ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಹುದ್ದೆಯ ಮೇಲೆ ಲಿಂಗ ಪರಿವರ್ತಿತೆಯ ಕಣ್ಣು

By Vanitha
|
Google Oneindia Kannada News

ಚೆನ್ನೈ, ಆಗಸ್ಟ್, 05 : ಮೊದಲಿಂದಲೂ ಪೊಲೀಸ್ ಹುದ್ದೆ ಏನಿದ್ದರೂ ಪುರುಷರು ಮಾತ್ರ ನಿಭಾಯಿಸುವ ಕಾಯಕ ಎಂಬ ಕಾಲ ಇತ್ತು. ಆದರೆ ದಿನಗಳೆದಂತೆ ಮಹಿಳೆಯರು ಈ ಕ್ಷೇತ್ರದತ್ತ ಮುಖ ಮಾಡಿ ನಿಂತರು. ಇತ್ತೀಚೆಗೆ ಲಿಂಗ ಪರಿವರ್ತನಾದಾರರು ಸಹ ಪೊಲೀಸ್ ಹುದ್ದೆ ಅಲಂಕರಿಸಲು ಉತ್ಸಾಹ ತೋರಿದ್ದಾರೆ.

ನಗರದ ರಾಜರಥಿನಮ್ ಕ್ರೀಡಾಂಗಣ ಇದಕ್ಕೆ ಸಾಕ್ಷಿಯಾಗಿದ್ದು, ಇಲ್ಲಿ ಮಂಗಳವಾರ ನಡೆದ ಸಬ್ ಇನ್ಸ್ ಪೆಕ್ಟರ್ ಹುದ್ದೆಯ ದೈಹಿಕ ಪರೀಕ್ಷೆಗೆ ಹಾಜರಾದ ಲಿಂಗಪರಿವರ್ತನಾಧಾರಿಣಿ ಪ್ರೀತಿಕಾ ಯಶಿನಿ ಒಂದು ನಿಮಿಷ ಐವತ್ತು ಸೆಕೆಂಡುಗಳಲ್ಲಿ 400ಮೀ ಕ್ರಮಿಸಿ ಎಲ್ಲರ ಗಮನ ಸೆಳೆದಿದ್ದಾಳೆ.[246 ಕಾನ್ಸ್ ಟೇಬಲ್ ಹುದ್ದೆಗಳ ಭರ್ತಿಗೆ ಅಧಿಸೂಚನೆ]

Transwoman hopes to don khaki uniform in Chennai

ಪ್ರಾರಂಭದಲ್ಲಿ ಈಕೆಯ ಶೈಕ್ಷಣಿಕ ಅಂಕಪಟ್ಟಿಗಳಲ್ಲಿ ಹುಡುಗನ ಹೆಸರು ಇರುವುದನ್ನು ಗಮನಿಸಿದ ಆಯ್ಕೆ ಪ್ರಕ್ರಿಯೆ ಸಿಬ್ಬಂದಿ ಪ್ರೀತಿಕಾಳ ಅರ್ಜಿಯನ್ನು ತಿರಸ್ಕರಿಸಿದ್ದರು. ಇದರಿಂದ ಧೃತಿಗೆಡದ ಈಕೆ ಅಂಕಪಟ್ಟಿಯಲ್ಲಿ ಹೆಸರು ಬದಲಿಸಬೇಕೆಂದು ಮದ್ರಾಸ್ ಹೈಕೋರ್ಟ್ ಮೋರೆ ಹೋಗಿದ್ದಳು.

ಈಕೆಯ ಮನವಿಯನ್ನು ಸ್ವೀಕರಿಸಿ, ಕೂಲಂಕುಶವಾಗಿ ಪರಿಶೀಲನೆ ನಡೆಸಿದ ಹೈಕೋರ್ಟ್ ಅಂಕಪಟ್ಟಿಗಳಲ್ಲಿ ಹೆಸರನ್ನು ಬದಲಿಸಿ, ಮೇ ತಿಂಗಳಲ್ಲಿ ನಡೆದ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿತ್ತು. ಇದೀಗ ಈಕೆ ಪೊಲೀಸ್ ಹುದ್ದೆಗೆ ಆಯ್ಕೆಯಾಗಿ ತನ್ನ ಕನಸನ್ನು ನನಸಾಗಿಸುವತ್ತಾ ಮುನ್ನಡೆದಿದ್ದಾಳೆ.

ಪೊಲೀಸ್ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಪ್ರೀತಿಕಾ 'ನಾನು ಪ್ರತಿನಿತ್ಯ ಬೆಳಿಗ್ಗೆ 5 ಗಂಟೆಗೆ ಶ್ರೀಪೆರಂಬದೂರಿನ ಕ್ರೀಡಾಂಗಣದಲ್ಲಿ ಓಟ ಸೇರಿದಂತೆ ಅಥ್ಲೆಟಿಕ್ ಗೆ ಸಂಬಂಧಿಸಿದ ಆಟಗಳ ತಾಲೀಮು ನಡೆಸುತ್ತೇನೆ. ಆದರೆ ಗುರುವಿನ ಮಾರ್ಗದರ್ಶನ ಇಲ್ಲದೆ ಸ್ವತಃ ಅಭ್ಯಾಸದಲ್ಲಿ ತೊಡಗಿರುವ ನನಗೆ ಇದು ಬಹು ದೊಡ್ಡ ಕೊರತೆಯಾಗಿದೆ' ಎಂದು ಹೇಳುತ್ತಾಳೆ.

English summary
Prithika Yashini is the transwomen. She have a lot of dream in post of Police and wearing khaki uniform. But she do not have anyone coach.Prithika cleared the first level on Tuesday and she have selected next stage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X