ಹುಬ್ಬಳ್ಳಿಯಲ್ಲಿ ಯುವಕನಿಗೆ ಚಾಕು ಇರಿತ, ತಿಂಗಳಾಂತ್ಯಕ್ಕೆ 5ನೇ ಕೊಲೆ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ,ಮಾರ್ಚ್,31: ಯುವಕರ ನಡುವೆ ನಡೆದ ಸಣ್ಣ ವಾಗ್ವಾದ ದ್ವೇಷವಾಯ್ತು, ದ್ವೇಷವೂ ಕೊಲೆಯಲ್ಲಿ ಕೊನೆಯಾಗಿದೆ. ಈ ಘಟನೆಯು ನಗರದ ನಗರದ ಹೊಸೂರು ವೃತ್ತದ ಬಳಿ ನಡೆದಿದೆ. ಇದು ಒಂದೇ ತಿಂಗಳಲ್ಲಿ ನಡೆದ ಐದನೇ ಕೊಲೆಯಾಗಿದೆ.

ನಗರದ ಉಣಕಲ್ ಬಳಿಯ ಸಂತೆಬೈಲ್ ನಿವಾಸಿಯಾದ ಸಂತೋಷ ನರೋಟಿ (30) ಎಂಬಾತನೇ ಕೊಲೆಯಾದ ಯುವಕ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದ್ದು ಆರೋಪಿ ನವೀನ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.[ಡ್ರೈವಿಂಗ್ ಕಲಿಸಿದ ಯುವಕನೇ ಸುಂದರಿಯ ಹಂತಕ]

ಘಟನೆಯ ವಿವರ:

ನಗರದ ಉಣಕಲ್ ಬಳಿಯ ಸಂತೆಬೈಲ್ ನಿವಾಸಿಯಾದ ಸಂತೋಷ ಮತ್ತು ಹೊಸೂರು ಪ್ರದೇಶದ ಗೋಪಿ ಪರಶುರಾಮ ವಡ್ಡರ ಎಂಬಾತನ ಗುಂಪಿನವರೊಂದಿಗೆ ಕಳೆದ ನಾಲ್ಕು ತಿಂಗಳ ಹಿಂದೆ ವಾಗ್ವಾದ ನಡೆದಿತ್ತು.

ಈ ಸಮಯದಲ್ಲಿ ಗೋಪಿ ಗುಂಪಿನಲ್ಲಿದ್ದ ನವೀನ ಎಂಬಾತನ ಸಹೋದರನಿಗೆ ಹೊಡೆತ ಬಿದ್ದಿತ್ತು. ಇದರಿಂದ ರೊಚ್ಚಿಗೆದ್ದಿದ್ದ ನವೀನ ಕೊಲೆಗೀಡಾದ ಸಂತೋಷನನ್ನು ಕಂಡಾಗಲೆಲ್ಲ ನಿನ್ನನ್ನು ಸಾಯಿಸುತ್ತೇನೆ ಎಂದು ಪದೇ ಪದೇ ಹೇಳುತ್ತಿದ್ದನು. [ಗಂಡನ ವಿಕೃತ ಕಾಮಕ್ಕೆ ಬೇಸತ್ತು ಮಕ್ಕಳನ್ನೇ ಕೊಂದ ತಾಯಿ!]

ಬುಧವಾರ ಸಂತೋಷ ಎಂದಿನಂತೆ ತನ್ನ ಆಟೋ ಚಲಾಯಿಸುತ್ತ ಹೊಸೂರು ಪ್ರದೇಶಕ್ಕೆ ಬರುತ್ತಿದ್ದಂತೆ ಸಾರ್ವಜನಿಕರ ಎದುರೇ ನವೀನ ಸಂತೋಷನಿಗೆ ಚಾಕುವಿನಿಂದ ಹೊಟ್ಟೆ, ಕುತ್ತಿಗೆಗೆ ಬಲವಾಗಿ ಇರಿದಿದ್ದಾನೆ. ಗಾಯಗೊಂಡ ಸಂತೋಷನನ್ನು ಕಿಮ್ಸ್ ಆಸ್ಪತ್ರೆಗೆ
ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.[ಮದುವೆಗೆ ಒಪ್ಪದ ತಂದೆ-ತಾಯಿಯನ್ನು ಕೊಲ್ಲಿಸಿದ ಮಗ]

ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಕೊಲೆಯೊಂದಿಗೆ ಛೋಟಾ ಬಾಂಬೆ ಎಂದೇ ಖ್ಯಾತಿ ಹೊಂದಿದ ಹುಬ್ಬಳ್ಳಿಯಲ್ಲಿ ಐದನೇ ಕೊಲೆಯಾಗಿದೆ. ಈ ತಿಂಗಳಿನಲ್ಲಿ ಈ ಮೊದಲು ಹಾಡುಹಗಲೇ ನಾಲ್ಕು ಕೊಲೆಯಾಗಿದ್ದವು.

English summary
30 year old Sathosh Naroti died after knife attack in Hubballi on Thursday, March 31st. police have arrested accuse Naveen in Hubballi.
Please Wait while comments are loading...