ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಿಯಾಯಿತಿ ದರದಲ್ಲಿ ಸಿಟಿ ಮತ್ತು ಎಂಐಆರ್ ಸ್ಕ್ಯಾನಿಂಗ್ ವ್ಯವಸ್ಥೆ

By Vanitha
|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್, 26: ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಅತಿ ಶೀಘ್ರದಲ್ಲಿ ಸಿ.ಟಿ ಮತ್ತು ಎಂಐಆರ್ ಸ್ಕ್ಯಾನಿಂಗ್ ಸೇವೆ ಒದಗಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ಧರಿಸಿದ್ದು, ಮೊದಲು ಬೆಂಗಳೂರು, ಚಿತ್ರದುರ್ಗ ಜಿಲ್ಲೆಯಲ್ಲಿ ಮೊದಲು ಆರಂಭಗೊಳ್ಳಲಿದೆ.

ದೆಹಲಿಯ ಎಚ್ಎಲ್ಎಲ್ ಲೈಫ್ ಕೇರ್ ಲಿಮಿಟೆಡ್ ಸಂಸ್ಥೆಯ ಸಹಯೋಗದಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಸಿ.ಟಿ ಮತ್ತು ಎಂಆರ್ ಐ ಸ್ಕ್ಯಾನಿಂಗ್ ಯಂತ್ರಗಳನ್ನು ಆಸ್ಪತ್ರೆಗಳಲ್ಲಿಯೇ ಆಳವಡಿಸಲಾಗುತ್ತದೆ. ಜೊತೆಗೆ ರಿಯಾಯಿತಿ ದರದಲ್ಲಿ ದೊರೆಯುವ ಈ ಸೌಲಭ್ಯ ಬಡವರಿಗೆ ಬಹಳ ಅನುಕೂಲವಾಗಲಿದೆ.[ಬೆಂಗಳೂರಲ್ಲಿ ಹೃದಯ ಸಂಬಂಧಿ 3 ವಿಶೇಷ ಘಟಕ ಸ್ಥಾಪನೆ]

MIR scanning

ಖಾಸಗಿ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನಿಂಗ್ ಸುಮಾರು 2 ರಿಂದ 2.5 ಸಾವಿರ, ಎಂಐಆರ್ ಸ್ಕ್ಯಾನಿಂಗ್ 4 ರಿಂದ 8ಸಾವಿರ ನೀಡಬೇಕಾಗುತ್ತದೆ. ಈ ಹೊರೆಯನ್ನು ತಪ್ಪಿಸಿ ಬಿಪಿಲ್ ಪಡಿತರ ಚೀಟಿ ಹೊಂದಿದ ರೋಗಿಗಳು ಸೇರಿದಂತೆ ಪ್ರತಿಯೊಬ್ಬ ಬಡವರಿಗೂ ಸಹಾಯವಾಗಲೆಂದು ಈ ಯೋಜನೆ ಅನುಷ್ಟಾನಕ್ಕೆ ತರಲಾಗುತ್ತಿದೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಹೇಳಿದ್ದಾರೆ.[ಕ್ಯಾನ್ಸರ್, ಹೃದಯ ಸಂಬಂಧಿ ಔಷಧಿಗಳು ಕಡಿಮೆ ಬೆಲೆಯಲ್ಲಿ ಲಭ್ಯ]

ಸಿಟಿ ಹಾಗೂ ಎಂಆರ್ ಐ ಸ್ಕ್ಯಾನಿಂಗ್ ಯಂತ್ರಗಳನ್ನು ಖರೀದಿಸಿ ಪ್ರತ್ಯೇಕ ಸಿಬ್ಬಂದಿ ನೇಮಿಸಲಾಗುವುದು. ಡಿಸೆಂಬರ್ 27ರಂದು ನಡೆಯುವ ವಿಧಾನ ಪರಿಷತ್ ಚುನಾವಣೆ ಬಳಿಕ ಅಧಿಕೃತ ಆದೇಶ ಹೊರಬೀಳಲಿದೆ ಎಂದು ತಿಳಿಸಿದರು

English summary
CT and MRI scanning machine available with in few days in all district government hospital told by Health Minister UT Khader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X