ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಲ್ಲಿಕಟ್ಟು ಬೇಡ್ವ, ಮಾಂಸ ಸೇವನೆ ನಿಷೇಧಿಸಿ, ಟ್ವೀಟ್ಸ್

ಪ್ರಾಣಿಗಳಿಗೆ ಹಿಂಸೆ ನೀಡುವ ಆಚರಣೆ ಬೇಡ ಎಂದು ಪರಿಸರ ಹಾಗೂ ಪ್ರಾಣಿ ಪ್ರಿಯ ಸಂಘಟನೆಗಳು ಕಾನೂನು ಸಮರ ನಡೆಸುತ್ತಿವೆ. ಈ ನಡುವೆ ಸುಪ್ರೀಂಕೋರ್ಟ್ ನಿಷೇಧ ಮುಂದುವರೆಯಲಿ ಎಂದಿದ್ದು, ತಮಿಳುನಾಡಿನಾಡಿನಲ್ಲಿ ಕಿಚ್ಚು ಹಬ್ಬಿಸಿದೆ.

By Mahesh
|
Google Oneindia Kannada News

ಚೆನ್ನೈ, ಜನವರಿ 13: ಪೊಂಗಲ್(ಸಂಕ್ರಾಂತಿ) ಹಬ್ಬದ ಮುಖ್ಯ ಭಾಗವಾದ "ಜಲ್ಲಿಕಟ್ಟು" ಅಥವಾ "ಮಂಜು ವೀರಟ್ಟು" ಸಾಹಸ ಪ್ರಧಾನ ರೋಮಾಂಚನಕಾರಿ ಆಟವಾಗಿದೆ. ಪ್ರಾಣಿಗಳಿಗೆ ಹಿಂಸೆ ನೀಡುವ ಆಚರಣೆ ಬೇಡ ಎಂದು ಪರಿಸರ ಹಾಗೂ ಪ್ರಾಣಿ ಪ್ರಿಯ ಸಂಘಟನೆಗಳು ಕಾನೂನು ಸಮರ ನಡೆಸುತ್ತಿವೆ. ಈ ನಡುವೆ ಸುಪ್ರೀಂಕೋರ್ಟ್ ನಿಷೇಧ ಮುಂದುವರೆಯಲಿ ಎಂದಿದ್ದು, ತಮಿಳುನಾಡಿನಾಡಿನಲ್ಲಿ ಕಿಚ್ಚು ಹಬ್ಬಿಸಿದೆ.

ಮಕರ ಸಂಕ್ರಾಂತಿಗೂ ಮುನ್ನ ಜಲ್ಲಿ ಕಟ್ಟು ಕುರಿತ ಪ್ರಕರಣದ ಆದೇಶ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಈ ಮೂಲಕ ಜಲ್ಲಿಕಟ್ಟು ವಿರುದ್ಧದ ನಿಷೇಧ ಮುಂದುವರೆಯಲಿದೆ ಎಂದು ಸುಪ್ರೀಂಕೋರ್ಟ್ ಗುರುವಾರ ಸ್ಪಷ್ಟಪಡಿಸಿತ್ತು. ಕೇಂದ್ರ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿ ಡಿಎಂಕೆ ಸೇರಿದಂತೆ ಅನೇಕ ಪಕ್ಷಗಳು ಪ್ರತಿಭಟನೆ ನಡೆಸಿವೆ. [ಜಲ್ಲಿಕಟ್ಟು ನಿಷೇಧ ಮುಂದುವರೆಯಲಿದೆ, ತ್ವರಿತ ಆದೇಶ ಸಾಧ್ಯವಿಲ್ಲ]

ಭಾನುವಾರದಂದು ಪೊಂಗಲ್(ಮಕರ ಸಂಕ್ರಾಂತಿ) ಹಾಗೂ ಜಲ್ಲಿಕಟ್ಟು ಆಚರಣೆಗೆ ತಮಿಳುನಾಡಿನಲ್ಲಿ ಸಿದ್ಧತೆ ನಡೆಸಲಾಗಿದೆ. ತಮಿಳುನಾಡಿನ ಜನಪ್ರಿಯ ಗೂಳಿಯ ಕಾಳಗವಾದ ಜಲ್ಲಿಕಟ್ಟು ಸಾಹಸ ಕ್ರೀಡೆಗೆ ಇರುವ ಕಾನೂನು ತೊಡಕುಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಬೇಕೆಂದು ಎಐಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರದ ಮುಖೇನ ಆಗ್ರಹಪೂರ್ವಕ ಮನವಿ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಜಲ್ಲಿಕಟ್ಟು ಪರ ವಿರೋಧ ಟ್ವೀಟ್ ಗಳು ಇಲ್ಲಿವೆ...

ಪರಂಪರೆಯಲ್ಲಿ ಜಲ್ಲಿಕಟ್ಟು ಹಾಸು ಹೊಕ್ಕಿದೆ

ಪರಂಪರೆಯಲ್ಲಿ ಜಲ್ಲಿಕಟ್ಟು ಹಾಸು ಹೊಕ್ಕಿದೆ

ತಮಿಳುನಾಡಿನ ಪರಂಪರೆಯಲ್ಲಿ ಜಲ್ಲಿಕಟ್ಟು ಹಾಸು ಹೊಕ್ಕಿದೆ. ಹಬ್ಬದ ಸಂದರ್ಭದಲ್ಲಿ ಬೇಕಾದ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಜಲ್ಲಿ ಕಟ್ಟು ಕ್ರೀಡೆಯಿಂದ ಪ್ರಾಣಿಗಳಿಗೆ ಹಾನಿಯಾಗುವುದಿಲ್ಲ ಎಂದು ತಮಿಳುನಾಡು ಸರ್ಕಾರದಿಂದ ಭರವಸೆ ನೀಡಿದೆ.

 ಗೂಳಿಗಳಿಗೆ ಹಿಂಸೆ ನೀಡಲಾಗಿಲ್ಲ

ಗೂಳಿಗಳಿಗೆ ಹಿಂಸೆ ನೀಡಲಾಗಿಲ್ಲ

ಕ್ರೀಡೆಯಲ್ಲಿ ಪಾಲ್ಗೊಂಡಿದ್ದ ಗೂಳಿಗಳಿಗೆ ಹಿಂಸೆ ನೀಡಲಾಗಿಲ್ಲ ಮತ್ತು ಮಾದಕ ವಸ್ತು ತಿನ್ನಿಸಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಅಧಿಕಾರಿಗಳು ಅವುಗಳ ಆರೋಗ್ಯ ತಪಾಸಣೆ ನಡೆಸಿ ಸುಪ್ರೀಂ ಕೋರ್ಟ್ ನಿರ್ದೇಶನ ಮತ್ತು ಜಲ್ಲಿಕಟ್ಟು ನಿಯಂತ್ರಣ ಕಾಯಿದೆಯನ್ವಯ ಜಲ್ಲಿಕಟ್ಟು ಸ್ಪರ್ಧೆಗೆ ಚಾಲನೆ ನೀಡಲಾಗುತ್ತದೆ.

ಡಿಎಂಕೆ ಪ್ರತಿಭಟನೆ

ಜಲ್ಲಿಕಟ್ಟು ನಿಷೇಧಕ್ಕೆ ಕುರಿತಂತೆ 2014ರಲ್ಲಿ ಸುಪ್ರೀಂಕೋರ್ಟ್ ನೀಡಿದ ಆದೇಶದಂತೆ ಕಳೆದ ವರ್ಷ ಕೂಡಾ ಸುಪ್ರೀಂಕೋರ್ಟಿನ ವಿಭಾಗೀಯ ಪೀಠ ಜಲ್ಲಿಕಟ್ಟು ಆಚರಣೆ ಮಾಡದಂತೆ ತಡೆ ನೀಡಿತ್ತು. ಆದರೆ, ಈ ವರ್ಷ ಸುಪ್ರೀಂಕೋರ್ಟ್ ನಿಷೇಧ ಮುಂದುವರೆಯಲಿ ಎಂದಿದ್ದು, ತಮಿಳುನಾಡಿನಾಡಿನಲ್ಲಿ ಕಿಚ್ಚು ಹಬ್ಬಿಸಿದೆ.

ಗುಜರಾತ್ ಗಾಳಿಪಟ ನಿಷೇಧಿಸಿ

ಗುಜರಾತಿನಲ್ಲಿ ಗಾಳಿಪಟ ಸ್ಪರ್ಧೆ ನಿಷೇಧಿಸಿ, ಮಾಂಜಾದಿಂದ ಎಷ್ಟೋ ಹಕ್ಕಿಗಳು ಸಾವನ್ನಪ್ಪಿವೆ.

ಮಡಗಾಸ್ಕರ್ ನ ನೋಟ್ ನೋಡಿ

ಮಡಗಾಸ್ಕರ್ ನ ನೋಟ್ ನೋಡಿ, ಗೂಳಿ ಏಕೆ ಬಂದಿದೆ ಹೇಳಿ

ಮಾಂಸ ಸೇವನೆ ನಿಷೇಧಿಸಿ

ಮಾಂಸ, ಮೀನು ಸೇವನೆ ನಿಷೇಧಿಸಿ, ಪ್ರಾಣಿ ಹಿಂಸೆ ಮಹಾ ಪಾಪ.

ಕುದುರೆ ರೇಸ್ ನಿಷೇಧಿಸಿ

ಜಲ್ಲಿಕಟ್ಟು ಬೇಡ ಎನ್ನುವುದಾದರೆ , ಕುದುರೆ ರೇಸ್ ನಿಷೇಧಿಸಿ

ಜಲ್ಲಿಕಟ್ಟು ಅಪಾಯಕಾರಿ?

ಪೊಂಗಲ್(ಸಂಕ್ರಾಂತಿ) ಹಬ್ಬದ ಮುಖ್ಯ ಭಾಗವಾದ "ಜಲ್ಲಿಕಟ್ಟು" ಅಥವಾ "ಮಂಜು ವೀರಟ್ಟು" ಸಾಹಸ ಪ್ರಧಾನ ರೋಮಾಂಚನಕಾರಿ ಆಟದ ಝಲಕ್ ನೋಡಿ...

English summary
The Supreme Court on Thursday dismissed a petition seeking its intervention to pass an order on Jallikattu before Saturday. #Jallikattu is our tradition, but centre and state government have failed to get us the permission to conduct it: DMK's MK Stalin (ANI) Here are the twitter reaction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X