ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಜನಿಕಾಂತ್ ಒಬ್ಬ ಅನಕ್ಷರಸ್ಥ : ಮತ್ತೆ ಬಾಯಿಬಿಟ್ಟ ಸ್ವಾಮಿ

By Prasad
|
Google Oneindia Kannada News

ಚೆನ್ನೈ, ಜೂನ್ 24 : "ಸಾಕ್ಷರತೆಯೇ ರಾಜಕೀಯ ಸೇರಲು ಮಾನದಂಡವಾದರೆ, ನಿಮ್ಮ ಪಕ್ಷದಲ್ಲಿರುವ ಅರ್ಧಕ್ಕರ್ಧದಷ್ಟು ರಾಜಕಾರಣಿಗಳು ರಾಜಕೀಯದಲ್ಲಿಯೇ ಇರಬಾರದು" ಎಂದು ಟ್ವಿಟ್ಟಿಗರೊಬ್ಬರು ಸುಬ್ರಮಣಿಯನ್ ಸ್ವಾಮಿಗೆ ಸರಿಯಾಗಿ ಬಾರಿಸಿದ್ದಾರೆ.

ನಾನು ಅಪ್ಪಟ್ಟ ತಮಿಳಿಗ : ಸ್ವಾಮಿಗೆ ತಿರುಗೇಟು ಕೊಟ್ಟ ರಜನಿನಾನು ಅಪ್ಪಟ್ಟ ತಮಿಳಿಗ : ಸ್ವಾಮಿಗೆ ತಿರುಗೇಟು ಕೊಟ್ಟ ರಜನಿ

ಈ ರೀತಿ ಪ್ರತಿಕ್ರಿಯಿಸಲು ಕಾರಣ, ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪಡೆದು ಬಂದಿರುವ, ವಿವಾದಗಳನ್ನು ಮೈಹೊದಿಕೆಯಷ್ಟೇ ಸಲೀಸಾಗಿ ಹೊದ್ದುಕೊಳ್ಳುವ ಬಿಜೆಪಿ ನಾಯಕ ಡಾ. ಸುಬ್ರಮಣಿಯನ್ ಸ್ವಾಮಿಯವರು ರಜನಿಕಾಂತ್ ಕುರಿತಂತೆ ನೀಡಿರುವ ಮತ್ತೊಂದು ಹೇಳಿಕೆ.

77 ವರ್ಷದ ಆರ್ಥಿಕ ನಿಪುಣ ಡಾ. ಸುಬ್ರಮಣಿಯನ್ ಸ್ವಾಮಿ ಹೇಳಿರುವುದೇನೆಂದರೆ, "ರಜನಿಕಾಂತ್ ಒಬ್ಬ ಅನಕ್ಷರಸ್ಥ, ಅವರು ರಾಜಕೀಯ ಸೇರಲು ಅನರ್ಹರು" ಎಂದು ಮಾಧ್ಯಮಗಳ ಮುಂದೆ ಬಡಬಡಿಸಿರುವುದು.

ಬೆಂಗಳೂರಿನ ಮರಾಠಿಗ ರಜನಿಗೆ ರಾಜಕೀಯದಲ್ಲಿ ಸೋಲು ಗ್ಯಾರಂಟಿ: ಸ್ವಾಮಿಬೆಂಗಳೂರಿನ ಮರಾಠಿಗ ರಜನಿಗೆ ರಾಜಕೀಯದಲ್ಲಿ ಸೋಲು ಗ್ಯಾರಂಟಿ: ಸ್ವಾಮಿ

ರಜನಿಕಾಂತ್ ಅವರು ಸೆಪ್ಟೆಂಬರ್ ನಲ್ಲಿ ರಾಜಕೀಯಕ್ಕೆ ಧುಮುಕುವ ವಿಷಯವನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂಬ ವರ್ತಮಾನ ಬರುತ್ತಿದ್ದಂತೆ, ಸುಬ್ರಮಣಿಯನ್ ಸ್ವಾಮಿಯವರು ತಮ್ಮ ಬಾಯಿಗೆ ಹಾಕಿಕೊಂಡಿದ್ದ ಬೀಗವನ್ನು ಮತ್ತೆ ತೆರೆದಿದ್ದಾರೆ.

ಈ ಹೇಳಿಕೆಗೆ ವಿರುದ್ಧವಾಗಿ ರಜನಿಕಾಂತ್ ಅಭಿಮಾನಿಗಳನ್ನು ಸುಬ್ರಮಣಿಯನ್ ಸ್ವಾಮಿಯವರನ್ನು ಹಾಕಿಕೊಂಡು ರುಬ್ಬುತ್ತಿದ್ದಾರೆ.

ಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ.

ರಾಜಕೀಯ ಸೇರಲು ಸಾಕ್ಷರತೆಯೇ ಮಾನದಂಡವೆ? ಹಾಗಿದ್ರೆ ನಿಮ್ಮ ಪಕ್ಷದ ಅರ್ಧಕ್ಕರ್ಧ ರಾಜಕಾರಣಿಗಳು ಅನರ್ಹರಾಗುತ್ತಾರೆ. ರಾಜೀವ್ ಗಾಂಧಿಯವರ ಹತ್ಯೆಯ ನಂತರ ಇವರನ್ನು ಕಾಂಗ್ರೆಸ್ ಪಕ್ಷ ಯಾವ ಪರಿ ಒದ್ದಿದೆಯೆಂದರೆ, ಅವರು ತಮ್ಮ ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡಿದ್ದಾರೆ.

Array

ಸಂವಿಧಾನವನ್ನು ಇನ್ನೊಮ್ಮೆ ಓದಿ ಸ್ವಾಮಿಗಳೆ

ರಾಜಕೀಯವೆಂದರೆ ಬರೀ ಎಂಎಲ್ಎ ಅಥವಾ ಎಂಪಿ ಆಗುವುದಲ್ಲ. ರಾಜಕೀಯವೆಂದರೆ ಜನರ ಪ್ರಾತಿನಿಧಿತ್ವ ವಹಿಸುವುದು. ಸಂವಿಧಾನವನ್ನು ಮತ್ತೊಮ್ಮೆ ಕೂಲಂಕಷವಾಗಿ ಓದಿರಿ, ಇನ್ನೊಂದಿಷ್ಟು ಜ್ಞಾನವನ್ನು ಸಂಪಾದಿಸಿರಿ.

ಇದಪ್ಪ ನಿಜವಾದ ಡೆಮಾಕ್ರಸಿಯೆಂದರೆ

ಇದಪ್ಪ ನಿಜವಾದ ಡೆಮಾಕ್ರಸಿಯೆಂದರೆ. ಒಂದೆಡೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ರಜನಿಕಾಂತ್ ಅವರು ರಾಜಕೀಯಕ್ಕೆ ಬರಬೇಕೆಂದು ಹಂಬಲಿಸುತ್ತಿದ್ದರೆ, ಮತ್ತೊಂದೆಡೆ ಸುಬ್ರಮಣಿಯನ್ ಸ್ವಾಮಿಯಂಥವರು ಶರಂಪರ ವಿರೋಧಿಸುತ್ತಿದ್ದಾರೆ.

ರಜನಿ ಬಗ್ಗೆ ಹೀಗೆ ಹೇಳುತ್ತಿರುವುದು ನಾಚಿಕೆಗೇಡಿನದು

ಸುಬ್ರಮಣಿಯನ್ ಸ್ವಾಮಿಯಂಥ ರಾಜಕಾರಣಿಗಳು ತಮಿಳುನಾಡಿಗಾಗಿ ನೈಯಾಪೈಸೆಯಷ್ಟು ಸೇವೆಯನ್ನೂ ಮಾಡಿಲ್ಲದಿರುವುದು ದುರಾದೃಷ್ಟಕರ. ಈಗ ತಮ್ಮನ್ನು ತಾವು ತಮಿಳಿಗ ಎಂದು ಹೇಳಿಕೊಳ್ಳುತ್ತಿರುವುದು ನಾಚಿಕೆಗೇಡಿನದು. ಅಲ್ಲದೆ, ರಜನಿಕಾಂತ್ ಬಗ್ಗೆ ಅನಗತ್ಯವಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ಓದಿ ಕಡೆದು ಕಟ್ಟೆ ಹಾಕಿದ್ದಾದರೂ ಏನು?

ನೀವು ಇಷ್ಟೊಂದು ಓದಿ ಕಡೆದು ಕಟ್ಟೆ ಹಾಕಿದ್ದಾದರೂ ಏನು? ಈ ನಿಮ್ಮ ಅಸಂಬದ್ಧ ಹೇಳಿಕೆಯಿಂದ ಎಲ್ಲಕ್ಕಿಂತ ಹೆಚ್ಚು ದುಃಖಿಗಳಾಗುವುದು ಉಮಾ ಭಾರತಿ, ಸಾಕ್ಷಿ ಮಹಾರಾಜ್ ಮತ್ತು ಸಾಧ್ವಿ ನಿರಂಜನ್ ಜ್ಯೋತಿಯಂಥವರಿಗೆ

English summary
Tweeple lambast Dr Subramanian Swamy for commenting on Rajinikanth again. He had said, Rajinikanth is illiterate and is unfit for politics. Rajinikanth is likely to announce his joining or not joining politics in September or October.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X