ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ : ಪರಿಹಾರ ಕಾರ್ಯಾಚರಣೆ ಆರಂಭಿಸಿದ ನೌಕಾಪಡೆ

By ಡಾ. ಅನಂತ ಕೃಷ್ಣನ್
|
Google Oneindia Kannada News

ಚೆನ್ನೈ, ಡಿಸೆಂಬರ್ 03 : ಭಾರೀ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದ ಮಧ್ಯೆ ಸಿಲುಕಿರುವ ಚೆನ್ನೈ ಮತ್ತು ಅದರ ಉಪನಗರಗಳ ಜನರನ್ನು ರಕ್ಷಣೆ ಮಾಡಲು ಭಾರತೀಯ ನೌಕಾಪಡೆ ಸಿದ್ಧವಾಗಿದೆ. ಗುರುವಾರ ಬೆಳಗ್ಗೆಯಿಂದಲೇ ನೌಕಾಪಡೆ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಿದೆ.

ನೌಕಾಪಡೆಯ ಸಿ-17ಎಸ್ ವಿಮಾನ ರಕ್ಷಣಾ ಸಾಮಾಗ್ರಗಳನ್ನು ಹೊತ್ತು ಆರಕ್ಕೊನಂ ಬಳಿ ಇರುವ ಐಎನ್‌ಎಸ್ ರಾಜಾಲಿ ಏರ್‌ ಸ್ಟೇಷನ್‌ ತಲುಪಿದೆ. ಆಹಾರ ಸಾಮಾಗ್ರಿ, ಔಷಧಿಗಳು ಏರ್ ಸ್ಟೇಷನ್ ತಲುಪಿದ್ದು, ತಕ್ಷಣ ಕಾರ್ಯಾಚರಣೆ ಆರಂಭವಾಗಲಿದೆ. [ಗ್ಯಾಲರಿ: ಹಚ್ಚಿ ಹೊಡೆಯುತ್ತಿರುವ ಮಳೆಗೆ ತತ್ತರಿಸಿದ ಚೆನ್ನೈ]

chennai

ಒನ್ ಇಂಡಿಯಾ ಜೊತೆ ಮಾತನಾಡಿದ ನೌಕಾಪಡೆಯ ವಕ್ತಾರ ಕ್ಯಾಪ್ಟನ್ ಡಿ.ಕೆ.ಶರ್ಮಾ ಅವರು ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ್ದು, 'ಗುರುವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಲಾಗುತ್ತದೆ' ಎಂದು ಹೇಳಿದ್ದಾರೆ. [ಮಳೆಯಿಂದ ಜರ್ಝರಿತ ತಮಿಳುನಾಡಿನ ಇತ್ತೀಚಿನ ವರದಿಗಳು]

'ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಲಿದ್ದಾರೆ. ಏರ್ ಇಂಡಿಯಾದ ಎ-320 ವಿಮಾನ ಐಎನ್‌ಎಸ್ ರಾಜಾಲಿ ಏರ್‌ ಸ್ಟೇಷನ್‌ನಲ್ಲಿ ಲ್ಯಾಂಡ್ ಆಗಲು ಬುಧವಾರ ರಾತ್ರಿಯೇ ಪ್ರಾಯೋಗಿಕ ಪರೀಕ್ಷೆ ನಡೆಸಿದೆ' ಎಂದು ಶರ್ಮಾ ತಿಳಿಸಿದ್ದಾರೆ. [ತಮಿಳುನಾಡಿಗೆ 5 ಕೋಟಿ ನೆರವು ಘೋಷಿಸಿದ ಕರ್ನಾಟಕ]

ರಕ್ಷಣಾ ಕಾರ್ಯಾಚರಣೆ ಸವಾಲು : ರಕ್ಷಣಾ ಸಾಮಾಗ್ರಿ, ಆಹಾರಗಳು ಬಂದು ತಲುಪಿವೆ. ಆದರೆ, ಇವುಗಳನ್ನು ಏರ್ ಸ್ಟೇಷನ್‌ನಿಂದ ಹೊರಗೆ ತೆಗೆದುಕೊಂಡು ಹೋಗಿ ಜನರಿಗೆ ತಲುಪಿಸುವುದು ದೊಡ್ಡ ಸವಾಲಾಗಿದೆ. ಚೆನ್ನೈ ಸಂಪೂರ್ಣವಾಗಿ ಜಲಾವೃತವಾಗಿದ್ದು ರಕ್ಷಣಾ ಸಾಮಾಗ್ರಿಗಳನ್ನು ಎಲ್ಲಿಗೆ ತಲುಪಿಸಬೇಕು? ಎಂದು ರಕ್ಷಣಾ ತಂಡ ಯೋಜನೆ ರೂಪಿಸುತ್ತಿದೆ.

ಆಹಾರ, ಔಷಧ ಮುಂತಾದ ರಕ್ಷಣಾ ಸಾಮಾಗ್ರಿಗಳನ್ನು ಜನರಿಗೆ ತಲುಪಿಸಲು ತಮಿಳುನಾಡು ಸರ್ಕಾರ ಬಸ್ ಮತ್ತು ಇತರ ವಾಹನಗಳ ವ್ಯವಸ್ಥೆಯನ್ನು ಮಾಡುವಂತೆ ನೌಕಾಪಡೆ ಮನವಿ ಮಾಡಿದೆ. ತಕ್ಷಣ ವಾಹನಗಳ ವ್ಯವಸ್ಥೆಯನ್ನು ಸರ್ಕಾರ ಮಾಡಿದರೆ, ನೌಕಾಪಡೆ ಕಾರ್ಯಾಚರಣೆಯನ್ನು ಆರಂಭಿಸುತ್ತದೆ.

INS Rajali

ಕರಾವಳಿ ರಕ್ಷಣಾ ಪಡೆ ಬುಧವಾರ ರಾತ್ರಿ ಸುಮಾರು 150 ಜನರನ್ನು ರಕ್ಷಿಸಿದ್ದು ಸುರಕ್ಷಿತ ಪ್ರದೇಶಗಳಿಗೆ ಕಳುಹಿಸಿಕೊಟ್ಟಿದೆ. ಕರಾವಳಿ ರಕ್ಷಣಾ ಪಡೆ ಮತ್ತು ರಾಜ್ಯ ಪೊಲೀಸರ ಜಂಟಿ ತಂಡವನ್ನು ರಕ್ಷಣಾ ಕಾರ್ಯಕ್ಕಾಗಿ ರಚನೆ ಮಾಡಲಾಗಿದೆ. ಕರಾವಳಿ ರಕ್ಷಣಾ ಪಡೆಯ ಬೋಟ್‌ಗಳು ಜಲಾವೃತ ಪ್ರದೇಶದಲ್ಲಿ ಸಿಲುಕಿರುವ ಜನರಿಗೆ ಆಹಾರ ಪದಾರ್ಥಗಳನ್ನು ತಲುಪಿಸುತ್ತಿವೆ.

English summary
Indian Navy swung into action and activated all its resources at its Naval Air Station INS Rajali, near Arakkonam, Tamil Nadu towards rescue and relief work in the flooded city of Chennai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X