ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು: ಹುಬ್ಬಳ್ಳಿಯಲ್ಲಿ ಮೈವೆತ್ತ ರಂಗು ರಂಗಿನ ಬಣ್ಣದ ಲೋಕ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ,ಮಾರ್ಚ್,28: ಛೋಟಾ ಬಾಂಬೆಯಾದ ಹುಬ್ಬಳ್ಳಿಯಲ್ಲಿ ಭಾನುವಾರ ರಂಗೋ ರಂಗು. ಬಣ್ಣದ ಲೋಕದಲ್ಲಿ ಮಿಂದೆದ್ದ ಜನರನ್ನು ನೋಡುವುದೇ ಒಂದು ರೀತಿಯ ಹರುಷ. ಒಟ್ಟಿನಲ್ಲಿ ಭಾನುವಾರ ಶಾಂತಿ ರೀತಿಯಲ್ಲಿ ನಡೆದ ರಂಗಿನಾಟ ಎಲ್ಲರ ಮನಸೂರೆಗೊಂಡಿತು.

ಕಾಮಣ್ಣನ ದಹನವಾದ ನಂತರ ಆರಂಭವಾದ ಹೋಳಿ ರಾತ್ರಿಯವರೆಗೂ ನಡೆದಿದ್ದು, ಯುವಕ-ಯುವತಿಯರು ರಂಗಪಂಚಮಿಯ ಸಂಭ್ರಮದಲ್ಲಿ ಪಾಲ್ಗೊಂಡು ಖುಷಿ ಪಟ್ಟರು. ಬೆಳಗ್ಗೆ 6 ರಿಂದಲೇ ಚಿಕ್ಕಮಕ್ಕಳು ಕೈಯಲ್ಲಿ ಬಣ್ಣ ಹಿಡಿದು, ಪಾದಚಾರಿಗಳಿಗೆ ಬಣ್ಣ ಎರಚಿ ಹ್ಯಾಪಿ ಹೋಳಿ ಎಂದು ಗಟ್ಟಿ ಧ್ವನಿಯಲ್ಲಿ ಹೇಳುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ದಶಕಗಳ ಹಿಂದೆ ಪ್ರತಿ ಬಣ್ಣದಾಟದ ದಿನದಂದು ಕೋಮು ಗಲಭೆ ಉಂಟಾಗಿ ಹುಬ್ಬಳ್ಳಿಯ ಜನ ತತ್ತರಿಸುತ್ತಿದ್ದರು. ಆಗಿನಿಂದಲೇ ಬಣ್ಣದಾಟದ ದಿನದಂದು ಪ್ರವಾಸಕ್ಕೆ ಹಲವಾರು ಕುಟುಂಬಗಳವರು ಮೊದಲೇ ತಯಾರಿ ನಡೆಸಿದ್ದರು. ಹೀಗಾಗಿ ನಗರದ ಹತ್ತಿರದ ಹಲವಾರು ಸ್ಥಳಗಳಲ್ಲಿ ತಂಡೋಪತಂಡವಾಗಿ ಜನ ಆಗಮಿಸಿದ್ದರು.[ಹೋಳಿ ಬಣ್ಣದಲ್ಲಿ ಮಿಂದೆದ್ದ ಭಾರತ]

ಪೊಲೀಸ್ ಭದ್ರತೆ : ಬಣ್ಣದಾಟದ ಸಂದರ್ಭದಲ್ಲಿ ಯಾವುದೇ ಕೋಮು ಗಲಭೆ ಉಂಟಾಗದಂತೆ ಪೊಲೀಸರು ಹಲವಾರು ಕಡೆಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ಭದ್ರತೆ ಒದಗಿಸಿದ್ದರು. ಕೆಲವೆಡೆ ಸಂಚಾರ ನಿಷೇಧಿಸಲಾಗಿತ್ತು. ನಗರದ ಕಾಲೇಜ್ ಏರಿಯಾ ಎಂದೇ ಪ್ರಸಿದ್ಧಿಯಾಗಿರುವ ವಿದ್ಯಾನಗರದಲ್ಲಿ ಹಲವಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬಣ್ಣದಾಟದಲ್ಲಿ ತೊಡಗಿ ಕಾಮನ ಹಬ್ಬಕ್ಕೆ ಹೆಣ್ಣು-ಗಂಡು ಭೇದವಿಲ್ಲವೆಂಬುದನ್ನು ಸಾಬೀತುಪಡಿಸಿದಂತಿತ್ತು.

ಕಾಮಣ್ಣನ ಮೆರವಣಿಗೆ

ಕಾಮಣ್ಣನ ಮೆರವಣಿಗೆ

ಬಣ್ಣದ ಆಟದಲ್ಲಿ ಪಾಲ್ಗೊಂಡ ಬಣ್ಣ ಹಚ್ಚಿಕೊಂಡ ಜನರು ಸುಮಾರು ಐದು ಅಡಿ ಎತ್ತರದ ಕಾಮಣ್ಣನನ್ನು ಬೀದಿ ಬೀದಿಯಲ್ಲಿ ಮೆರವಣಿಗೆ ಮಾಡಿದರು. ಜನರ ಸಂತಸ ಮುಗಿಲು ಮುಟ್ಟಿತು.

ಬಣ್ಣ ಹಚ್ಚಿಕೊಂಡ ಮಂದಿಯ ಪೋಸ್

ಬಣ್ಣ ಹಚ್ಚಿಕೊಂಡ ಮಂದಿಯ ಪೋಸ್

ಕೆಂಪು, ಗುಲಾಬಿ, ಕೇಸರಿ, ಹಸಿರು ಹೀಗೆ ನಾನಾ ಬಣ್ಣಗಳನ್ನು ಹಂಚಿಕೊಂಡ ಮಂದಿ ಕ್ಯಾಮರ ಕಣ್ಣಿಗೆ ಕಾಣಿಸಿದ್ದು ಹೀಗೆ

ಶಾಂತಿ ಕದಡದ ಹೋಳಿ

ಶಾಂತಿ ಕದಡದ ಹೋಳಿ

ಹುಬ್ಬಳ್ಳಿಯಲ್ಲಿ ನಡೆದ ರೈಲ್ವೆ ಗಲಾಟೆ, ಕಳಸಾ ಬಂಡೂರಿ ಹೋರಾಟದ ಪ್ರತಿಭಟನೆ ಕಾವು ಇತ್ತೀಚೆಗೆ ಕಡಿಮೆಯಾಗಿತ್ತು. ಈ ಹಬ್ಬದಲ್ಲಿ ಯಾವುದೇ ಅನಾಹುತ ಸಂಭವಿಸಬಾರದೆಂಬ ಕಾರಣಕ್ಕಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜನರೂ ಸಹ ಪೊಲೀಸರಿಗೆ ಸಹಕರಿಸಿದರು.

ಮಕ್ಕಳ ಹೋಳಿ ನೋಡಿ

ಮಕ್ಕಳ ಹೋಳಿ ನೋಡಿ

ಹೋಳಿ ಹಬ್ಬ ದೊಡ್ಡವರಿಗಿಂತ ಮಕ್ಕಳಿಗೆ ಖುಷಿ ನೀಡುತ್ತದೆ. ಆ ಬಣ್ಣಗಳನ್ನು ನೋಡುವುದೇ ಮಕ್ಕಳಿಗೆ ಸಂಭ್ರಮ. ಅದರಲ್ಲೂ ಹಚ್ಚಿಕೊಂಡರಂತು ಬಿಡಿ... ನೋಡಿ ಬಣ್ಣ ಹಚ್ಚಿಕೊಂಡ ಮಕ್ಕಳಾ....

ಬಣ್ಣದ ನೀರಿನ ಸ್ನಾನ

ಬಣ್ಣದ ನೀರಿನ ಸ್ನಾನ

ಬಣ್ಣವನ್ನು ಮುಖಕ್ಕೆ ಹಚ್ಚಿಕೊಂಡು ಇದರಿಂದ ಬೇಸರ ಬಂದಾಕ್ಷಣ ಬಣ್ಣದ ನೀರನ್ನು ಮಾಡಿ ಜನರಿಗೆ ಎರಚುವ ಮೂಲಕ ವಿಭಿನ್ನವಾಗಿ ಹೋಳಿ ಆಚರಣೆ ಮಾಡಿದರು.

ಹೋಳಿ ಬಣ್ಣದ ವಿಶೇಷ ಮಡಿಕೆ ಒಡೆಯುವುದು

ಹೋಳಿ ಬಣ್ಣದ ವಿಶೇಷ ಮಡಿಕೆ ಒಡೆಯುವುದು

ಮಡಿಕೆ ಒಡೆಯುವುದೇ ಈ ಹೋಳಿ ಹಬ್ಬದ ವಿಶೇಷ, ಸಾಕಷ್ಟು ಎತ್ತರದಲ್ಲಿ ಮಡಿಕೆ ಕಟ್ಟಿ ಅದನ್ನು ಒಡೆದು ಜನರು ಖುಷಿ ಪಡುತ್ತಾರೆ. ಆಗ ಜನರ ಆತ್ಮ ವಿಶ್ವಾಸದ ನುಡಿಗಳು, ಕುತೂಹಲಕಾರಿ ನೋಟ ಇವೆಲ್ಲವೂ ಮೇಳೈಸಿ ಬಣ್ಣದ ಹಬ್ಬ ಇನ್ನಷ್ಟು ಸೊಗಸಿನಿಂದ ಕೂಡಿರುತ್ತದೆ.

English summary
Hubballi people were celebrated holi festival very grandly. people enjoyed with variety of colors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X