ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಸಿಗಲಿ : ಹೊರಟ್ಟಿ

Posted By:
Subscribe to Oneindia Kannada

ಧಾರವಾಡ, ಜುಲೈ 23 : ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದರು. ನಗರದಲ್ಲಿ ನಡೆದ ಕುಮಾರಪಥ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಲಿಂಗಾಯತ ಧರ್ಮದ ಪರ ಬ್ಯಾಟ್ ಮಾಡಿದರು.

ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಬೃಹತ್ ಜಾಥಾ

'ಸದ್ಯದ ಪರಿಸ್ಥಿತಿ ಕಾಲಘಟ್ಟಕ್ಕೆ ಅನುಗುಣವಾಗಿ ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕು. ವೀರಶೈವ ಪದದ ಅರ್ಥ ನನಗೆ ಗೊತ್ತಿಲ್ಲ, ಗೊತ್ತಿರುವ ಭೀಮಣ್ಣ ಖಂಡ್ರೆ, ಶಾಮನೂರ ಶಿವಶಂಕರಪ್ಪ ಅವರಿಗೆ ಅರ್ಥ ಗೊತ್ತಿರಬಹುದು' ಎಂದು ಗೇಲಿ ಮಾಡಿದರು.

MLC Basavaraj Horatti bats for separate religion status for Lingayats

ಲಿಂಗಾಯತ ಪ್ರತ್ಯೇಕ ಧರ್ಮವಾದ್ರೆ ಧಾರ್ಮಿಕ ಅಲ್ಪಸಂಖ್ಯಾತ ಮನ್ನಣೆ ದೊರೆಯಲಿದೆ. ಇದರಿಂದ ಸಮಾಜದ ಕೆಳ ಸ್ಥರದ ಜನರಿಗೆ ಅನುಕೂಲವಾಗಲಿದೆ. ಇದಕ್ಕಾಗಿ ಲಿಂಗಾಯಿತ ಸ್ವಾಮೀಜಿಗಳು, ರಾಜಕೀಯ ಮುಖಂಡರುಗಳು ಪಕ್ಷಭೇದ ಮರೆತು ಒಂದಾಗಬೇಕು ಎಂದರು.

'ಲಿಂಗಾಯತ ಪ್ರತ್ಯೇಕ ಧರ್ಮವಲ್ಲ ಅದು ಹಿಂದೂ ಧರ್ಮದಲ್ಲೇ ಇರಬೇಕು' ಎಂದ ಲೇಖಕ ಡಾ.ಚಿದಾನಂದ ಮೂರ್ತಿ ಅವರು ನೀಡಿರುವ ಹೇಳಿಕೆಯನ್ನು ಹೊರಟ್ಟಿ ಖಂಡಿಸಿದರು.

ಲಿಂಗಾಯತ ಶ್ರೀಸಾಮಾನ್ಯನ ಧರ್ಮ. ಬಸವಣ್ಣ ಧರ್ಮಗುರು. ಆದರೆ ಪಂಚಪೀಠಗಳು ಇದನ್ನು ಒಪ್ಪಿಕೊಳ್ಳುವುದಿಲ್ಲ. ಅವರು ಬೇಕಿದ್ದರೆ ವೀರಶೈವಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯಲಿ. ಆದರೆ, ಲಿಂಗಾಯತ ಧರ್ಮಕ್ಕೆ ತಗಲು ಹಾಕುವುದು ಬೇಡ' ಎಂದು ಮಾತೆ ಮಹಾದೇವಿ ವಾದಿಸಿದ್ದಾರೆ.

ಪ್ರತ್ಯೇಕ ಧರ್ಮಕ್ಕೆ ಅಗ್ರಹಿಸಿ ಬೀದರ್ ನಲ್ಲಿ ಇತ್ತೀಚೆಗೆ ಬೃಹತ್ ಮೆರವಣಿಗೆ ನಡೆಸಲಾಯಿತು. ಮಾತೆ ಮಹಾದೇವಿಗೆ ಪ್ರಚಾರದ ಹುಚ್ಚು ಎಂದು ಡಾ. ಚಿಮೂ ಟೀಕಿಸಿದ್ದರು.

Veerashaiva Lingayatha Must Announced As Separate Religion

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
MLC Basavaraj Horatti deamand for separate religion status for Lingayats. He was speaking during the Kumarapatha event held today at Dharwad.
Please Wait while comments are loading...