ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಪಿಎಸ್-ಶಶಿಕಲಾ ರಾಜ್ಯಪಾಲರ ಮುಂದೆ ಏನು ಹೇಳ್ತಾರೆ?

ಪನ್ನೀರ್ ಸೆಲ್ವಂ ಹಾಗೂ ಶಶಿಕಲಾ ನಟರಾಜನ್ ಇಬ್ಬರೂ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರನ್ನು ಭೇಟಿಯಾಗಲಿದ್ದಾರೆ. ಇಬ್ಬರೂ ತಮ್ಮ ಪರವಾಗಿ ಏನು ವಾದ ಮಾಡಿಸಬಹುದು? ಈ ವರದಿ ಓದಿ.

By ವಿಕಾಸ್ ನಂಜಪ್ಪ
|
Google Oneindia Kannada News

ಚೆನ್ನೈ, ಫೆಬ್ರವರಿ 9: ರಾಜ್ಯಪಾಲ ವಿದ್ಯಾಸಾಗರ್ ರಾವ್ ಗುರುವಾರ ಸಂಜೆ ನಿಗದಿ ಮಾಡಿರುವ ಸಭೆಯತ್ತ ತಮಿಳುನಾಡಿನ ಎಲ್ಲರ ಕಣ್ಣು ನೆಟ್ಟಿದೆ. ಹಂಗಾಮಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಹಾಗೂ ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕಿ ಶಶಿಕಲಾ ನಟರಾಜನ್ ಇಬ್ಬರನ್ನೂ ರಾಜ್ಯಪಾಲರು ಭೇಟಿ ಮಾಡಲಿದ್ದಾರೆ. ಪನ್ನೀರ್ ಸೆಲ್ವಂಗೆ ಸಂಜೆ 5ಕ್ಕೆ, ಶಶಿಕಲಾಗೆ ರಾತ್ರಿ 7.30ಕ್ಕೆ ರಾಜ್ಯಪಾಲರ ಭೇಟಿ ನಿಗದಿಯಾಗಿದೆ.

ಸರಕಾರ ರಚಿಸುವುದಕ್ಕೆ ಅಗತ್ಯ ಸಂಖ್ಯಾಬಲ ತಮಗೆ ಇರುವುದಾಗಿ ಶಶಿಕಲಾ ಅವರು ರಾಜ್ಯಪಾಲರಿಗೆ ಹೇಳಲಿದ್ದಾರೆ. ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡುವುದಕ್ಕೆ ಆಕೆಗೆ ಒಲವಿಲ್ಲ ಎಂದು ಮೂಲಗಳು ತಿಳಿಸಿವೆ. ತನ್ನನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ, ತನ್ನ ಬೆನ್ನಿಗೆ ದೊಡ್ಡ ಸಂಖ್ಯೆಯ ಶಾಸಕರಿದ್ದಾರೆ ಎಂದು ಅವರು ಹೇಳಲಿದ್ದಾರೆ.[ತಮಿಳ್ನಾಡು ಬೃಹನ್ನಾಟಕ : ರಾಜ್ಯಪಾಲರ ಮುಂದಿರುವ ಆಯ್ಕೆಗಳು]

What will OPS, Sasikala tell Governor Vidyasagar Rao

ಇದನ್ನೇ ಪತ್ರದ ಬರೆದು ತಿಳಿಸಿದ್ದೀನಿ. ಅದರೆ ಆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಲಿದ್ದಾರೆ. ಆದರೆ ಪನ್ನೀರ್ ಸೆಲ್ವಂ ವಿಧಾನಸಭೆಯಲ್ಲಿ ಬಲಾಬಲ ಪ್ರದರ್ಶನಕ್ಕಾಗಿ ರಾಜ್ಯಪಾಲರನ್ನು ಮನವಿ ಮಾಡಲಿದ್ದಾರೆ. ಆ ಸಂದರ್ಭದಲ್ಲಿ ಹಲವು ಶಾಸಕರು ತನ್ನನ್ನು ಬೆಂಬಲಿಸಲಿದ್ದಾರೆ ಎಂದು ಹೇಳಲಿದ್ದಾರೆ.

ಜೊತೆಗೆ ಶಶಿಕಲಾ ನಟರಾಜನ್ ಅವರು ಜನರ ಆಯ್ಕೆ ಆಗಿರಲಿಲ್ಲ, ಆದ್ದರಿಂದ ಸರಕಾರ ರಚಿಸುವುದಕ್ಕೆ ಅವಕಾಶ ನೀಡಬಾರದು ಎಂದು ಹೇಳಲಿದ್ದಾರೆ. ಈಗ ರಾಜ್ಯಪಾಲರ ಮುಂದೆ ಹಲವು ಆಯ್ಕೆಗಳಿವೆ. ಸಾಮಾನ್ಯವಾಗಿ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವಂತೆ ಸೂಚಿಸುತ್ತಾರೆ.[ಪನ್ನೀರ್ ಗೆ ಇದ್ದಕ್ಕಿದ್ದಂತೆ ಏನಾಯಿತು? ಯಾಕೆ ಹೀಗೆ ಆಡ್ತಿದ್ದಾರೆ?]

ಸುಪ್ರೀಂ ಕೋರ್ಟ್ ನಲ್ಲಿರುವ ಅಕ್ರಮ ಆಸ್ತಿ ಪ್ರಕರಣದ ತೀರ್ಪು ಬರುವವರೆಗೆ ಶಶಿಕಲಾ ಕಾಯಲಿ ಎಂದು ಕೂಡ ರಾಜ್ಯಪಾಲರ ಮನಸಿನಲ್ಲಿ ಇದೆ. ಇನ್ನು ತಮಿಳುನಾಡಿನ ರಾಜಕೀಯ ಹೈಡ್ರಾಮ ಗಮನಿಸುತ್ತಿರುವ ದೆಹಲಿಯಲ್ಲಿರುವ ನಾಯಕರು ಕೂಡ ಶಶಿಕಲಾ ಅವರಿಗೆ ತೀರ್ಪು ಬರುವವರೆಗೆ ಕಾಯುವಂತೆ ಸಲಹೆ ಕೊಟ್ಟಿದ್ದಾರೆ.

English summary
All eyes would be on the Governor of Tamil Nadu, Vidyasagar Rao who is scheduled to meet with both O Panneerselvam and Sasikala Natarajan on Thursday. While OPS is scheduled to meet with Rao at 5 pm, the meeting with Sasikala has been fixed for 7.30 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X