ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂರೇ ಮೂರು ದಿನದಲ್ಲಿ ಹುಬ್ಬಳ್ಳಿ ಉಣಕಲ್ ಕೆರೆ ಸ್ವಚ್ಛ

By Madhusoodhan
|
Google Oneindia Kannada News

ಹುಬ್ಬಳ್ಳಿ, ಮೇ. 18: ನಗರದ ಉಣಕಲ್ ಕೆರೆಯಲ್ಲಿನ ಕಳೆಯನ್ನು ಮೂರು ದಿನಗಳೊಗಾಗಿ ತೆರವು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ತಿಳಿಸಿದರು.

ಬುಧವಾರ ಉಣಕಲ್ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕಳೆ ತೆಗೆದು ಸ್ವಚ್ಛ ಮಾಡಲು ಟೆಂಡರ್ ಕರೆಯಲಾಗಿದ್ದು, ಹೈದರಾಬಾದ್ ಮತ್ತು ಬೆಳಗಾವಿಯ ಕೆಲ ಕಂಪನಿಗಳು ಮುಂದೆ ಬಂದಿವೆ. ಸೂಕ್ತವಾದ ಕಂಪನಿಯನ್ನು ಆಯ್ಕೆ ಮಾಡಿಕೊಂಡು ಕಾಮಗಾರಿ ನೀಡಲಾಗುವುದು ಎಂದರು.[ಹುಬ್ಬಳ್ಳಿ : ಚರಂಡಿ ಸೇರುತ್ತಿರುವ ಕುಡಿಯುವ ನೀರು!]

hubballi

ಸದ್ಯ ಕೆರೆಗೆ ಕಲುಷಿತ ನೀರು ಮತ್ತು ಕೊಳಚೆ ನೀರು ಸೇರ್ಪಡೆಯಾಗುತ್ತಿದ್ದು, ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.[ಬೆಳ್ಳಂದೂರು ಕರೆ ಕತೆ ವ್ಯಥೆ]

ಇನ್ನು ಉಣಕಲ್ ಕೆರೆ ಅಭಿವೃದ್ಧಿಗಾಗಿ ಹಣದ ಅವಶ್ಯಕತೆ ಇದ್ದು, ಈ ಕುರಿತು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ರಾಜೇಂದ್ರ ಚೋಳಿನ್ ಮತ್ತಿತರರು ಕುಲಕರ್ಣಿ ಅವರ ಜತೆ ಇದ್ದರು.

English summary
Hubballi-Dharwad: District in-charge minister Vinay Kulkarni has instructed officials to ensure that the de-silting of lakes. The Unkal Lake will Clean up within three days Vinay Kulkarni said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X