ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕವಿವಿ ಪ್ರಕರಣ : ವಾಲೀಕಾರ ವಿರುದ್ಧದ ಎಫ್‌ಐಆರ್‌ ರದ್ದು

|
Google Oneindia Kannada News

ಧಾರವಾಡ, ನ.27 : ಕರ್ನಾಟಕ ವಿಶ್ವವಿದ್ಯಾಲಯದಲ್ಲಿನ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಪ್ರಕರಣದಲ್ಲಿ ವಿವಿ ವಿಶ್ರಾಂತ ಕುಲಪತಿ ಡಾ.ಎಚ್.ಬಿ.ವಾಲೀಕಾರ ಅವರ ವಿರುದ್ಧ ದಾಖಲಾಗಿದ್ದ ಎಫ್ಐಆರ್‌ಅನ್ನು ರದ್ದುಗೊಳಿಸಿ ಧಾರವಾಡದ ಹೈಕೋರ್ಟ್‌ ಪೀಠ ಗುರುವಾರ ಆದೇಶ ಹೊರಡಿಸಿದೆ.

ವಿವಿ ಹಗರಣಗಳ ಕುರಿತು ರಾಜ್ಯಪಾಲ ವಜುಭಾಯಿ ವಾಲಾ ಅವರು ನೇಮಕ ಮಾಡಿದ್ದ ಏಕಸದಸ್ಯ ಸಮಿತಿ ನೀಡಿದ ವರದಿಯನ್ವಯ ಕುಲಪತಿ ಸೇರಿ 11 ಜನರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. [ವಾಲೀಕಾರ ಬಂಧನ]

ದೂರಿನ ಅನ್ವಯ ಎಫ್‌ಐಆರ್ ದಾಖಲಿಸಿದ ಪೊಲೀಸರು ಮೌಲ್ಯಮಾಪನ ಕುಲಸಚಿವ ಡಾ.ಎಚ್.ಟಿ.ಪೋತೆ, ಹಣಕಾಸು ಅಧಿಕಾರಿ ರಾಜಶ್ರೀ ಹಾಗೂ ಕುಲಪತಿಗಳ ಆಪ್ತ ಸಹಾಯಕ ಎಸ್.ಎಲ್.ಬೀಳಗಿ ಮತ್ತು ವಾಲೀಕಾರ ಅವರನ್ನು ಬಂಧಿಸಿದ್ದರು. [ಕರ್ನಾಟಕ ವಿವಿಯಲ್ಲಿ ಏನಿದು ಹಗರಣ]

ನಂತರ ಜಾಮೀನಿನ ಮೇಲೆ ಎಲ್ಲರೂ ಬಿಡುಗಡೆಗೊಂಡಿದ್ದರು. ಡಾ.ಎಚ್.ಬಿ.ವಾಲೀಕಾರ ಅವರು ತಮ್ಮ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಧಾರವಾಡದ ಹೈಕೋರ್ಟ್‌ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಇಂದು ಈ ಕುರಿತ ತೀರ್ಪು ಪ್ರಕಟಗೊಂಡಿದ್ದು, ಎಫ್‌ಐಆರ್ ರದ್ದುಗೊಳಿಸಲಾಗಿದೆ.

HB Walikar

ತಡವಾಗಿ ನ್ಯಾಯ ಸಿಕ್ಕಿದೆ : ಹೈಕೋರ್ಟ್‌ ಪೀಠದ ತೀರ್ಪಿನ ನಂತರ ಮಾತನಾಡಿರುವ ಡಾ.ಎಚ್.ಬಿ.ವಾಲೀಕಾರ ಅವರು ನ್ಯಾಯಾಂಗದ ಮೇಲೆ ತಮಗೆ ನಂಬಿಕೆ ಇತ್ತು. ತಡವಾಗಿಯಾದರೂ ತಮಗೆ ನ್ಯಾಯ ದೊರಕಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಕರಣಗಳೇನು ? : 2010ರ ಜುಲೈ 25ರಿಂದ ಇತ್ತೀಚಿಗೆ ನಡೆದ ವಿಧಾನ ಪರಿಷತ್‌ ಚುನಾವಣೆ ಅವಧಿಯ ತನಕ ವಿವಿಯಲ್ಲಿ 110 ವಿವಿಧ ಹುದ್ದೆ ಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ ಇದರಲ್ಲಿ ಅಕ್ರಮ ನಡೆದಿದೆ ಎಂಬುದುವುದು ಒಂದು ಆರೋಪವಾದರೆ, ವಿವಿಯಲ್ಲಿ ಕಾನೂನು ಉಲ್ಲಂಘನೆ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ನಡೆದಿದೆ ಎನ್ನುವುದು ಮತ್ತೊಂದು ಆರೋಪವಾಗಿದೆ.

English summary
Its a major relief to the former Vice-Chancellor of Karnataka University H.B. Walikar. On Thrusday Karnataka High Court Dharwad bench quashed the FIR against H.B. Walikar in the charges of financial irregularities and abuse of power in requirements.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X