ದಲಿತರ ಮನೇಲಿ ಹೋಟೆಲ್ ತಿಂಡಿ! ಬಿಎಸ್ ವೈ ವಿರುದ್ಧ ಟೀಕೆ

Posted By:
Subscribe to Oneindia Kannada

ಚಿತ್ರದುರ್ಗ, ಮೇ 19: ಚಿತ್ರದುರ್ಗದ ದಲಿತ ನಾಯಕರ ಮನೆಯಲ್ಲಿ ತಿಂಡಿ ತಿಂದಿದ್ದಾಗಿ ತೋರ್ಪಡಿಸಿಕೊಳ್ಳುವ ಮೂಲಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ರಾಜ್ಯದ ದಲಿತರನ್ನು ಯಾಮಾರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಎಸ್ ಟಿ ಸೆಲ್ ಅಧ್ಯಕ್ಷ ಆಂಜಿನಪ್ಪ ಟೀಕಿಸಿದ್ದಾರೆ. ಆದರೆ ಈ ಆರೋಪವನ್ನು ಯಡಿಯೂರಪ್ಪ ಆಪ್ತ ಆನಂದ ರಾಜು ತಳ್ಳಿ ಹಾಕಿದ್ದಾರೆ.

ಶುಕ್ರವಾರ (ಮೇ 19) ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ಯಡಿಯೂರಪ್ಪ, ದಲಿತ ನಾಯಕರೊಬ್ಬರ ಮನೆಯಲ್ಲಿ ಬೆಳಗಿನ ಉಪಾಹಾರ ಸವಿದಿದ್ದರು. ಆದರೆ, ಈ ಉಪಹಾರ ಖಾಸಗಿ ಹೋಟೆಲ್ ನಿಂದ ತರಿಸಿದ್ದು, ಮನೆಯಲ್ಲಿ ತಯಾರಿಸಿದ್ದಲ್ಲ ಎಂಬುದಾಗಿ ಕಾಂಗ್ರೆಸ್ ಆರೋಪಿಸಿದೆ.

Hotel foot at Dalit home: Congress takes a dig against Yeddyurappa

ಇದೇ ವೇಳೆ, ಬರ ಅಧ್ಯಯನ ಹೆಸರಿನಲ್ಲಿ ರಾಜ್ಯ ಪ್ರವಾಸಕ್ಕೆ ಮುಂದಾಗಿರುವ ಬಿಜೆಪಿ ನಾಯಕರ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿರುವ ಕಾಂಗ್ರೆಸ್, ಮಳೆಗಾಲ ಹತ್ತಿರ ಬಂದಾಗ ಬಿಜೆಪಿಗೆ ಈಗ ಬರ ನೆನಪು ಕಾಡತೊಡಗಿದೆ ಎಂದು ಲೇವಡಿ ಮಾಡಿದೆ.

English summary
Karnataka Congress's SC, ST unit President Anjinappa takes a dig against former Chief Minister and State BJP President BS Yeddyurappa, saying that the breakfast which he had at a Dalit leader's home in Chitradurga on May 19, 2017, was of a private hotel, not a home-made. By eating hotel food at Dalit's house, BSY is trying to fool dalits of Karnataka, he alleged.
Please Wait while comments are loading...