ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆತ್ಮಹತ್ಯೆ ಮಾಡಿಕೊಂಡರೂ ಕಣ್ಣು ದಾನ ಮಾಡಿದ ಯುವಕ

|
Google Oneindia Kannada News

ಧಾರವಾಡ, ಏಪ್ರಿಲ್ 15 : ವ್ಯಕ್ತಿ ಸತ್ತ ಮೇಲೆ ಆತನ ಅಂಗಾಂಗಗಳನ್ನು ದಾನ ಮಾಡಲಾಗುತ್ತದೆ. ಆದರೆ, ಧಾರವಾಡದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವಾಗ, ತನ್ನ ಅಂಗಾಂಗ ದಾನ ಮಾಡುವಂತೆ ಡೆತ್ ನೋಟ್ ಬರೆದಿಟ್ಟಿದ್ದಾನೆ. ಅಂಗಾಂಗ ದಾನ ವಿಚಾರದಲ್ಲಿ ಇತರರಿಗೆ ಮಾದರಿಯಾಗಿದ್ದಾನೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಧಾರವಾಡದ ನೆಹರೂ ನಗರ ನಿವಾಸಿ ಅಬ್ದುಲ್ ವಹಾದ್ ದೊಡ್ಡಮನಿ (28) ಎಂದು ಗುರುತಿಸಲಾಗಿದೆ. ಗುರುವಾರ ಮನೆಯಲ್ಲಿ ಯಾರೂ ಇಲ್ಲದಾಗ ನೇಣು ಬಿಗಿದುಕೊಂಡು ಅಬ್ದುಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. [ಮುಖ್ಯಮಂತ್ರಿ ಸಾಂತ್ವನ-'ಹರೀಶ್' ಯೋಜನೆ ಬಗ್ಗೆ ತಿಳಿಯಿರಿ]

suicide

ಸಾಯುವ ಮುನ್ನ ಅಬ್ದುಲ್ ನನ್ನ ಸಾವಿಗೆ ನಾನೇ ಕಾರಣ, ನನ್ನ ಕಣ್ಣುಗಳನ್ನು ದಾನ ಮಾಡಿ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಅಬ್ದುಲ್ ಆಸೆಯನ್ನು ಕುಟುಂಬದವರು ನೆರವೇರಿಸಿದ್ದು, ಕಣ್ಣುಗಳನ್ನು ದಾನ ಮಾಡಿದ್ದಾರೆ. [ದೇಹ ಎರಡು ತುಂಡಾದರೂ ಕಣ್ಣು ದಾನ ಮಾಡಿ ಬೆಳಕಾದರು]

ಅಬ್ದುಲ್ ಅವರಿಗೆ ಹಲವು ದಿನಗಳಿಂದ ಹೊಟ್ಟೆ ನೋವು ಮತ್ತು ತಲೆ ನೋವಿನ ಸಮಸ್ಯೆ ಇತ್ತು. ಇದರಿಂದ ಬೇಸತ್ತಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಅದಕ್ಕೂ ಮೊದಲು ತಮ್ಮ ಅಂಗಾಂಗ ದಾನ ಮಾಡುವಂತೆ ಬರೆದಿಟ್ಟು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. [ಅಪಘಾತವಾದಾಗ ಜೀವ ಉಳಿಸಲು ನೆರವಾಗಿ]

English summary
28-year-old Abdul Vahab Doddamani donate his eyes after the death. Dharwad based Abdul committed suicide on April 14, 2016. In his death note he request the family members to donate his eyes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X