ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿರತೆಯಿಂದ ತಪ್ಪಿಕೊಳ್ಳುವ ಯತ್ನದಲ್ಲಿ ಬೋನಿನಲ್ಲಿ ಸಿಕ್ಕಿಬಿದ್ದ ಮೂವರು ಮಾಡಿದ್ದೇನು?

ದಾವಣಗೆರೆಯ ಹರಪ್ಪನಹಳ್ಳಿ ತಾಲೂಕಿನ ಕಡತಿ ಗ್ರಾಮದಲ್ಲಿ ಚಿರತೆಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಮೂವರು ಯುವಕರು ಬೋನಿನಲ್ಲಿ ಸಿಕ್ಕಿಕೊಂಡಿದ್ದಾರೆ. ಆ ನಂತರ ಗ್ರಾಮಸ್ಥರು ಬಂದು ರಕ್ಷಿಸಿದ್ದಾರೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ಹರಪನಹಳ್ಳಿ, ಮೇ 20 : ಈ ಘಟನೆ ಕೇಳುವುದಕ್ಕೇನೋ ಮಜವಾಗಿದೆ. ಆದರೆ ಆ ಸನ್ನಿವೇಶದಲ್ಲಿ ಸಿಕ್ಕಿಕೊಂಡವರ ಪರದಾಟವನ್ನು ಊಹಿಸಿಕೊಂಡರೂ ಗಾಬರಿಯಾಗುತ್ತದೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ? ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಡತಿ ಗ್ರಾಮದಲ್ಲಿ ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಮೂವರು ಯುವಕರು ಬೋನಿನಲ್ಲಿ ಸಿಕ್ಕಿಕೊಂಡಿದ್ದಾರೆ.

ಅದು ಯಾವ ಬೋನು ಅಂತೀರಿ, ಚಿರತೆಯನ್ನು ಕೆಡವಲು ಇಟ್ಟಿದ್ದ ಬೋನಿನಲ್ಲೇ ಈ ಮೂವರು ಸಿಕ್ಕಿಹಾಕಿಕೊಂಡಿದ್ದಾರೆ. ತಾಲೂಕು ಪಂಚಾಯಿತಿ ಸದಸ್ಯೆಯ ಬಾಳೆ ತೋಟಕ್ಕೆ ನೀರು ಹರಿಸಸುವುದಕ್ಕೆ ಅವರದೇ ಕುಟುಂಬ ಸದಸ್ಯರಾದ ಗೌಡ್ರ ಮಾಲತೇಶ್, ಗೌಡ್ರ ಕುಮಾರ್‌, ಗುರುಬಸವರಾಜ್ ಹೋಗಿದ್ದರು.[ಉಡುಪಿ: ಓಡೋಡಿ ಬಂದು ಬಾವಿಗೆ ಬಿದ್ದ ಕರಿ ಚಿರತೆ ರಕ್ಷಣೆ]

3 youths caught in cage while escaping from leopard

ಅಲ್ಲಿ ಚಿರತೆಗಳನ್ನು ಕಂಡವರೇ ಗಾಬರಿಯಿಂದ  ಓಡಿಹೋಗಿ ಸ್ವಲ್ಪ ದೂರದಲ್ಲಿ ಇಟ್ಟಿದ್ದ ಬೋನಿನ ಒಳಹೊಕ್ಕಿದ್ದಾರೆ. ಆದರೆ ಅಲ್ಲಿಂದ ಹೊರ ಬರಲು ಸಾಧ್ಯವಾಗದೆ ಕೊನೆಗೆ  ಗ್ರಾಮಸ್ಥರಿಗೆ ಮೊಬೈಲ್‌ ನಿಂದ ಕಾಲ್ ಮಾಡಿ, ವಿಷಯ ತಿಳಿಸಿದ್ದಾರೆ. ಆ ಬಳಿಕ ಆಯುಧಗಳ ಜತೆಗೆ ಗ್ರಾಮಸ್ಥರು ಸ್ಥಳಕ್ಕೆ ಬಂದಾಗ ಹೆದರಿದ ಚಿರತೆಗಳು ಕಾಡಿನತ್ತ ಓಡಿ ಹೋಗಿವೆ.[ದಾವಣಗೆರೆ: ಮೇಕೆ ಮರಿ ಹಿಡಿದ ಚಿರತೆಯನ್ನು ಜೀವಂತವಾಗಿ ಸುಟ್ಟರು]

ಕಬ್ಬು ಮತ್ತು ಬಾಳೆ ತೋಟದಲ್ಲಿ ಚಿರತೆಗಳ ಹೆಜ್ಜೆ ಗುರುತು ಪತ್ತೆಯಾಗಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಕೊಟ್ಟಿದ್ವಿ ಎಂದು ಗೌಡ್ರ ಜಗದೀಶ್ ಹೇಳಿದ್ದಾರೆ. ಆಹಾರ ಮತ್ತು ನೀರು ಅರಸಿ ಚಿರತೆಗಳು ಗ್ರಾಮಕ್ಕೆ ಬಂದಿವೆ. ಎರಡು ಮರಿಗಳು ಸೇರಿ ಮೂರು ಚಿರತೆಗಳು ಇರುವ ಮಾಹಿತಿ ಸಿಕ್ಕಿದೆ ಎಂದು ಅರಣ್ಯ ಇಲಾಖಾಧಿಕಾರಿ ಬಷೀರ್‌ ಅಹಮದ್‌ ಹೇಳಿದ್ದಾರೆ.

{promotion-urls}

English summary
3 youths caught in cage while escaping from leopard in Kadati village, Harapanahalli taluk, Davanagere district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X