ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ನೊಟೀಸ್ ಗೆ ಹೆದರಿ ಚಿತ್ರದುರ್ಗದ ರೈತ ಆತ್ಮಹತ್ಯೆ

By Sachhidananda Acharya
|
Google Oneindia Kannada News

ಚಿತ್ರದುರ್ಗ, ಜುಲೈ 10: ಬ್ಯಾಂಕ್ ನ ನೋಟಿಸ್ ಗೆ ಹೆದರಿ ಹೊಳಲ್ಕೆರೆ ತಾಲೂಕಿನ ಬೋರನಹಳ್ಳಿಯ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹೆಣ್ಣು ಮಕ್ಕಳ ಹೆಗಲಿಗೆ ನೊಗ ಹೊರಿಸಿದ ಬಡ ರೈತಹೆಣ್ಣು ಮಕ್ಕಳ ಹೆಗಲಿಗೆ ನೊಗ ಹೊರಿಸಿದ ಬಡ ರೈತ

48 ವರ್ಷದ ತಿಪ್ಪಯ್ಯ ಆತ್ಮಹತ್ಯೆ ಮಾಡಿಕೊಂಡ ರೈತರಾಗಿದ್ದಾರೆ. ಇವರು ತಮ್ಮ ಹೊಲದಲ್ಲಿದ್ದ ಪಂಪ್ ಸೆಟ್ ನ ವಿದ್ಯುತ್ ತಂತಿ ಹಿಡಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Farmer got suicide by holding the electric wire in Chitradurga

4 ಎಕರೆ ಜಮೀನು 8 ಲಕ್ಷ ಸಾಲ

ತಿಪ್ಪಯ್ಯನವರಿಗೆ ಒಟ್ಟು ನಾಲ್ಕು ಎಕರೆ ಜಮೀನಿದೆ. ಇದರಲ್ಲಿ ಅವರು ಅಡಿಕೆ ಬೆಳೆಯಲು ಇಲ್ಲಿನ ಸಮೀಪದ ಚಿತ್ರಹಳ್ಳಿಯ ವಿಜಯ ಬ್ಯಾಂಕ್ ಶಾಖೆಯಿಂದ 8 ಲಕ್ಷ ರೂಪಾಯಿ ಸಾಲವನ್ನು ಪಡೆದುಕೊಂಡಿದ್ದರು.

ಸಾಲ ಮನ್ನಾಕ್ಕೆ ಆಗ್ರಹ : ಜೋಶಿ ಮನೆಗೆ ಮುತ್ತಿಗೆ ಯತ್ನಸಾಲ ಮನ್ನಾಕ್ಕೆ ಆಗ್ರಹ : ಜೋಶಿ ಮನೆಗೆ ಮುತ್ತಿಗೆ ಯತ್ನ

ಈ ಸಾಲವನ್ನು ಮರು ಪಾವತಿ ಮಾಡಲು ತಿಪ್ಪಯ್ಯನವರಿಗೆ ಸಾಧ್ಯವಾಗಿರಲಿಲ್ಲ. ಇದರಿಂದ ಬ್ಯಾಂಕ್ ಅಧಿಕಾರಿಗಳು ಶನಿವಾರ ನೊಟೀಸ್ ನೀಡಿದ್ದಾರೆ ಎನ್ನಲಾಗಿದೆ. ಈ ನೊಟೀಸ್ ನೋಡಿದವರೆ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸ್ಥಳಕ್ಕೆ ಚಿತ್ರಹಳ್ಳಿ ಪೊಲೀಸರ ಭೇಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಸರಕಾರ ಸಹಕಾರ ಬ್ಯಾಂಕ್ ಗಳ ಸಾಲ ಮನ್ನಾ ಮಾಡಿಯೂ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಸಾಲ ಪಡೆದ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ವಿಪರ್ಯಾಸವಾಗಿದೆ.

English summary
A farmer got suicide by holding the electric wire when a bank threatened the notice to him. The incident took place at Boranahalli in Holalkere Taluk, Chitradurga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X