ಚಿತ್ರದುರ್ಗದಲ್ಲಿ ಭೀಕರ ಅಪಘಾತ, 12 ಸಾವು

Written by:
Subscribe to Oneindia Kannada

ಚಿತ್ರದುರ್ಗ, ಫೆಬ್ರವರಿ 19 : ಚಿತ್ರದುರ್ಗ ತಾಲೂಕಿನ ಮಾಡಗನಹಳ್ಳಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 12 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತುರುವನೂರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಶುಕ್ರವಾರ ಮುಂಜಾನೆ ಲಾರಿ ಮತ್ತು ಟಾಟಾ ಏಸ್ ವಾಹನದ ನಡುವೆ ಈ ಅಪಘಾತ ಸಂಭವಿಸಿದೆ. ಟಾಟಾ ಏಸ್‌ಗೆ ಡಿಕ್ಕಿ ಹೊಡೆದ ಲಾರಿ, ಅದರ ಮೇಲೆ ಉರುಳಿ ಬಿದ್ದಿದೆ. ಇದರಿಂದಾಗಿ ವಾಹನದಲ್ಲಿದ್ದ 12 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. [ದೇಹ ಎರಡು ತುಂಡಾದರೂ ಕಣ್ಣು ದಾನ ಮಾಡಿ ಬೆಳಕಾದರು]

road accident

ಮೃತಪಟ್ಟವರೆಲ್ಲರು ಚಿತ್ರದುರ್ಗ ತಾಲೂಕಿನ ಕ್ಯಾಸಾಪುರ ಮತ್ತು ಕೊಡಗವಳ್ಳಿ ಗ್ರಾಮದವರು ಎಂದು ತಿಳಿದುಬಂದಿದೆ. ಟಾಟಾ ಏಸ್ ವಾಹನದಲ್ಲಿ 11 ಪುರುಷರು ಮತ್ತು ಓರ್ವ ಮಹಿಳೆ ಇದ್ದರು. ಲಾರಿ ಚಾಲಕ ನವೀನ್ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. [ಅಪಘಾತದಲ್ಲಿ ಮೃತಪಟ್ಟ ಟೆಕ್ಕಿ ದೇಹ ಆಸ್ಪತ್ರೆಗೆ ದಾನ]

ಯುಪಿ 81 ಎಎಫ್ 5415 ಸಂಖ್ಯೆಯ ಲಾರಿ ಕಬ್ಬಿಣವನ್ನು ತುಂಬಿಕೊಂಡು ಚಿತ್ರದುರ್ಗ ನಗರದಿಂದ ಹೊಸಪೇಟೆ ಕಡೆಗೆ ಹೊರಟಿತ್ತು. ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದು ಅದರ ಮೇಲೆ ಉರುಳಿ ಬಿದ್ದಿದೆ. [ಕರಾಳ ಶುಕ್ರವಾರ, ಅಪಘಾತಕ್ಕೆ 18 ಬಲಿ]

ಮೃತಪಟ್ಟವರ ವಿವರ : ಮಂಜುನಾಥ್ (40), ನಾಗಣ್ಣ (45), ದುಗ್ಗಪ್ಪ (51), ಗಂಗಣ್ಣ (43), ಚೇತನ್ (10), ಕೊಲ್ಲಪ್ಪ (68), ಸುದೀಪ್ (17), ಮಂಜಣ್ಣ (61), ಕುಮಾರ್ (35), ತಿಪ್ಪೇಸ್ವಾಮಿ (45), ಗಂಗಮ್ಮ (60)

English summary
12 people were killed in Madaganahalli, Chitradurga district on Friday morning after their vehicle collided with a truck. Turuvanur police reached the spot.
Please Wait while comments are loading...