ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ ಕಟ್ಟಡ ಕುಸಿತ : ಸೋಮವಾರದ ವಿವರಗಳು

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಫೆಬ್ರವರಿ 08 : ರೈಲ್ವೆ ಇಲಾಖೆಗೆ ಸೇರಿದ 50 ವರ್ಷ ಹಳೆಯ ಪಾರ್ಸೆಲ್ ಕಟ್ಟಡ ಕುಸಿದು ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ದುರಂತದಲ್ಲಿ ಈವರೆಗೆ ಐವರು ದುರ್ಮರಣಕ್ಕೀಡಾಗಿದ್ದು, ಐವರನ್ನು ರಕ್ಷಿಸಲಾಗಿದೆ. ಕಟ್ಟಡದ ಅವಶೇಷಗಳಡಿ ಇನ್ನೂ ಮೂವರು ಸಿಲುಕಿರುವ ಶಂಕೆಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

5 ಜೆಸಿಬಿಗಳ ಸಹಾಯದಿಂದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಭರದಿಂದ ಸಾಗಿದೆ. ಆದರೆ, ಈಗಾಗಲೆ ಕತ್ತಲಾವರಿಸಿದ್ದರಿಂದ ಮತ್ತು ಸ್ಥಳದಲ್ಲಿ ಅಪಾರ ಜನಸ್ತೋಮ ಸೇರಿದ್ದರಿಂದ ರಕ್ಷಣಾಕಾರ್ಯ ಕುಂಟುತ್ತ ಸಾಗಿದೆ. ಅಗ್ನಿಶಾಮಕ ದಳದವರು, ಪೊಲೀಸರು, ಸ್ಥಳೀಯರು ರಕ್ಷಣಾಕಾರ್ಯದಲ್ಲಿ ತೊಡಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಅವರು ಸ್ಥಳಕ್ಕೆ ಆಗಮಿಸಿದ್ದಾರೆ.[ಚಿತ್ರಗಳು : ಹುಬ್ಬಳ್ಳಿಯಲ್ಲಿ ಕಟ್ಟಡ ಕುಸಿತ]

'ಎರಡು ಮಹಡಿಗಳ ಕಟ್ಟಡದಲ್ಲಿ ಮೊದಲನೆ ಮಹಡಿ ಕುಸಿದು ನೆಲ ಮಡಿಹಡಿಗೆ ಕುಸಿದು ಬಿದ್ದಿದೆ. ಸಂಪೂರ್ಣ ಅವಶೇಷಗಳನ್ನು ತೆರವುಗೊಳಿಸಲು ಇನ್ನೂ 8 ರಿಂದ 9 ಗಂಟೆಗಳ ಕಾರ್ಯಾಚರಣೆ ನಡೆಸಬೇಕಾದ ಅಗತ್ಯವಿದೆ' ಎಂದು ಸಚಿವ ವಿನಯ್ ಕುಲಕರ್ಣಿ ಹೇಳಿದ್ದಾರೆ.[ಇಂಥಾ ಇಕ್ಕಟ್ಟಿನ ಪ್ರದೇಶದಲ್ಲಿ ಕಟ್ಟಿದ ಅಂಥಾ ಬಿಲ್ಡಿಂಗ್!]

ಸಮಯ 7.31 : ಕರ್ನಾಟಕ ಬಿಜೆಪಿ ಅಧ್ಯಕ್ಷ ಮತ್ತು ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರು ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದಾರೆ.

ಸಮಯ 7.13 : ಮೃತಪಟ್ಟವರ ಹೆಸರು : ಸಲೀಂ ರಫಿಕ್ ಈಟಿ, ತಿಮ್ಮಾ ರೆಡ್ಡಿ, ಎಂ.ಗಾಳೆಪ್ಪ, ಕೈಲಾಸ್ ರಜನಿ, ದ್ವಿತೀಯ ದರ್ಜೆ ಸಹಾಯಕಿ ದಾಕ್ಷಾಯಿಣಿ ಗೌಡರ್,

ಸಮಯ 6.36 : ಕಟ್ಟಡದ ಅವಶೇಷಗಳ ಅಡಿಯಿಂದ ಇದುವರೆಗೂ ಆರು ಜನರನ್ನು ಹೊರತೆಗೆಯಲಾಗಿದೆ. ಇವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಸಮಯ 6 ಗಂಟೆ : ಕಟ್ಟಡದ ಅವಶೇಷಗಳಡಿ ಸಿಲುಕಿದ್ದವರಲ್ಲಿ ಹೊರತೆಗೆದ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

hubballi

ಸಮಯ 5.45 : ಆಸ್ಪತ್ರೆಗೆ ದಾಖಲಾದವರು : ನಿಂಗಪ್ಪ, ಜಿ.ವಿ.ರಾಠೋಠ, ಗುರುರಾಜ ಪಾಟೀಲ, ಬಸಯ್ಯ ಹಿರೇಮಠ, ರುಕ್ಬುದ್ದೀನ್ ಕಾನೆ, ಪ್ರದೀಪ ಹುರುಳಿಕಟ್ಟಿ, ವಿಶ್ವನಾಥ

ಸಮಯ 5.20 : ಕಟ್ಟಡ ಕುಸಿದ ಪ್ರದೇಶದಲ್ಲಿ ಮಿತಿ ಮೀರಿದ ಜನಜಂಗುಳಿ ಉಂಟಾಗಿದೆ. ರೈಲುಗಳು ಬರುವ ಮತ್ತು ಹೋಗುವ ಪ್ರದೇಶವಾಗಿರುವುದರಿಂದ ಜನರನ್ನು ನಿಯಂತ್ರಿಸುದು ಕಷ್ಟವಾಗಿದೆ.

ಸಮಯ 5.09 : ಅವಶೇಷಗಳ ಅಡಿಯಿಂದ ಇದುವರೆಗೂ ಮೂವರನ್ನು ರಕ್ಷಣೆ ಮಾಡಲಾಗಿದೆ. 5 ಜೆಸಿಬಿಗಳು ನಿರಂತರವಾಗಿ ಕಾರ್ಯಾಚರಣೆ ಮಾಡುತ್ತಿವೆ. 10 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿವೆ. ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್ ಸೇರಿದಂತೆ ಇತರ ಅಧಿಕಾರಿಗಳು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಸಮಯ 4.43 : ಕಟ್ಟಡ ಕುಸಿತ ಪ್ರಕರಣದಲ್ಲಿ 9 ಜನರು ಗಾಯಗೊಂಡಿದ್ದಾರೆ. ಸದ್ಯ, ಬಸಯ್ಯ ಹಿರೇಮಠ್ ಹಾಗೂ ರೆಹಮಾನ್ ಅವರನ್ನು ರಕ್ಷಣೆ ಮಾಡಲಾಗಿದೆ. ರೈಲ್ವೆ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಸಮಯ 4.35 : 'ಕಟ್ಟಡಗಳ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಜನರಿಂದ ತೊಂದರೆಯಾಗುತ್ತಿದೆ. ಜನರನ್ನು ದೂರಕ್ಕೆ ಕಳಿಸುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದೇವೆ' ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತುರ್ತು ನಿರ್ವಾಹಕ ಪ್ರದೀಪ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

railway station

ಸಮಯ 4.20 : ರೈಲ್ವೆ ರಕ್ಷಣಾ ತಂಡ, ಅಗ್ನಿಶಾಮಕ ದಳದ ಸಿಬ್ಬಂದಿ, ಜನರು ಕಟ್ಟಡಗಳ ಅವಶೇಷಗಳ ಅಡಿ ಸಿಲುಕಿರುವ ಜನರನ್ನು ರಕ್ಷಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ. ಅವಶೇಷ ತೆರವು ಮಾಡುವ ಸಮಯದಲ್ಲಿ ಜೆಸಿಬಿ ಬಳಸುವಾಗ ಕಲ್ಲು ಪೊಲೀಸ್ ಪೇದೆಯ ಎದೆಯ ಎಡಭಾಗಕ್ಕೆ ಬಡಿದಿದ್ದರಿಂದ ಅವರು ಗಾಯಗೊಂಡಿದ್ದಾರೆ. [ಬೆಂಗಳೂರು : ಮೂವರ ಜೀವ ತಗೆದ 6 ಅಂತಸ್ತಿನ ಕಟ್ಟಡ]

ಸಮಯ 3.50 : ಕಟ್ಟಡದ ಅವಶೇಷಗಳಡಿ 8 ಜನರು ಸಿಲುಕಿದ್ದಾರೆ. ಇವರಲ್ಲಿ ಮೂವರು ರೈಲ್ವೆ ಪೊಲೀಸರು, 3 ಪಾರ್ಸೆಲ್ ಏಜೆಂಟ್‌ಗಳು ಮತ್ತು ಇಬ್ಬರು ಕ್ಲರ್ಕ್‌ಗಳು ಸೇರಿದ್ದಾರೆ.

ಸಮಯ 3.45 : 'ಪಾರ್ಸೆಲ್ ಕಚೇರಿ ಮೇಲೆ ಪೊಲೀಸ್ ಠಾಣೆ ಇತ್ತು. ಅದನ್ನು ಸ್ಥಳಾಂತರ ಮಾಡಲಾಗಿತ್ತು. ಆ ಕಟ್ಟಡದ ಗೋಡೆಯನ್ನು ಒಡೆಯುವಾಗ ಕಟ್ಟಡ ಕುಸಿದು ಬಿದ್ದಿದೆ' ಎಂದು ರೈಲ್ವೆ ರಕ್ಷಣಾ ತಂಡದ ಇನ್ಸ್‌ಪೆಕ್ಟರ್ ಕುಬೇರಪ್ಪ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಸಮಯ 3.35 : ಪಾರ್ಸೆಟ್ ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದ ಒಬ್ಬ ವ್ಯಕ್ತಿಯನ್ನು ಅಗ್ನಿ ಶಾಮಕದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಅವಶೇಷಗಳ ಅಡಿ ಸಿಲುಕಿದವರನ್ನು ರಕ್ಷಿಸುವ ಕಾರ್ಯಾಚರಣೆ ಭರದಿಂದ ಸಾಗಿದೆ.

ಸಮಯ 3.20 : ಹುಬ್ಬಳ್ಳಿ ಸೆಂಟ್ರಲ್ ರೈಲ್ವೆ ನಿಲ್ದಾಣದ ಪಾರ್ಸೆಲ್ ವಿಭಾಗದ ಕಟ್ಟಡ ಕುಸಿದುಬಿದ್ದಿದೆ. ಅವಶೇಷಗಳ ಅಡಿ 5 ಜನರು ಸಿಲುಕಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.

hubballi

ಎರಡು ಅಂತಸ್ತುಗಳ ಕಟ್ಟಡದ ಮೇಲ್ಛಾವಣಿ ಸೋಮವಾರ ಮಧ್ಯಾಹ್ನ ಕುಸಿದುಬಿದ್ದಿದೆ. ಸುಮಾರು 50 ವರ್ಷಗಳ ಹಳೆಯ ಕಟ್ಟಡ ಶಿಥಿಲಗೊಂಡಿತ್ತು. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಪಾಡುರಂಗ ರಾಣೆ ಅವರು ಸ್ಥಳಕ್ಕೆ ತೆರಳಿದ್ದು, ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಸೋಮವಾರ ಮಧ್ಯಾಹ್ನ 2.30ರ ಸುಮಾರಿಗೆ ಕಟ್ಟಡ ಕುಸಿದುಬಿದ್ದಿದೆ. ಮೂರು ಜೆಸಿಬಿಗಳ ಸಹಾಯದಿಂದ ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದ್ದು, ಒಳಗೆ ಸಿಲುಕಿದವರನ್ನು ರಕ್ಷಿಸಲು ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಎರಡು ಅಂತಸ್ತಿನ ಕಟ್ಟಡದಲ್ಲಿ ಅಧಿಕಾರಿಗಳು ಎಲ್ಲಿ ಸಿಲುಕಿದ್ದಾರೆ ಎಂಬುದು ಇನ್ನೂ ಪತ್ತೆಯಾಗಿಲ್ಲ. ಕಟ್ಟಡದ ಹಿಂಭಾಗದ ಗೋಡೆಯನ್ನು ಒಡೆದು ಸಿಲುಕಿರುವವರನ್ನು ರಕ್ಷಣೆ ಮಾಡಲು ಪ್ರಯತ್ನ ನಡೆಸಲಾಗುತ್ತಿದೆ.

English summary
Hubballi central railway station parcel counter building, which is 50 years old, collapsed on Monday, February 8, 2016. More than 5 people are feared trapped under the debris. Police and fire personnel reached the spot and rescue operations on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X