ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹನುಮಂತಪ್ಪ ಹುಟ್ಟೂರಿನಲ್ಲಿ ಗ್ರಾಮಸ್ಥರ ಪ್ರಾರ್ಥನೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಧಾರವಾಡ, ಫೆಬ್ರವರಿ 10 : ಸಿಯಾಚಿನ್‌ನಲ್ಲಿ ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ ಅವರಿಗಾಗಿ ಇಡೀ ದೇಶವೇ ಪ್ರಾರ್ಥಿಸುತ್ತಿದೆ. ಇತ್ತ ಆತನ ಮನೆಯಲ್ಲಿ ಒಂದೆಡೆ ಆತಂಕ ಮತ್ತೊಂದೆ ಸಂತಸ ಎರಡೂ ಕಂಡು ಬರುತ್ತಿದೆ.['ಅಮರ' ಯೋಧ ಹನುಮಂತಪ್ಪನ ಅಂತಿಮ ಯಾತ್ರೆಯ ಚಿತ್ರಗಳು]

ಸಿಯಾಚಿನ್‌ನಲ್ಲಿ ಆದ ಹಿಮಪಾತದಲ್ಲಿ ನಿಮ್ಮ ಮನೆಯ ಹನುಮಂತಪ್ಪ ಕೊಪ್ಪದ ಮೃತಪಟ್ಟಿದ್ದಾರೆ ಎಂದು ಸ್ವತಃ ಶಾಸಕ ಮತ್ತು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಬಂದು ಸಾಂತ್ವನ ಹೇಳಿ ಹೋಗಿದ್ದರು. ಹನುಮಂತಪ್ಪ ಕೊಪ್ಪದ ಅವರ ಕುಟುಂಬ ಸಾವಿನ ಸುದ್ದಿ ಕೇಳಿ ದುಃಖದ ಮಡುವಿನಲ್ಲಿ ಮುಳುಗಿದ್ದರು. [ಇನ್ನೂ ಚಿಂತಾಜನಕ ಸ್ಥಿತಿಯಲ್ಲಿ ಹನುಮಂತಪ್ಪ ಕೊಪ್ಪದ]

ಆದರೆ, ಮಂಗಳವಾರ ಮುಂಜಾನೆ ಯೋಧ ಬದುಕಿರುವ ಸುದ್ದಿ ಬಂದ ಕೂಡಲೇ ಮನೆಯಲ್ಲಿ ಎಲ್ಲರೂ ಸಂತಸಪಟ್ಟರು. ಕೂಡಲೇ ಅವರಿಗೆ ದೆಹಲಿಗೆ ತೆರಳುವ ವ್ಯವಸ್ಥೆ ಮಾಡಲಾಯಿತು. ಸದ್ಯ, ದೆಹಲಿಯ ಆರ್.ಆರ್.ಆಸ್ಪತ್ರೆಗೆ ಕುಟುಂಬದ ಐದು ಜನ ಸದಸ್ಯರು ತೆರಳಿದ್ದಾರೆ. [ಹನುಮಂತಪ್ಪ ಬಗ್ಗೆ ಅವರ ಅವ್ವ ಹೇಳಿದ್ದೇನು?]

ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದ ಹನುಮಂತಪ್ಪ ಅವರು ಬೇಗ ಗುಣಮುಖರಾಗಲಿ ಎಂದು ಇಡೀ ದೇಶವೇ ಪ್ರಾರ್ಥಿಸುತ್ತಿದೆ. ಹನುಮಂತಪ್ಪ ಕೊಪ್ಪದ ಅವರು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರಿನವರು, ಫೆ.3ರಂದು ಸಿಯಾಚಿನ್‌ನಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿದ್ದರು.....

ಯೋಧನ ಆರೋಗ್ಯಕ್ಕಾಗಿ ದೇಶದ ಜನರ ಪ್ರಾರ್ಥನೆ

ಯೋಧನ ಆರೋಗ್ಯಕ್ಕಾಗಿ ದೇಶದ ಜನರ ಪ್ರಾರ್ಥನೆ

ಸಿಯಾಚಿನ್‌ನಲ್ಲಿ ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದ ಹನುಮಂತಪ್ಪ ಅವರು ಬೇಗ ಗುಣಮುಖರಾಗಲಿ ಎಂದು ಇಡೀ ದೇಶವೇ ಪ್ರಾರ್ಥಿಸುತ್ತಿದೆ. ಹನುಮಂತಪ್ಪ ಕೊಪ್ಪದ ಅವರು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರಿನವರು, ಫೆ.3ರಂದು ಸಿಯಾಚಿನ್‌ನಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿದ್ದರು.

ದುಖಃದಲ್ಲಿತ್ತು ಯೋಧನ ಕುಟುಂಬ

ದುಖಃದಲ್ಲಿತ್ತು ಯೋಧನ ಕುಟುಂಬ

ಸಿಯಾಚಿನ್‌ನಲ್ಲಿ ಆದ ಹಿಮಪಾತದಲ್ಲಿ ನಿಮ್ಮ ಮನೆಯ ಹನುಮಂತಪ್ಪ ಕೊಪ್ಪದ ಮೃತಪಟ್ಟಿದ್ದಾರೆ ಎಂದು ಸ್ವತಃ ಶಾಸಕ ಮತ್ತು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಬಂದು ಸಾಂತ್ವನ ಹೇಳಿ ಹೋಗಿದ್ದರು. ಇದರ ಬಳಿಕ ಯೋಧನ ಕುಟುಂಬ ದುಖಃದಲ್ಲಿತ್ತು. ಯೋಧ ಬದುಕಿರುವ ಸುದ್ದಿ ಕೇಳಿ ಈಗ ಮನೆಯಲ್ಲಿ ಸಂತಸ ಮೂಡಿದೆ.

ಮಂಗಳವಾರ ಮುಂಜಾನೆ ಶುಭ ಸುದ್ದಿ

ಮಂಗಳವಾರ ಮುಂಜಾನೆ ಶುಭ ಸುದ್ದಿ

ಮಂಗಳವಾರ ಮುಂಜಾನೆ ಹನುಮಂತಪ್ಪ ಕೊಪ್ಪದ ಬದುಕಿರುವ ಸುದ್ದಿ ಬಂದ ಕೂಡಲೇ ಮನೆಯಲ್ಲಿ ಎಲ್ಲರೂ ಸಂತಸಪಟ್ಟರು. ಸುತ್ತಮುತ್ತಲಿನ ಗ್ರಾಮಸ್ಥರು ಸಹ ಬಂದು ಸಂತಸ ಹಂಚಿಕೊಂಡು ಹನುಮಂತಪ್ಪ ಅವರು ಗುಣಮುಖರಾಗಿ ಊರಿಗೆ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಯೋಧ ಗುಣಮುಖವಾಗಲು ಪ್ರಾರ್ಥನೆ

ಯೋಧ ಗುಣಮುಖವಾಗಲು ಪ್ರಾರ್ಥನೆ

ಆರು ದಿನಗಳಿಂದ 25 ಅಡಿ ಆಳದ ಹಿಮದಲ್ಲಿ ಸಿಲುಕಿದ್ದ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ ಅವರನ್ನು ಸಿಯಾಚಿನ್‌ನಲ್ಲಿ ಸೋಮವಾರ ಪತ್ತೆ ಹಚ್ಚಲಾಗಿತ್ತು. ದೆಹಲಿಯ ಆರ್.ಆರ್.ಆಸ್ಪತ್ರೆಯಲ್ಲಿ ಹನುಮಂತಪ್ಪಗೆ ಚಿಕಿತ್ಸೆ ನೀಡಲಾಗುತ್ತಿದೆ.

ದೆಹಲಿಗೆ ತೆರಳಿದ ಕುಟುಂಬ ಸದಸ್ಯರು

ದೆಹಲಿಗೆ ತೆರಳಿದ ಕುಟುಂಬ ಸದಸ್ಯರು

ಹನುಮಂತಪ್ಪ ಕೊಪ್ಪದ ಅವರ ಕುಟುಂಬದ ಸದಸ್ಯರು ದೆಹಲಿಗೆ ತೆರಳಿದ್ದಾರೆ. ಮಂಗಳವಾರ ಗೋವಾದಿಂದ ವಿಮಾನದ ಮೂಲಕ ಐವರು ಸದಸ್ಯರು ದೆಹಲಿಗೆ ತೆರಳಿದ್ದು, ಇಂದು ದೆಹಲಿಯ ಆರ್.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹನುಮಂತಪ್ಪನನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ಈ ಮನೆಯಲ್ಲಿ ಇನ್ನೊಬ್ಬ ಯೋಧ

ಈ ಮನೆಯಲ್ಲಿ ಇನ್ನೊಬ್ಬ ಯೋಧ

ಹನುಮಂತಪ್ಪ ಅವರ ಮನೆಯಲ್ಲಿ ಮತ್ತೊಬ್ಬ ಯೋಧನಿದ್ದಾನೆ. ಹನುಮಂತಪ್ಪ ಅವರ ಹಿರಿಯ ಅಣ್ಣನ ಮಗನೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2 ವರ್ಷಗಳಿಂದ ಆತ ಬೆಂಗಳೂರಿನ ರಕ್ಷಣಾ ವಿಭಾಗದಲ್ಲಿ ಸಿವಿಲ್ ಗಾರ್ಡನರ್ ಆಗಿದ್ದಾರೆ.

ಜಮೀನು ಕುಟುಂಬಕ್ಕೆ ಆಧಾರ

ಜಮೀನು ಕುಟುಂಬಕ್ಕೆ ಆಧಾರ

ಹನುಮಂತಪ್ಪ ಕೊಪ್ಪದ ಅವರ ಕುಟುಂಬಕ್ಕೆ ಬೆಟದೂರಿನಲ್ಲಿ ಕೇವಲ 2 ಎಕರೆ ಜಮೀನು ಇದ್ದು, 13 ಜನರ ತುಂಬು ಕುಟುಂಬಕ್ಕೆ ಜಮೀನೆ ಆಸರೆಯಾಗಿದೆ.

English summary
Lance Naik Hanmanthappa Koppad battles for life, a village united in prayer. Betadoor village in Kundagol taluk, Dharwad district, North Karnataka is united in sorrow, joy and prayer. Koppad who survived at the Siachen Glacier was in coma and extremely critical.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X