ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಸಿಲಿನ ಝಳದಿಂದ ಟೈರ್ ಗೆ ಬೆಂಕಿ: ಭಾಗಶಃ ಲಾರಿ ಭಸ್ಮ

|
Google Oneindia Kannada News

ಹಿರಿಯೂರು, ಮಾರ್ಚ್ 27: ಚಿತ್ರದುರ್ಗದ ಹಿರಿಯೂರು ಬಳಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಾಗುತ್ತಿದ್ದ ಲಾರಿಯೊಂದರ ಟೈರ್ ಗೆ ಬೆಂಕಿ ಹೊತ್ತಿಕೊಂಡಿದ್ದರಿಂದಾಗಿ ಲಾರಿಯ ಹಿಂಭಾಗ ಸುಟ್ಟು ಹೋಗಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಚಿತ್ರದುರ್ಗದಲ್ಲೆಲ್ಲೂ ಬಿಸಿಲಿನ ಬೇಗೆಯಿದೆ. ಬರಗಾಲದ ಊರೂ ಆಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಈಗ ಬಿಸಿಲಿನ ಬೇಗೆ ತಾಳಲಾರದಷ್ಟಿದೆ. ಹೆದ್ದಾರಿಗಳಲ್ಲೂ ಸಾಗುತ್ತಿದ್ದರೂ ಬಿಸಿ ಬಿಸಿ ಗಾಳಿ ಪ್ರಯಾಣಿಕರನ್ನು ಆವರಿಸುತ್ತಿದೆ.

ಇಂದ ಪರಿಸ್ಥಿತಿಯಿರುವ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಲಾರಿ ಹೊತ್ತಿ ಉರಿದಿದೆ.

Lorry tyres catches fire due to summer heat near Hiriyur

ಬೆಂಕಿ ಹೊತ್ತಿಕೊಂಡ ಕೂಡಲೆ ಲಾರಿಯಿಂದ ಕೆಳಗಿಳಿದ ಚಾಲಕ ಮತ್ತು ಕ್ಲೀನರ್

, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣಕ್ಕೆ ಬೆಂಕಿ ಆರಿಸಲು ಅವರಿಗೆ ನೀರೂ ಸಿಕ್ಕಿಲ್ಲವಾದ್ದರಿಂದ ಲಾರಿ ಹಿಂಭಾಗ ಸುಡುವುದನ್ನು ತಡೆಯಲ್ಲಿ ಅವರಿಗೆ ಸಾಧ್ಯವಾಗಿಲ್ಲ.

ನೆರವಿಗೆ ಬಾರದ ಸಿಬ್ಬಂದಿ
ಏತನ್ಮಧ್ಯೆ, ಬೆಂಕಿ ಹೊತ್ತಿಕೊಂಡ ಕೂಡಲೇ ಸ್ಥಳೀಯ ಪೊಲೀಸ್ ಹಾಗೂ ಅಗ್ನಿಶಾಮಕ ಠಾಣೆಗಳಿಗೆ ಸಂಪರ್ಕಿಸಿ, ವಿಚಾರ ಮುಟ್ಟಿಸಿದರೂ, ಯಾವುದೇ ಸಿಬ್ಬಂದಿ ಇವರ ನೆರವಿಗೆ ಆಗಮಿಸಲಿಲ್ಲ. ಇದು ಲಾರಿ ಚಾಲಕ, ಕ್ಲೀನರೇ ಸೇರಿದಂತೆ ಹೆದ್ದಾರಿಯಲ್ಲಿ ಸಾಗುತ್ತಿದ್ದ ಇತರ ವಾಹನ ಸವಾರರಿಗೆ ಬೇಸರ ತರಿಸಿತು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.

English summary
A lorry's rear part burnt completely when its rear Tyre catches fire while running on National Highway 4 on March 27th, 2017. The incident took place near Hiriyur Taluk, Chitradurga District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X