ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಯಕನಹಟ್ಟಿ ತಿಪ್ಪೇಸ್ವಾಮಿ ಜಾತ್ರೆಯ ಚಿತ್ರವೈಭವ

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಶ್ರೀ ಗುರು ತಿಪ್ಪೇಸ್ವಾಮಿ ಜಾತ್ರೆ ಈ ಭಾಗದ ಹೆಸರಾಂತ ಬೃಹತ್ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ.

|
Google Oneindia Kannada News

ಫಾಲ್ಗುಣ ಮಾಸದ ಚಿತ್ತಾ ನಕ್ಷತ್ರದಲ್ಲಿ ಹಟ್ಟಿ ತಿಪ್ಪೇಶನ ರಥೋತ್ಸವವು ವಿಜೃಂಭಣೆಯಿಂದ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ, ಇದೇ 15.3.2017 ರಂದು ನಡೆದ ಸ್ವಾಮಿಯ ರಥೋತ್ಸವಕ್ಕೆ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಬಂದಿದ್ದರು.

ಸಾಂಪ್ರದಾಯಕವಾಗಿ ಅಲಂಕಾರಗೊಂಡ 80 ಟನ್ ತೂಕದ 80 ಅಡಿ ಎತ್ತರದ 9 ಮಜಲಿನ ದೊಡ್ಡ ರಥದಲ್ಲಿ ಉತ್ಸವ ಮೂರ್ತಿ ಯನ್ನು ಪ್ರತಿಷ್ಠಾಪಿಸಲಾಯಿತು.

ಪುಣ್ಯಸ್ಥಳದ ವಿಶೇಷ

ಪುಣ್ಯಸ್ಥಳದ ವಿಶೇಷ

ಇದೊಂದು ಬುಡಕಟ್ಟು ಸಾಂಪ್ರದಾಯದ ಜಾತ್ರೆ ಪ್ರತೀಕ. ಸುಮಾರು 400 ವರ್ಷಗಳ ಹಿಂದೆ ತಿಪ್ಪೇಸ್ವಾಮಿಯವರು ನಾಯಕನಹಟ್ಟಿಗೆ ಬಂದು ತಮ್ಮ ಅನೇಕ ಪವಾಡಗಳ ಮೂಲಕ ಜನರ ಮನಸ್ಸನ್ನು ಗೆದ್ದು ದೈವ ಪುರುಷರಾಗಿ ಬೆಳಗಿದ್ದಾರೆ.
ಜಾನಪದಗಳಲ್ಲಿ ಹೇಳುವಂತೆ ತಿಪ್ಪೇಸ್ವಾಮಿ ಏಳು ಪುರ, ಏಳು ಕೆರೆಗಳನ್ನು ಕಟ್ಟಿಸಿದ್ದಾರೆ. "ಮಾಡಿದಷ್ಟು ನೀಡು ಭಿಕ್ಷೆ "ಎಂದು ನುಡಿವ ಮೂಲಕ ಮಾಡಿದ ಕೆಲಸಕ್ಕೆ ತಕ್ಕ ಕೂಲಿ ಎಂಬ ತತ್ವ ಸಾರಿದ ತಿಪ್ಪೇಸ್ವಾಮಿಯವರ ಈ ನಿಯಮ ಅತ್ಯಂತ ಜನಪ್ರಿಯವಾದ ಮಾತಾಗಿದೆ..

ರೈತ ಸಮುದಾಯಕ್ಕೂ ಬೇಕಾದವರು

ರೈತ ಸಮುದಾಯಕ್ಕೂ ಬೇಕಾದವರು

ಕೆರೆ ಕಟ್ಟಡಗಳ ನಿರ್ಮಾಣ ಮಾಡುವ ಮೂಲಕವೇ ಜಲಕ್ರಾಂತಿಗೆ ನಾಂದಿಹಾಡಿದ , ಜಲ ಸಂಸ್ಕೃತಿಯ ಹರಿಕಾರ , ರೈತ ಸಮುದಾಯಕ್ಕೆ ಬೆನ್ನೆಲುಬಾಗಿ ನಿಂತ ಕ್ರಾಂತಿ ಪುರುಷ ಈ ತಿಪ್ಪೇಸ್ವಾಮಿಯವರು. ದಲಿತರ ಉದ್ದಾರಕ್ಕೆ ಶ್ರಮಿಸಿದ ಮಹಾನ್ ಚೇತನ.
ಹಟ್ಟಿ ತಿಪ್ಪೇಶ , ತಿಪ್ಪೇಸ್ವಾಮಿ ಎಂದೇ ಜನಮಾನಸದಲ್ಲಿ ನೆಲೆಯೂರಿರುವ ಇವರು ತಿಪ್ಪೇರುದ್ರಸ್ವಾಮಿ ಎಂಬ ಶಿಷ್ಟ ಹೆಸರನ್ನೂ ಪಡೆದಿದ್ದಾರೆ. ಈ ಪ್ರದೇಶದ ದೀನ ದಲಿತರ ಬಾಳಿನ ಆಶಾಕಿರಣವಾಗಿದ್ದಾರೆಂದು ಭಕ್ತ ಜನರು ನಂಬಿದ್ದಾರೆ.

ಪಾಳೆಗಾರರ ಬಳುವಳಿ

ಪಾಳೆಗಾರರ ಬಳುವಳಿ

ವಿಜಯನಗರ ಸಾಮ್ರಾಜ್ಯ ಪಥನವಾದ ನಂತರ ನಾಯಕನಹಟ್ಟಿಯ ಪಾಳೆಗಾರ ಬೋಡಿ ಮಲ್ಲಪ್ಪನಾಯಕ ತನ್ನ ಸಂಸ್ಥಾನದಲ್ಲಿ ತಿಪ್ಪೇಸ್ವಾಮಿಯವರಿಗೆ ಆಶ್ರಯ ನೀಡಿದ. ನಂತರ ತನ್ನ ಸಂಸ್ಥಾನದಲ್ಲಿ ತಿಪ್ಪೇಶನ ಮಾರ್ಗದರ್ಶನದಲ್ಲಿ ಜನೋಪಯೋಗಿ ಕೆಲಸ ಮಾಡಿರುವ ಕೆಲವು ಐತಿಹ್ಯಗಳಿವೆ ಎಂದು ಹೇಳಲಾಗಿದೆ.

ಆರಾಧನೆಗೆ ಎರಡು ಮಠಗಳು

ಆರಾಧನೆಗೆ ಎರಡು ಮಠಗಳು

ಇಲ್ಲಿ ಹೊರಮಠ ಹಾಗೂ ಒಳಮಠ ಸಂಭಂಧಿಸಿದ ಎರಡು ಆರಾಧನಾ ಸ್ಥಳಗಳಾಗಿದ್ದು, ಅವುಗಳನ್ನು ಹೊರಮಠ ಹಾಗೂ ಒಳಮಠ ಎಂದೇ ಹೆಸರಿಸಲಾಗಿದೆ.
ತಿಪ್ಪೇಸ್ವಾಮಿಗಳು ಜೀವಿತಾವಧಿಯಲ್ಲಿ ವಾಸವಾಗಿದ್ದ ಸ್ಥಳವು ಊರೊಳಗಿದ್ದು, ಅದನ್ನು ಒಳಮಠವೆಂದು ಕರೆಯುತ್ತಾರೆ.ಶೈವರು ಪೂಜಾರಿಗಳಾಗಿದ್ದಾರೆ.
ತಿಪ್ಪೇಸ್ವಾಮಿಗಳು ಜೀವಂತ ಸಮಾಧಿ ಹೊಂದಿದ್ದ ಸ್ಥಳವು ಊರಿಂದ ಹೊರಗಡೆ ಚಿಕ್ಕಕೆರೆ ಹತ್ತಿರ ಇದ್ದು, ಇದಕ್ಕೆ ಹೊರಮಠ ಎನ್ನುವರು. ಈ ಸಮಾಧಿ ಪೂಜೆಯನ್ನು ಅವರ ವಂಶೀಯರಾದ ಬೇಡರು ಪೂಜಿಸುವರು.

ದುಂಡು ಮೆಣಸು ಎರಚುವ ಪದ್ಧತಿ

ದುಂಡು ಮೆಣಸು ಎರಚುವ ಪದ್ಧತಿ

ಒಳಮಠದ ಗೋಪುರವು 50 ಅಡಿ ಎತ್ತರವಿದ್ದು, ಅತ್ಯಾಕರ್ಷಕವಾಗಿದೆ. ಒಳಮಠದ ಮುಂದೆ ಜಾತ್ರೆ ಸಂಧರ್ಭದಲ್ಲಿ ಬೃಹತ್ತಾದ ಅಗ್ನಿಕುಂಡದಲ್ಲಿ ಒಣಕೊಬ್ಬರಿಯ ಹೋಳುಗಳ ರಾಶಿಯನ್ನು ಸುಡುವುದು ರಾಜ್ಯದಲ್ಲಿಯೇ ವಿಶೇಷ ಆಚರಣೆಯಾಗಿದೆ.
ಈ ಆಚರಣೆಯ ಹಿಂದೆ ವಿಶಿಷ್ಟ ಕತೆಯೇ ಇದೆ. ತಿಪ್ಪೇಸ್ವಾಮಿಯವರು ಮೊದಲಿಗೆ ರಾಯದುರ್ಗದಿಂದ ನಾಯಕನಹಟ್ಟಿಗೆ ಬರುವಾಗ ರಾತ್ರಿ ಕತ್ತಲೆ ಆವರಿಸಿದ್ದು, ಫಣಿಯಪ್ಪನು ಒಣಕೊಬ್ಬರಿಗಳನ್ನು ಕೋಲುಗಳಿಗೆ ಸಿಕ್ಕಿಸಿ ಬೆಂಕಿಯಿಂದ ಹೊತ್ತಿಸಿ, ಆ ಬೆಳಕಿನಲ್ಲಿ ತಿಪ್ಪೇಸ್ವಾಮಿಯವರನ್ನು ಹಟ್ಟಿಗೆ ಕರೆತಂದರಂತೆ. ಆ ಕಾರಣಕ್ಕೆ ಇಂದಿಗೂ ತಿಪ್ಪೇಸ್ವಾಮಿ ಜಾತ್ರೆಯಲ್ಲಿ ಭಕ್ತರು ಒಣಕೊಬ್ಬರಿ ಸುಡುವ ಸಂಪ್ರದಾಯ ರೂಢಿಯಲ್ಲಿದೆ. ಅದೇ ರೀತಿ ದುಂಡು ಮೆಣಸು ಎರಚುವ ಸಂಪ್ರದಾಯವೂ ಇಲ್ಲಿ ಇರುತ್ತದೆ. ಹೊರಮಠವನ್ನು ಶ್ರೀ ತಿಪ್ಪೇಸ್ವಾಮಿ 'ಗದ್ದುಗೆ' ಎಂದು, ಒಳಮಠವನ್ನು ಶ್ರೀ ತಿಪ್ಪೇಸ್ವಾಮಿಯ 'ಮಠ'ವೆಂದು ಕರೆಯುತ್ತಾರೆ.

English summary
Renowned Jathre of Nayakanahatti of Chitradurga district held recently. Here is the history of Nayakanahatti. ನಾಯಕನಹಟ್ಟಿ ತಿಪ್ಪೇಸ್ವಾಮಿ ಜಾತ್ರೆಯ ಚಿತ್ರವೈಭವ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X