ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಲ್ಮೀಕಿ ಜನಾಂಗಕ್ಕೆ ಪ್ರತ್ಯೇಕ ಮೀಸಲಾತಿ, ಅನುದಾನಕ್ಕೆ ಆಗ್ರಹ

ವಾಲ್ಮೀಕಿ ನಾಯಕ ಜನಾಂಗಗಳೂ ಕೂಡ ಪರಿಶಿಷ್ಟ ಪಂಗಡದಲ್ಲಿ ಬರುವುದರಿಂದ ಒಟ್ಟಾರೆ ಪರಿಶಿಷ್ಟ ಪಂಗಡಕ್ಕೆ ಸಿಗಬೇಕಾದ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯಲು ನೌಕರರು ಹಾಗೂ ಸಮಾಜದ ಎಲ್ಲಾ ಬಾಂಧವರು ಒಟ್ಟಾಗಿ ಹೋರಾಟ ಮಾಡಬೇಕು

By Mahesh
|
Google Oneindia Kannada News

ಹರಿಹರ, ಮಾರ್ಚ್ 23: ವಾಲ್ಮೀಕಿ ನಾಯಕ ಸಮಾಜಕ್ಕೆ ಸರ್ಕಾರವು ಪ್ರತ್ಯೇಕ ಮೀಸಲಾತಿ ನೀಡಿಲ್ಲ. ಪ್ರತ್ಯೇಕ ಅನುದಾನವನ್ನೂ ಸಹ ನೀಡಿಲ್ಲ. ವಾಲ್ಮೀಕಿ ನಾಯಕ ಜನಾಂಗಗಳೂ ಕೂಡ ಪರಿಶಿಷ್ಟ ಪಂಗಡದಲ್ಲಿ ಬರುವುದರಿಂದ ಒಟ್ಟಾರೆ ಪರಿಶಿಷ್ಟ ಪಂಗಡಕ್ಕೆ ಸಿಗಬೇಕಾದ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯಲು ನೌಕರರು ಹಾಗೂ ಸಮಾಜದ ಎಲ್ಲಾ ಬಾಂಧವರು ಒಟ್ಟಾಗಿ ಹೋರಾಟ ಮಾಡಬೇಕು ಎಂದು ಸಮುದಾಯದ ಮುಖಂಡರು ಹರಿಹರದಲ್ಲಿ ಕರೆ ನೀಡಿದ್ದಾರೆ.

ಹರಿಹರ ತಾಲ್ಲೂಕಿನ ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಪೀಠಾಧಿಪತಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ವಾಲ್ಮೀಕಿ ನಾಯಕ ಸಂಘಟನೆಗಳ ಮುಖಂಡರ ಸಭೆಯಲ್ಲಿ ಇಂಥದ್ದೊಂದು ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಮಾತನಾಡಿದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿಗಳು, ರಾಜ್ಯದಲ್ಲಿ ವಾಲ್ಮೀಕಿ ನಾಯಕ ಜನಸಂಖ್ಯೆ ನಾಲ್ಕನೇ ಸ್ಥಾನದಲ್ಲಿದೆ. ಜನಾಂಗದ ಶಾಸಕರೂ, ಲೋಕಸಭಾ ಸದಸ್ಯರು ಸೇರಿದಂತೆ 21 ಜನರಿದ್ದಾರೆ. ಐತಿಹಾಸಿಕ ಪರಂಪರೆಯುಳ್ಳ ವಾಲ್ಮೀಕಿ ನಾಯಕ ಜನಾಂಗದ ಸಂಘಟನೆಗಳು ಚದುರದೇ ಇನ್ನು ಮುಂದೆ ಒಗ್ಗಟ್ಟಾಗಿ ಸಂವಿಧಾನ ಬದ್ಧ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕೆಂದು ಕಿವಿಮಾತು ಹೇಳಿದರು. ಸಮಾಜದ ನೌಕರರು ತನು ಮನ ಧನದಿಂದ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕೆಂದರು.

Valmiki community leaders demand separate reservation and grant

ಕರ್ನಾಟಕ ವಾಲ್ಮೀಕಿ ನಾಯಕ ಪರಿಷತ್ತಿನ ಅಧ್ಯಕ್ಷ ಬಸವರಾಜ ನಾಯಕ ಮಾತನಾಡಿ, ರಾಜ್ಯದಲ್ಲಿ 60 ಲಕ್ಷಕ್ಕಿಂತಲೂ ಹೆಚ್ಚು ವಾಲ್ಮೀಕಿ ನಾಯಕ ಜನಸಂಖ್ಯೆ ಇದೆ. ಜನಸಂಖ್ಯೆನುಗುಣವಾಗಿ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ. ಸಂಘಟನೆಗಳು ಒಂದಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕೆಂದು ಕರೆ ನೀಡಿದರು.

ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ ಸೇರಿದಂತೆ ಸಮಾಜದ ಮುಖಂಡರುಗಳಾದ ಹರ್ತಿಕೋಟಿ ವೀರೇಂದ್ರ ಸಿಂಹ, ಮೃತ್ಯುಂಜಯ, ರಾಮಚಂದ್ರಪ್ಪ, ಯುವಪಡೆಯ ನಾರಾಯಣಸ್ವಾಮಿ, ಶಿವಾಜಿ ಬೀದರ್, ಡಾ.ಜಿ.ರಂಗಪ್ಪ, ಗುರು ಹುಲಿಕಲ್, ಮರಿಯಪ್ಪ ನಾಯಕ ಯಾದಗಿರಿ, ಚಿಕ್ಕಬಳ್ಳಾಪುರದ ಅಶೋಕನಾಯಕ, ದಾವಣಗೆರೆ ಜಿಲ್ಲಾಧ್ಯಕ್ಷ ಸಂತೋಷ್, ಕಾರ್ಯದರ್ಶಿ ರಾಮಚಂದ್ರಪ್ಪ, ಸದಾಶಿವ ನಾಯಕ, ಲೋಕೇಶ್ ಮತ್ತಿತರರು ಪಾಲ್ಗೊಂಡಿದ್ದರು.

English summary
Harihara: Valmiki community which is fourth largest in state belongs to Scheduled Tribe category in reservation list. But, leaders of this community demand a separate reservation and grant from the Government of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X