ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ: ಔಷಧ ಮಾರಾಟ ಪ್ರತಿನಿಧಿಗಳ ಬೇಡಿಕೆಗಳೇನು?

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್, 17: ಜೀವನಾವಶ್ಯಕ ಔಷಧಿಗಳ ಮೇಲಿನ ತೆರಿಗೆ ಹಿಂತೆಗೆದು ಬೆಲೆ ಇಳಿಸಿ, ಔಷಧಿ ಮಾರಾಟ ಪ್ರತಿನಿಧಿಗಳನ್ನು ಕಾನೂನು ಪ್ರಕಾರ ನೇಮಕ ಮಾಡ್ಕೊಳ್ಳಿ, ರಜೆ, ಪ್ರಮೋಷನ್ ಸೇರಿದಂತೆ ನಾನಾ ಸೌಕರ್ಯ ಒದಗಿಸಿ ಇದು ಔಷಧ ಮಾರಾಟ ಪ್ರತಿನಿಧಿಗಳ ಒತ್ತಾಯ.

ಫೆಡರೇಶನ್ ಆಫ್ ಮೆಡಿಕಲ್ ಆಯ್ಯಂಡ್ ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಅಸೋಸಿಯೇಶನ್ ಆಫ್ ಇಂಡಿಯಾ( FMRI) ನೀಡಿದ ಕರೆಯ ಅನ್ವಯ ಔಷಧ ಮಾರಾಟ ಪ್ರತಿನಿಧಿಗಳು ಸಿಐಟಿಯು (CITU) ಘಟಕದ ನೇತೃತ್ವದ ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಈ ಜಾಥಾ ಇಂದಿರಾ ಗಾಜಿನ ಮನೆಯಿಂದ ಹೊರಟು ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡಿತು.[ನಮಗೂ ದೀಪಾವಳಿ ಬೋನಸ್ ಕೊಡಿ ಎಂದ್ರು ಗುತ್ತಿಗೆ ಪೌರ ಕಾರ್ಮಿಕರು]

Hubballi

ಈ ಸಂದರ್ಭದಲ್ಲಿ ಮಾತನಾಡಿದ ಸಾಯಿಕಿರಣ ಅರ್ಕಸಾಲಿ, ಸರಕಾರಗಳ ನಿರ್ಲಕ್ಷ್ಯ ಧೋರಣೆಯಿಂದ ಔಷಧ ಕಂಪನಿಗಳ ಮಾಲೀಕರು ಕಾನೂನುಗಳನ್ನು ಉಲ್ಲಂಘಿಸುತ್ತಿದ್ದಾರೆ. ಇದರಿಂದ ಮಾರಾಟ ಪ್ರತಿನಿಧಿಗಳಿಗೆ ತೊಂದರೆಯಾಗುತ್ತಿದೆ ಎಂದರು.

ಮಹೇಶ ಪತ್ತಾರ ಮಾತನಾಡಿ, ಮಾರುಕಟ್ಟೆಯಲ್ಲಿ ಕಳಪೆ ಮತ್ತು ನಕಲಿ ಔಷಧಗಳು ಸಾಕಷ್ಟು ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಇದಕ್ಕೆ ಕೆಲವೊಂದು ಕಂಪನಿಗಳೇ ಸಹಕರಿಸುತ್ತಿವೆ. ಔಷಧ ದರಗಳು ಭಾರೀ ಏರಿಕೆಯಾಗುತ್ತಿವೆ. ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದ್ದರೂ ಸರ್ಕಾರ ಮಾತ್ರ ಮೌನಧೋರಣೆ ತಾಳಿದೆ ಎಂದು ಆರೋಪಿಸಿದರು.[ಕ್ಯಾನ್ಸರ್, ಹೃದಯ ಸಂಬಂಧಿ ಔಷಧಿಗಳು ಕಡಿಮೆ ಬೆಲೆಯಲ್ಲಿ ಲಭ್ಯ]

ಔಷಧ ಮಾರಾಟ ಮತ್ತು ಪ್ರಚಾರದಲ್ಲಿ ತೊಡಗಿಕೊಂಡಿರುವ ಪ್ರತಿನಿಧಿಗಳಿಗೆ ಕಾನೂನು ಪ್ರಕಾರ ನೇಮಕಾತಿ ಪತ್ರ ನೀಡುವುದಿಲ್ಲ, ರಜೆ, ಪ್ರಮೋಷನ್ ಸೇರಿದಂತೆ ಯಾವುದೇ ಸೌಕರ್ಯಗಳಿಲ್ಲ. ಮಹಿಳೆಯರಿಗೆ ಹೆರಿಗೆ ರಜೆ ನೀಡುತ್ತಿಲ್ಲ ಎಂದು ದೂರಿದರು. ದೇಶಾದ್ಯಂತ ನಡೆದ ಪ್ರತಿಭಟನೆಯಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಔಷಧ ಮಾರಾಟ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

English summary
Karnataka state medical and sales representatives association has taken protest in Hubballi on wednesday. More than 3 lakh medical representatives participated in this rally. This rally ended on Chennamma circle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X