ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸದ್ಯದಲ್ಲೇ ಹುಬ್ಬಳ್ಳಿಯಿಂದ ಭಾರೀ ವಿಮಾನಗಳ ಹಾರಾಟ ಆರಂಭ?

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಫೆಬ್ರವರಿ,23: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಕಾಮಗಾರಿ ಮಾರ್ಚ್ ತಿಂಗಳಲ್ಲಿ ಪೂರ್ಣಗೊಳ್ಳುವುದರಿಂದ ಭಾರೀ ವಿಮಾನಗಳು ಇಲ್ಲಿಂದ ಹಾರಾಟ ನಡೆಸಬಹುದು ಎಂದು ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಪ್ರಹ್ಲಾದ್ ಜೋಶಿ ಅವರು, 'ರನ್ ವೇ ಕಾಮಗಾರಿ ತೀರಾ ವಿಳಂಬವಾಗುತ್ತಿದೆ. 2017ರೊಳಗೆ ಟರ್ಮಿನಲ್ ಕಾಮಗಾರಿ ಮುಗಿಸಬೇಕು. ಏಪ್ರಿಲ್ ತಿಂಗಳಿನಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಜನರಲ್ ಅವರನ್ನು ಕರೆಯಿಸಿ ನಿಲ್ದಾಣವನ್ನು ಪರಿಶೀಲಿಸಲಾಗುವುದು' ಎಂದರು.[ಇನ್ಮುಂದೆ ಭಾರತೀಯ ವಾಯುಸೇನೆಯಲ್ಲಿ 'ನಾರಿ ಶಕ್ತಿ']

Hubballi

ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ಐದು ಮೊಬೈಲ್ ಟವರ್ ಗಳಿವೆ. ಅವುಗಳಿಂದ ವಿಮಾನಗಳ ಹಾರಾಟ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಮೊಬೈಲ್ ಟವರ್ ಗಳನ್ನು ಕೂಡಲೇ ಸ್ಥಳಾಂತರ ಮಾಡಬೇಕು ಎಂದು ತಿಳಿಸಿದರು.[ಏರ್ ಇಂಡಿಯಾದಲ್ಲೂ ನಿಮಗೆ ಬೇಕಾದ ಊಟ ಆರ್ಡರ್ ಮಾಡಿ]

ವಿಮಾನ ನಿಲ್ದಾಣ ವಿಸ್ತರಣೆ ಯೋಜನಾಧಿಕಾರಿ ವಾಸಂತಿ ಸುರೇಶ ಮಾತನಾಡಿ, 'ವಿಮಾನ ನಿಲ್ದಾಣದ ಪ್ರದೇಶದಲ್ಲಿ ನೀರಿನ ಪೈಪ್ ಹಾಗೂ ವಿದ್ಯುತ್ ಕಂಬಗಳು ಕಾಮಗಾರಿಗೆ ಅಡೆತಡೆಯಾಗಿವೆ. ಅವುಗಳನ್ನು ಸ್ಥಳಾಂತರಿಸಲು ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಮುಂದಾಗಬೇಕು' ಎಂದು ಹೇಳಿದರು.[ಸಸ್ಯಾಹಾರಕ್ಕೆ ಶರಣಾದ ಏರ್ ಇಂಡಿಯಾ!]

ರಕ್ಷಣೆಗೆ ಪೋರ್ಸ್ : ವಿಮಾನದ ನಿಲ್ದಾಣದ ಸುರಕ್ಷತೆಗೆ ಕರ್ನಾಟಕ ಇಂಡಸ್ಟ್ರೀಯಲ್ ಸೆಕ್ಯುರಿಟಿ ಫೋರ್ಸ್ ನ ಮೂವರು ಅಧಿಕಾರಿಗಳು ಮತ್ತು ಇತರೆ 40 ಸಿಬ್ಬಂದಿ ಶೀಘ್ರ ಆಗಮಿಸಲಿದ್ದಾರೆ ಎಂದು ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಹೇಳಿದರು.

English summary
Hubballi International Airport run way works will finish in March said by Prahlad joshi in Hubballi on Monday, February 22nd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X