ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹದಾಯಿ ಹೋರಾಟಗಾರರಿಗೆ ಮುರುಘಾ ಶ್ರೀ ಆತಿಥ್ಯ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ,ಆಗಸ್ಟ್, 13: ಜೈಲಿನಿಂದ ಬಿಡುಗಡೆಯಾದ ಮಹದಾಯಿ ಹೋರಾಟಗಾರರಿಗೆ ಚಿತ್ರದುರ್ಗದ ಮುರುಘಾ ಶರಣರು ಚಿತ್ರದುರ್ಗದ ಕಲ್ಲಿನ ಕೋಟೆ ವೀಕ್ಷಣೆ ಮಾಡಿಸಿ ಸ್ವಗ್ರಾಮಗಳಿಗೆ ತೆರಳಲು ಬಸ್ ವ್ಯವಸ್ಥೆ ಮಾಡಿದ್ದಾರೆ.

ಮಹದಾಯಿ ಹೋರಾಟದ ವೇಳೆ ಬಂಧಿತರಾಗಿದ್ದ ಒಟ್ಟು 187 ರೈತರಲ್ಲಿ 57 ರೈತರು ಚಿತ್ರದುರ್ಗದ ಜೈಲಿನಲ್ಲಿದ್ದರು. ಉಳಿದವರು ಬಳ್ಳಾರಿ ಹಾಗೂ ಧಾರವಾಡ ಜೈಲಿನಲ್ಲಿದ್ದರು.[ಮಹದಾಯಿ ಹೋರಾಟಗಾರರಿಗೆ ಬಿಡುಗಡೆ ಭಾಗ್ಯ]

chitradurga

ಶುಕ್ರವಾರ ಧಾರವಾಡ ನ್ಯಾಯಾಲಯ ಎಲ್ಲ ರೈತರಿಗೂ( ತಾಂತ್ರಿಕ ಕಾರಣದಿಂದ ಇಬ್ರಾಹಿಂ ಸಾಬ್ ಹೊರತುಪಡಿಸಿ) ಜಾಮೀನು ನೀಡಿತ್ತು. ಶುಕ್ರವಾರ ರಾತ್ರಿ ಇವರ ಬಿಡುಗಡೆ ನಂತರ ಎಲ್ಲ ರೈತರನ್ನು ಮಠಕ್ಕೆ ಕರೆದೊಯ್ದು ಅಲ್ಲಿಯೇ ಊಟ ಮತ್ತು ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದ ಶರಣರು ಇಂದು ಬೆಳಗ್ಗೆ ಅವರಿಗೆ ಉಪಹಾರದ ನಂತರ ಕೋಟೆ ದರ್ಶನವನ್ನು ಮಾಡಿಸಿದ್ದಾರೆ.

ಕಳೆದ ವಾರ ಶ್ರೀ ಶರಣರು ಚಿತ್ರದುರ್ಗ ಕೇಂದ್ರ ಕಾರಾಗೃಹಕ್ಕೆ ತೆರಳಿ ಅಲ್ಲಿದ್ದ ಹೋರಾಟಗಾರರನ್ನು ಮಾತನಾಡಿಸಿ ಅವರಿಗೆ ಧೈರ್ಯ ತುಂಬಿದ್ದರು. ಬೆಳಗಿನ ಉಪಹಾರದ ನಂತರ ನವಲಗುಂದದ ಎಲ್ಲ ರೈತರಿಗೂ ಚಿತ್ರದುರ್ಗದ ಕಲ್ಲಿನ ಕೋಟೆಯ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟರು. ಬಸ್ ನೊಂದಿಗೆ ಮಠದಒಬ್ಬ ಪ್ರತಿನಿಧಿಯನ್ನು ಕೂಡ ಸ್ವಾಮೀಜಿ ಕಳುಹಿಸಿಕೊಟ್ಟಿದ್ದಾರೆ.[ಅಖಂಡ ಕರ್ನಾಟಕದಲ್ಲಿ ಮಹಾದಾಯಿ ಜಪ]

ಕೃತಜ್ಞತೆ ಸಲ್ಲಿಸಿದ ರೈತರು:
ಮುರುಘಾ ರಾಜೇಂದ್ರ ಬೃಹನ್ಮಠದ ಶ್ರೀ ಮುರುಘಾ ಶರಣದ ಈ ಮಾನವೀಯ ಗುಣಕ್ಕೆ ಮಾರು ಹೋದ ನವಲಗುಂದ ರೈತರು ಸ್ವಾಮೀಜಿಯವರಿಗೆ ಕೃತಜ್ಞತೆ ಸಲ್ಲಿಸಿದರು. ದೇ ವೇಳೆ ರೈತರಿಗೆ ಸಾಂತ್ವನ ಹೇಳಿದ ಸ್ವಾಮೀಜಿಗಳು ನಾವು ಸದಾ ನಿಮ್ಮೊಂದಿಗಿದ್ದೇವೆ, ನೀವು ಯಾವುದೇ ವಿಷಯದಲ್ಲಿ ಹೆದರಬಾರದು ಎಂದು ಅಭಯ ನೀಡಿದರು. [ನಮಗೇ ನೀರಿಲ್ಲ, ಇನ್ನು ತಮಿಳ್ನಾಡಿಗೆ ಎಲ್ಲಿಂದ ಬಿಡೋಣ?]

ಕುಡಿಯುವ ನೀರು ಕೇಳಿ ಆಕ್ರೋಶ ವ್ಯಕ್ತಪಡಿಸಿದ್ದ ರೈತರು ಜೈಲುವಾಸ ಅನುಭವಿಸಿ ಹೊರಕ್ಕೆ ಬಂದಿದ್ದಾರೆ. ಹೋರಾಟ ಮುಂದಿನ ದಿನಗಳಲ್ಲಿ ಯಾವ ದಿಕ್ಕನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಇತ್ತ ನ್ಯಾಯಾಧಿಕರಣದ ಮಧ್ಯಂತರ ತೀಪರ್ನ್ನು ಪ್ರಶ್ನೆ ಮಾಡಲು ರಾಜ್ಯ ಸರ್ಕಾರ ಕಾನೂನು ಪಂಡಿತರ ನೆರವನ್ನು ಪಡೆದುಕೊಳ್ಳಲು ಮುಂದಾಗಿದೆ. ಜಾರ್ಜ್ ಶೀಟ್ ಸಲ್ಲಿಕೆ ನಂತರ ರೈತರ ಮೇಲಿನ ಎಲ್ಲ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆದುಕೊಳ್ಳುತ್ತೇನೆ ಎಂದು ಸರ್ಕಾರ ಭರವಸೆ ನೀಡಿದೆ.

English summary
Chitradurga Muruga Matha seer Dr Shivamurthy swamiji blessed on the farmers released from Chitradurga jail, made arrangements to see historical fort. The 57 farmers, who are fighting for Mahadayi river were lodged in Chitradurga jail. Dharwad sessions court granted conditional bail to all the farmers on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X