ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಶಿಕಲಾ ಹಾಗೂ ಕುಟುಂಬದ ಮೇಲಿರುವ ಹಗರಣಗಳು

ಶಶಿಕಲಾ ಅವರು ದಿವಂಗತ ಸಿಎಂ ಜೆ ಜಯಲಲಿತಾ ಆಪ್ತೆಯಾಗಿದ್ದರು ಎಂಬುದೇ ಅವರ ಪ್ಲಸ್ ಪಾಯಿಂಟ್, ಮಿಕ್ಕಂತೆ ಶಶಿಕಲಾ ಹಾಗೂ ಅವರ ಕುಟುಂಬ ಅನೇಕ ಹಗರಣಗಳಲ್ಲಿ ಭಾಗಿಯಾಗಿದ್ದು, ಕೇಸುಗಳು ವಿವಿಧ ಹಂತದಲ್ಲಿವೆ.

By ಅನುಷಾ ರವಿ
|
Google Oneindia Kannada News

ಚೆನ್ನೈ, ಫೆಬ್ರವರಿ 13: ತಮಿಳುನಾಡಿನ ಮುಖ್ಯಮಂತ್ರಿ ಪಟ್ಟಕ್ಕೇರುವ ಆಸೆ ಇರಿಸಿಕೊಂಡಿರುವ ವಿಕೆ ಶಶಿಕಲಾ ನಟರಾಜನ್ ಅವರಿಗೆ ನೂರಾರು ತೊಡಕುಗಳು ಎದುರಾಗಿವೆ. ದಿವಂಗತ ಸಿಎಂ ಜೆ ಜಯಲಲಿತಾ ಆಪ್ತೆಯಾಗಿದ್ದರು ಎಂಬುದೇ ಅವರ ಪ್ಲಸ್ ಪಾಯಿಂಟ್, ಮಿಕ್ಕಂತೆ ಶಶಿಕಲಾ ಹಾಗೂ ಅವರ ಕುಟುಂಬ ಅನೇಕ ಹಗರಣಗಳಲ್ಲಿ ಭಾಗಿಯಾಗಿದ್ದು, ಕೇಸುಗಳು ವಿವಿಧ ಹಂತದಲ್ಲಿವೆ.

ಎಐಎಡಿಎಂಕೆ ಪಕ್ಷದ ಕಾರ್ಯಕ್ರಮಗಳನ್ನು ವಿಡಿಯೋ ಕವರೇಜ್ ಮಾಡಲು ಬರುತ್ತಿದ್ದ ಶಶಿಕಲಾ ಅವರು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ, ಶಾಸಕಾಂಗ ಪಕ್ಷ ನಾಯಕಿಯಾಗುತ್ತಾರೆ. ನಿಯೋಜಿತ ಸಿಎಂ ಎನಿಸಿಕೊಳ್ಳುತ್ತಾರೆ.[ಶಶಿಕಲಾ ನಟರಾಜನ್ ವ್ಯಕ್ತಿಚಿತ್ರ]

ಆದರೆ, ಕಾನೂನಿನ ತೊಡಕು, ರಾಜಕೀಯ ಅನುಭವ ಇಲ್ಲದ, ಚುನಾವಣೆ ಎದುರಿಸದ ಶಶಿಕಲಾ ಅವರಿಗೆ ಸಂಕಷ್ಟ ತಂದಿದೆ. ಜಯಾ ಅವರ ಆಪ್ತರಾದ ಬಳಿಕ 'ಚಿನ್ನಮ್ಮ' ಆಗಿ ಬೆಳೆದ ಶಶಿಕಲಾ ಇಂದು ಭಾವನಾತ್ಮಕವಾಗಿ ಪಕ್ಷ ಹಾಗೂ ರಾಜ್ಯದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ.[ಶಶಿಕಲಾ ಬತ್ತಳಿಕೆಯಲ್ಲಿ ಇನ್ನೂ ಏನೇನು ಬಾಣಗಳಿವೆ?]

ಶಶಿಕಲಾ ಹಾಗೂ ಅವರ ಕುಟುಂಬವನ್ನು ಮನ್ನಾರ್ ಗುಡಿ ಮಾಫಿಯಾ ಎಂದು ಸುಬ್ರಮಣಿಯನ್ ಸ್ವಾಮಿ ಕರೆದಿದ್ದರು. ಈ ಫ್ಯಾಮಿಲಿ ಬೆಳೆದು ಬಂದ ಬಗೆಯನ್ನು ಇಲ್ಲಿ ಓದಿ.. ಮನ್ನಾರ್ ಗುಡಿ ಫ್ಯಾಮಿಲಿ ಮೇಲಿರುವ ಆರೋಪಗಳು, ಪ್ರಕರಣಗಳ ವಿವರ ಮುಂದಿದೆ ಓದಿ...

ಫೆರಾ ಕಾಯ್ದೆ ಉಲ್ಲಂಘನೆ

ಫೆರಾ ಕಾಯ್ದೆ ಉಲ್ಲಂಘನೆ

ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ (FERA) ಉಲ್ಲಂಘನೆ ಆರೋಪ ಹೊತ್ತಿರುವ ಶಶಿಕಲಾ ಅವರು ವಿಚಾರಣೆ ಎದುರಿಸಬೇಕು ಎಂದು ಇತ್ತೀಚೆಗೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 1996ರಲ್ಲಿ ಜಾರಿ ನಿರ್ದೇಶಾನಲಯದಿಂದ ಶಶಿಕಲಾ ಅವರ ಬಂಧನವಾಗಿತ್ತು. ಕೆಳಹಂತದ ನ್ಯಾಯಾಲಯದಲ್ಲಿ ಮೂರು ಕೇಸುಗಳಲ್ಲಿ ಮುಕ್ತಿ ಪಡೆದರೂ ಮದ್ರಾಸ್ ಹೈಕೋರ್ಟ್, ವಿಚಾರಣೆಗೆ ಆದೇಶಿಸಿದೆ, ಜೆಜೆಟಿವಿಯ ವಿದೇಶಿ ವಿನಿಮಯ ವಹಿವಾಟಿಗೆ ಈ ಕೇಸ್ ಸಂಬಂಧಿಸಿದೆ.[ಶಶಿಕಲಾ ಪುಷ್ಪರ ಗಂಡ, ವಕೀಲನಿಗೆ ಎಐಎಡಿಎಂಕೆ ಕಾರ್ಯಕರ್ತರ ಗೂಸಾ]

ಅಕ್ರಮ ಆಸ್ತಿ ಗಳಿಕೆ

ಅಕ್ರಮ ಆಸ್ತಿ ಗಳಿಕೆ

ಜಯಲಲಿತಾ ಅವರು ಪ್ರಮುಖ ಆರೋಪಿಯಾಗಿರುವ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ಸಹ ಆರೋಪಿ. 1991 ರಿಂದ 1996ರ ಅವಧಿಯಲ್ಲಿ ಜಯಾ ಅವರು ಸಿಎಂ ಆಗಿದ್ದಾಗ 66 ಕೋಟಿ ರು ಅಕ್ರಮ ಆಸ್ತಿ ಗಳಿಸಿದ ಆರೋಪ ಹೊತ್ತಿದ್ದಾರೆ. ಈ ಕೇಸಿನಲ್ಲಿ ಅಪರಾಧಿ ಎನಿಸಿಕೊಂಡರೆ ಶಶಿಕಲಾ ಅವರು ಸಿಎಂ ಆಗಲು ಕಷ್ಟವಾಗುತ್ತೆ.[ವಿವರ ಇಲ್ಲಿ ಓದಿ]

ಭೂ ಹಗರಣ

ಭೂ ಹಗರಣ

ಶಶಿಕಲಾರನ್ನು ಜಯಲಲಿತಾರಿಗೆ ಪರಿಚಯ ಮಾಡಿಸಿಕೊಟ್ಟ ನಟರಾಜನ್(ಶಶಿಕಲಾ ಅವರ ಪತಿ) ಈಗ ಧೈರ್ಯವಾಗಿ ಪೋಯಸ್ ಗಾರ್ಡನ್ ನ ವೇದ ನಿಲಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. 1990ರಲ್ಲಿ ಜಯಲಲಿತಾರಿಂದ ಉಗಿಸಿಕೊಂಡು ಹೊರ ಹಾಕಲ್ಪಟ್ಟಿದ್ದ ನಟರಾಜನ್ ಅವರ ಮೇಲೆ ಭೂ ಕಬಳಿಕೆ ಆರೋಪವಿದೆ. 2012ರಲ್ಲಿ ತಂಜಾವೂರಿನಲ್ಲಿ 20 ಎಕರೆ ಗುಳುಂ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದರು.['ಹೊಸ ಬಗೆಯ ಪ್ರತಿಭಟನೆ' ಮಾಡುವ ಧಮ್ಕಿ ಹಾಕಿದ ಶಶಿಕಲಾ!]

ವಿವಿಧ ಆರೋಪಗಳು

ವಿವಿಧ ಆರೋಪಗಳು

ಮನ್ನಾರ್ ಗುಡಿ ಕುಟುಂಬದ ಬಾಸ್ ಎನಿಸಿಕೊಂಡಿರುವ ಶಶಿಕಲಾ ಅವರ ಸೋದರ ದಿವಾಹರನ್ ಮೇಲೆ ಡಿಎಂಕೆ ಬೆಂಬಲಿಗರ ಮೇಲೆ ಹಲ್ಲೆ, ಮನೆ ನೆಲಸಮಗೊಳಿಸಿದ ಆರೋಪವಿದೆ. 2012ರಲ್ಲಿ ಬಂಧನಕ್ಕೊಳಗಾಗಿದ್ದರು. ತಿರುವರೂರು ನಲ್ಲಿ ಇವರ ವಿರುದ್ಧ ಅಕ್ರಮ ಕ್ವಾರಿ, ಭೂ ಕಬಳಿಕೆ ಆರೋಪದಡಿ ಕೇಸ್ ಗಳಿವೆ. ಉಳಿದಂತೆ ಇದೇ ಕುಟುಂಬದ ದಿನಕರನ್, ಟಿಟಿವಿ ಭಾಸ್ಕರನ್,
ಆರ್ ರಾವಣನ್ ಮೇಲೆ ಆರೋಪಗಳಿವೆ.[ಶಶಿ ಮುಖ್ಯಮಂತ್ರಿಯಾಗದಂತೆ ತಡೆದಿದ್ದಕ್ಕೆ ನಿಜವಾದ ಕಾರಣ]

English summary
Tamil Nadu is all set to get a woman chief minister for the third time with Sasikala Natarajan being elected as the AIADMK's legislative party leader. But her fate is yet to be decided by the court. We give you details of what she and her family members are accused of.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X