಲ್ಲ. ಕಾಪೌಂಡ್ ಸುತ್ತ-ಮುತ್ತ ಯಾರೂ ಇರಲಿಲ್ಲ'.

'ತಕ್ಷಣ ಅವರನ್ನು ಧಾರವಾಡದ ಜಿಲ್ಲಾಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿದೆವು. ಘಟನೆ ನಡೆಯುವ ಸಂದರ್ಭದಲ್ಲಿ ಮನೆಯಲ್ಲಿ ನಾಲ್ಕು ಜನರಿದ್ದರು. ಎಷ್ಟು ಜನರು ಮನೆಗೆ ಬಂದಿದ್ದರು ಎಂಬ ಬಗ್ಗೆಯೂ ನಮಗೆ ಮಾಹಿತಿ ಇಲ್ಲ. ಅಕ್ಕ-ಪಕ್ಕದವರು ಬೈಕ್‌ನಲ್ಲಿ ಇಬ್ಬರು ಆಗಮಿಸಿದ್ದರು' ಎಂದು ಮಾಹಿತಿ ನೀಡಿದರು.

ಸೋಮವಾರ ಅಂತ್ಯಕ್ರಿಯೆ : ಬೆಂಗಳೂರು ಮತ್ತು ವಿಜಯಪುರದಲ್ಲಿರುವ ಕಲಬುರ್ಗಿ ಅವರ ಮಕ್ಕಳು ಬಂದ ನಂತರ ಅಂತ್ಯಕ್ರಿಯೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಸೋಮವಾರ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.

English summary
Noted Kannada litterateur MM Kalburgi daughter Roopadarshi said, family dispute not cause for his father murder.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X