ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ಟೋಬರ್ ತನಕ ಓಡಲಿದೆ ಹುಬ್ಬಳ್ಳಿ-ಚೆನ್ನೈ ವಿಶೇಷ ರೈಲು

|
Google Oneindia Kannada News

ಹುಬ್ಬಳ್ಳಿ, ಮೇ 22 : ಹುಬ್ಬಳ್ಳಿ-ಚೆನ್ನೈ ನಡುವೆ ವಾರಕ್ಕೆರಡು ಬಾರಿ ಸಂಚಾರ ನಡೆಸುತ್ತಿದ್ದ ವಿಶೇಷ ರೈಲಿನ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ. ಜೂನ್‌ 1ರಿಂದ ಅಕ್ಟೋಬರ್‌ 1ರವರೆಗೆ ರೈಲು ಸೇವೆ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಬೇಸಿಗೆಯಲ್ಲಿ ಪ್ರಯಾಣಿಕರ ದಟ್ಟಣೆ ತಪ್ಪಿಸುವ ಉದ್ದೇಶದಿಂದ ನೈರುತ್ಯ ರೈಲ್ವೆಯು ಹುಬ್ಬಳ್ಳಿ-ಚೆನ್ನೈ ನಡುವಿನ ವಿಶೇಷ ರೈಲು ಸಂಚಾರವನ್ನು ಏ.6ರಂದು ಆರಂಭಿಸಿತ್ತು. ನಿಗದಿತ ವೇಳಾಪಟ್ಟಿಯಂತೆ ಮೇ ಅಂತ್ಯಕ್ಕೆ ರೈಲು ಸೇವೆ ಸ್ಥಗಿತಗೊಳ್ಳಬೇಕಾಗಿತ್ತು. [ಹುಬ್ಬಳ್ಳಿ-ಚೆನ್ನೈ ನಡುವೆ ವಿಶೇಷ ರೈಲು]

indian railways

ಆದರೆ, ಪ್ರಯಾಣಿಕರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಈ ರೈಲಿನ ಸೇವೆಯನ್ನು ಅಕ್ಟೋಬರ್‌ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಗದಗ, ಕೊಪ್ಪಳ, ಹೊಸಪೇಟೆ, ತೋರಣಗಲ್‌, ಬಳ್ಳಾರಿ, ಗುಂತಕಲ್‌ ಮಾರ್ಗವಾಗಿ ಈ ರೈಲು ಚೆನ್ನೈಗೆ ಸಂಚಾರ ನಡೆಸುತ್ತದೆ. [ರೈಲ್ವೆ ಟಿಕೆಟ್ ಕನ್ಫರ್ಮ್ ಆಗದಿದ್ದರೇನಂತೆ ವಿಮಾನವಿದೆಯಲ್ಲ!]

ವೇಳಾಪಟ್ಟಿ : 07324 ನಂಬರ್‌ನ ರೈಲು ಪ್ರತಿ ಸೋಮವಾರ, ಬುಧವಾರದಂದು ರಾತ್ರಿ 8.20ಕ್ಕೆ ಹುಬ್ಬಳ್ಳಿಯಿಂದ ಹೊರಡಲಿದ್ದು, ಮರುದಿನ ಬೆಳಿಗ್ಗೆ 11ಕ್ಕೆ ಚೆನ್ನೈ ತಲುಪಲಿದೆ. 07323 ನಂಬರಿನ ರೈಲು ಮಂಗಳವಾರ, ಗುರುವಾರದಂದು ಮಧ್ಯಾಹ್ನ 1.15ಕ್ಕೆ ಚೆನ್ನೈನಿಂದ ಹೊರಟು ಮರುದಿನ ಬೆಳಿಗ್ಗೆ 5ಕ್ಕೆ ಹುಬ್ಬಳ್ಳಿ ತಲುಪಲಿದೆ.

English summary
Hubballi-Chennai bi-weekly special train service extend till October 1, 2015. South Western Railways special train will depart Hubballi on Mondays and Wednesdays. Train will leave Chennai on Tuesdays and Thursdays.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X