ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ: ಮಾಧ್ಯಮ ಕ್ಷೇತ್ರದಲ್ಲಿನ ಕ್ರಾಂತಿಗೆ ಇಂಟರ್ನೆಟ್ ಕಾರಣ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ,ಫೆಬ್ರವರಿ,06: ಕಳೆದ ಹತ್ತು ವರ್ಷಗಳಿಂದ ಅಂತರ್ಜಾಲ ವ್ಯವಸ್ಥೆಯಲ್ಲಿ ಭಾರೀ ಕ್ರಾಂತಿ ನಡೆದಿದ್ದು, ಮಾಧ್ಯಮ ಕ್ಷೇತ್ರದಲ್ಲಿ ತೀವ್ರ ಬೆಳವಣಿಗೆಯಾಗಿದೆ ಎಂದು ಹಿರಿಯ ಪತ್ರಕರ್ತ ಮತ್ತು ಮೀಡಿಯಾಸ್ಕೇಪ್ ಸಂಸ್ಥೆಯ ಮುಖ್ಯಸ್ಥ ಶೇಖರ ಗುಪ್ತಾ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಶನಿವಾರ ದೇಶಪಾಂಡೆ ಫೌಂಡೇಶನ್ ಆಯೋಜಿಸಿರುವ ಅಭಿವೃದ್ಧಿ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ಈ ಹಿಂದೆ ಸುದ್ದಿಗಾಗಿ ದಿನಪತ್ರಿಕೆಯನ್ನು ಅವಲಂಬಿಸಲಾಗಿತ್ತು. ಟಿವಿ ಬಂದ ಬಳಿಕ ಮನೆಯಲ್ಲಿ ಸುದ್ದಿಗಳನ್ನು ನೋಡುವಂತಾಯಿತು. ಇದೀಗ ಇಂಟರನೆಟ್ ನಿಂದ ಅಂಗೈಯಲ್ಲಿಯೇ ಸುದ್ದಿಗಳನ್ನು ನೋಡುವಂತಾಗಿದೆ. ತಾಂತ್ರಿಕತೆಯ ಈ ಕ್ರಾಂತಿಯಿಂದ ಸುದ್ದಿಗಳು ಕ್ಷಣಾರ್ಧದಲ್ಲಿ ಜಗತ್ತಿನಾದ್ಯಂತ ಹರಡುತ್ತಿವೆ ಎಂದು ವಿವರಿಸಿದರು.[ಹುಬ್ಬಳ್ಳಿಯಲ್ಲಿ ದೇಶಪಾಂಡೆ ಫೌಂಡೇಶನ್‌ನಿಂದ ಅಭಿವೃದ್ಧಿ ಮಂತ್ರ]

Hubballi

ಫೇಸ್ಬುಕ್, ಟ್ವಿಟರ್ ಮೂಲಕ ಜನರೇ ಸುದ್ದಿ ನೀಡುವಂತಾಗಿದ್ದಾರೆ. ಪತ್ರಿಕೋದ್ಯಮದಲ್ಲಿರುವ ಮೌಲ್ಯಗಳು ಎಲ್ಲ ನಾಗರಿಕರಲ್ಲಿಯೂ ಮೂಡುತ್ತಿದೆ. ಹಿಂದಿನ ಪತ್ರಕರ್ತರಿಗೂ ಇಂದಿನ ಈ ಇಂಟರನೆಟ್ ಯುಗದಲ್ಲಿನ ಪತ್ರಕರ್ತರಿಗೆ ಅಜಗಜಾಂತರ ವ್ಯತ್ಯಾಸವಿದೆ ಎಂದರು.[ಯಶಸ್ವಿ ಉದ್ಯಮಿ ಗುರುರಾಜ ದೇಶಪಾಂಡೆ ಸಂದರ್ಶನ]

ಈ ಸಂದರ್ಭದಲ್ಲಿ ಡಾ. ಮಾಧವ ಚವ್ಹಾಣ, ವೈದ್ಯಕೀಯ ಕ್ಷೇತ್ರದಿಂದ ಡಾ. ಆರ್. ವಿ. ರಮಣಿ, ಧನ ಫೌಂಡೇಶನ್ ನ ಎಂ. ಪಿ. ವಸಿಮಲೈ, ಸಚರ್್ ಸಂಸ್ಥೆಯ ಡಾ. ಅಭಯ ಬಂಗ ಪಾಲ್ಗೊಂಡಿದ್ದರು. ದೇಶಪಾಂಡೆ ಪೌಂಡೇಶನ್ನ ರಾಜ ಮೆಲವಿಲ್ಲೆ ಸಂವಾದ ನಿರ್ವಹಿಸಿದರು

English summary
Development dialogue programme started in Hubballi on Friday, February 06th
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X