ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರದುರ್ಗ : ಕೆಎಸ್ಆರ್‌ಟಿಸಿ ವೈಭವ್ ಬಸ್ ಜಪ್ತಿಗೆ ಆದೇಶ!

|
Google Oneindia Kannada News

ಚಿತ್ರದುರ್ಗ, ಆ.21 : ಕೆಎಸ್ಆರ್‌ಟಿಸಿಯ ಏಳು ವೈಭವ್ ಬಸ್ಸುಗಳನ್ನು ಜಪ್ತಿ ಮಾಡಲು ಚಿತ್ರದುರ್ಗ ನ್ಯಾಯಾಲಯ ಆದೇಶ ನೀಡಿದೆ. ಹಿಂದೆ ಇದೇ ಕೋರ್ಟ್‌ ಕೇಂದ್ರ ಸರ್ಕಾರದ ಅಧೀನದಲ್ಲಿರುವ ರೈಲನ್ನು ಜಪ್ತಿ ಮಾಡಲು ಆದೇಶ ಕೊಟ್ಟಿತ್ತು.

12 ವರ್ಷಗಳ ಹಿಂದೆ ಭರಮಸಾಗರ ಬಸ್ ನಿಲ್ದಾಣ ನಿರ್ಮಾಣ ಮಾಡಲು ಏಳು ರೈತರು ಭೂಮಿ ನೀಡಿದ್ದರು. ಭೂಮಿ ನೀಡಿದ ರೈತರಿಗೆ ಒಂದು ವರ್ಷದೊಳಗೆ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ಪರಿಹಾರ ಮಾತ್ರ ನೀಡಿರಲಿಲ್ಲ.

ರಾಜ್ಯದ ಎಲ್ಲ ಜಾತಿಯ ವಿದ್ಯಾರ್ಥಿಗಳಿಗೂ ಉಚಿತ ಬಸ್‌ ಪಾಸ್‌ರಾಜ್ಯದ ಎಲ್ಲ ಜಾತಿಯ ವಿದ್ಯಾರ್ಥಿಗಳಿಗೂ ಉಚಿತ ಬಸ್‌ ಪಾಸ್‌

ksrtc

ಸರ್ಕಾರ ಪರಿಹಾರ ನೀಡದಿರುವ ಕಾರಣ, ರೈತರು ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶಿವಣ್ಣ ಅವರು, 7 ಕೆಎಸ್ಆರ್‌ಟಿಸಿ ವೈಭವ್ ಬಸ್ಸುಗಳನ್ನು ಜಪ್ತಿ ಮಾಡಿ ರೈತರಿಗೆ ಪರಿಹಾರ ನೀಡಬೇಕು ಎಂದು ಸೋಮವಾರ ಆದೇಶ ನೀಡಿದರು.

ನವೆಂಬರ್‌ಗೆ ಹುಬ್ಬಳ್ಳಿ- ಚಿತ್ರದುರ್ಗ ಷಟ್ಪಥ ರಸ್ತೆ ಕಾಮಗಾರಿ ಆರಂಭನವೆಂಬರ್‌ಗೆ ಹುಬ್ಬಳ್ಳಿ- ಚಿತ್ರದುರ್ಗ ಷಟ್ಪಥ ರಸ್ತೆ ಕಾಮಗಾರಿ ಆರಂಭ

ಹಿಂದೆ ಇದೇ ನ್ಯಾಯಾಲಯ ಹರಿಹರ-ಬೆಂಗಳೂರು ಪ್ಯಾಸೆಂಜರ್ ರೈಲನ್ನು ಜಪ್ತಿ ಮಾಡಲು ಆದೇಶ ನೀಡಿತ್ತು. 25 ವರ್ಷಗಳು ಕಳೆದರೂ ರೈಲು ಮಾರ್ಗ ನಿರ್ಮಾಣಕ್ಕೆ ಜಾಗ ನೀಡಿದ ರೈತರಿಗೆ ಪರಿಹಾರ ವಿತರಣೆ ಮಾಡದ ಹಿನ್ನಲೆಯಲ್ಲಿ ಜಪ್ತಿ ಆದೇಶ ನೀಡಲಾಗಿತ್ತು.

English summary
Chitradurga district court on August 21, 2017 order for confiscation of KSRTC Vaibhav bus, because the KSRTC had failed to compensate farmers. The lands of seven farmers were taken to build Baramasagara bus stand 12 years ago but the compensation was not given until now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X