ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ ಖಡಕ್ ಜ್ವಾಳದ ರೊಟ್ಟಿ ವಿದೇಶದಲ್ಲೂ ಸಿಕ್ತಾವ್ರೀ!

|
Google Oneindia Kannada News

ಹುಬ್ಬಳ್ಳಿ, ಆಗಸ್ಟ್ 1 : ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮುಂತಾದ ಕಡೆ ಕುಳಿತು ನೀವು ಹುಬ್ಬಳ್ಳಿಯ ಖಡಕ್ ಜೋಳದ ರೊಟ್ಟಿ ಸವಿಯಬಹುದು. ಹೌದು, ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಆಹಾರ ಜೋಳದ ರೊಟ್ಟಿ ಈಗ ವಿದೇಶಗಳಿಗೆ ಪ್ರಯಾಣಿಸುತ್ತಿದೆ.

ಹುಬ್ಬಳ್ಳಿಯ ಪೂರ್ವ ಫುಡ್ ಪ್ರಾಡಕ್ಟ್ಸ್ ಉತ್ತರ ಕರ್ನಾಟಕದ ಜೋಳದ ರೊಟ್ಟಿಯನ್ನು ವಿದೇಶಗಳಿಗೆ ರವಾನಿಸುತ್ತಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ಪಶ್ಚಿಮ ಏಷ್ಯಾ, ಅಮೆರಿಕ ಮುಂತಾದ ದೇಶಗಳಲ್ಲಿ ರೊಟ್ಟಿಗೆ ಬೇಡಿಕೆ ಹೆಚ್ಚಾಗಿದೆ. [ಜೋಳದ ರೊಟ್ಟಿ ಎಣಗಾಯ್ ಪಲ್ಯ ಗುರೆಳ್ಳು ಚಟ್ನಿ, ವಾಹ್!]

food

ಪಾಟೀಲ್ ಕುಟುಂಬ ಪೂರ್ವ ಫುಡ್ ಪ್ರಾಡಕ್ಟ್ಸ್ಅನ್ನು ನಡೆಸುತ್ತಿದೆ. 10 ರಿಂದ 12 ರೊಟ್ಟಿಗಳನ್ನು ಪ್ಯಾಕ್ ಮಾಡಿ ವಿದೇಶಕ್ಕೆ ಕಳಿಸಲಾಗುತ್ತದೆ. ಏಳು ಹಂತಗಳಲ್ಲಿ ಪ್ಯಾಕ್ ಮಾಡಿರುವ ರೊಟ್ಟಿಗಳು 6 ರಿಂದ 9 ತಿಂಗಳ ತನಕ ಕೆಡದೇ ಹಾಗೇ ಉಳಿಯುತ್ತವೆ. [59 ವರ್ಷಗಳಿಂದ ಇಲ್ಲಿ 'ಕಾಂಗ್ರೆಸ್' ನದ್ದೇ ಆಡಳಿತ!]

ಚಿಕ್ಕ ಮೆಸ್ ಆರಂಭ : ಲಿಂಗೇಗೌಡ ಪಾಟೀಲ್ ಮತ್ತು ಪುಷ್ಪಾ ಪಾಟೀಲ್ ಈ ಪೂರ್ವ ಫುಡ್ ಪ್ರಾಡಕ್ಟ್ಸ್ ನೋಡಿಕೊಳ್ಳುತ್ತಾರೆ. 2011ರಲ್ಲಿ ಇವರು ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಚಿಕ್ಕ ಮೆಸ್ ಆರಂಭಿಸಿದರು. 2 ರಿಂದ 3 ಮಹಿಳೆಯರು ಆಗ ದಿನಕ್ಕೆ 500-600 ರೊಟ್ಟಿ ಮಾಡುತ್ತಿದ್ದರು. [ಡಬ್ಬಿ ತುಂಬ ಭಕ್ಕರಿ ಅಲ್ಲ ಅಮ್ಮನ ಪ್ರೀತಿ ಇತ್ತು]

ಈಗ ರೊಟ್ಟಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಹೇಳುವ ಲಿಂಗೇಗೌಡರು, ಸದ್ಯ 35 ಮಹಿಳೆಯರು ನಿತ್ಯ 10 ರಿಂದ 12 ಸಾವಿರ ರೊಟ್ಟಿಗಳನ್ನು ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಪ್ರತಿ ತಿಂಗಳು 1.5 ರಿಂದ 2 ಲಕ್ಷ ರೊಟ್ಟಿಗಳನ್ನು ಮಾರಾಟ ಮಾಡುತ್ತಾರೆ.

ಕಳೆದ ವಾರ 16 ಸಾವಿರ ರೊಟ್ಟಿಯನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಲಾಗಿದೆ. ಜೋಳದ ಜೊತೆಗೆ ಸಜ್ಜೆ ರೊಟ್ಟಿ, ರಾಗಿ ರೊಟ್ಟಿ, ಚಪಾತಿ, ಶೇಂಗಾ ಚಟ್ನಿಯನ್ನು ಮಾರಾಟ ಮಾಡಲಾಗುತ್ತಿದೆ. ಜೋಳದ ರೊಟ್ಟಿಯ ಗುಣ ಮಟ್ಟ ಕಡಿಮೆಯಾಗದಂತೆ ಪುಷ್ಪಾ ಪಾಟೀಲ್ ಉಸ್ತುವಾರಿ ನೋಡಿಕೊಳ್ಳುತ್ತಾರೆ.

ದೇಶದಲ್ಲೂ ಹೆಚ್ಚಿ ಬೇಡಿಕೆ : ಹುಬ್ಬಳ್ಳಿಯಲ್ಲಿ ತಯಾರಾಗುವ ಜೋಳದ ರೊಟ್ಟಿಗೆ ದೇಶದಲ್ಲೂ ಭಾರೀ ಬೇಡಿಕೆ ಇದೆ. ಬೆಂಗಳೂರು, ಬೀದರ್, ಕಲಬುರಗಿ, ವಿಜಯಪುರ ಸೇರಿದಂತೆ ಕರ್ನಾಟಕವ ವಿವಿಧ ಜಿಲ್ಲೆಗಳು. ಗುರ್ಗಾಂವ್, ಮುಂಬೈ, ಹೈದರಾಬಾದ್, ಸೂರತ್, ಗುಜರಾತ್‌ನಲ್ಲಿಯೂ ಬೇಡಿಕೆ ಹೆಚ್ಚಿದೆ.

ಬೀದರ್‌ನಲ್ಲಿರುವ ಎಸ್‌ಎಸ್ ರೆಡ್ಡಿ ಫುಡ್ ಪ್ರಾಡಕ್ಟ್ಸ್ ಹುಬ್ಬಳ್ಳಿಯಿಂದ ಪ್ರತಿ ತಿಂಗಳು ಸುಮಾರು 40 ರಿಂದ 45 ಸಾವಿರ ರೊಟ್ಟಿಯನ್ನು ಖರೀದಿ ಮಾಡುತ್ತದೆ. ಪ್ರತಿದಿನ 200 ರೊಟ್ಟಿಯನ್ನು ಅಮೆರಿಕ, ಇಂಗ್ಲೆಂಡ್‌, ಹೈದರಾಬಾದ್, ತೆಲಂಗಾಣಕ್ಕೆ ಕಳುಹಿಸಲಾಗುತ್ತದೆ.

English summary
North Karnatakas famous food jowar roti now available in Australia, England, US and other countries, Global market opened for roti. Poorva Food Products Hubballi, run by the Patil family discovered this global market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X