ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿವೋಟರ್ ಸಮೀಕ್ಷೆ, ತಮಿಳುನಾಡಿನಲ್ಲಿ ಮತ್ತೆ 'ಅಮ್ಮ' ದರ್ಬಾರ್

By Mahesh
|
Google Oneindia Kannada News

ನವದೆಹಲಿ, ಏಪ್ರಿಲ್ 02: ಐದು ರಾಜ್ಯಗಳ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಒಂದೊಂದಾಗಿ ಹೊರ ಬರುತ್ತಿದ್ದು, ಟೈಮ್ಸ್ ನೌ ಟಿವಿ- ಸಿವೋಟರ್ ಸಮೀಕ್ಷೆ ಪ್ರಕಾರ ತಮಿಳುನಾಡಿನಲ್ಲಿ ಮತ್ತೊಮ್ಮೆ ಜಯಲಲಿತಾ ಅವರು ಸರ್ಕಾರ ಸ್ಥಾಪಿಸಲಿದ್ದಾರೆ.

ಇದಲ್ಲದೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯೇ ಪುನಃ ಅಧಿಕಾರ ಪಡೆಯಲಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತೆ ಅಧಿಕಾರಕ್ಕೆ ಬರಲಿದ್ದು, ಜಯಲಲಿತಾ ಸಿಎಂ ಆಗಿ ದಾಖಲೆಯ ಆರನೇ ಬಾರಿಗೆ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಸಮೀಕ್ಷೆ ವರದಿ ಹೇಳಿದೆ. [ಕೇರಳದಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ 1 ಸ್ಥಾನ]

ಇದೊಂದು ರೀತಿ ಎಐಎಡಿಎಂಕೆಗೂ ಅಚ್ಚರಿ ಮೂಡಿಸುವ ವಿಷಯವಾಗಿದ್ದು, ಪಕ್ಷದ ಸ್ಥಾಪಕ ಎಂಜಿ ರಾಮಚಂದ್ರನ್ ಅವರ ಕಾಲದಿಂದಲೂ ಸತತವಾಗಿ ಅಧಿಕಾರ ಪುನಃ ಸ್ಥಾಪನೆ ಸಾಧ್ಯವಾಗಿರಲಿಲ್ಲ.[ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆ ದಿನಾಂಕ ಘೋಷಣೆ]

 Times Now-CVoter survey results 2016 out: AIADMK to Win

234 ಸದಸ್ಯರನ್ನು ಹೊಂದಿರುವ ತಮಿಳುನಾಡು ಅಸೆಂಬ್ಲಿಯಲ್ಲಿ ಎಐಎಡಿಎಂಕೆ 130ಸ್ಥಾನ ಗಳಿಸಲಿದೆ, ಡಿಎಂಕೆ 70 ಸೀಟು ಪಡೆಯಲಿದೆ. ವಿಜಯ ಕಾಂತ್ ಅವರ ಡಿಎಂಡಿಕೆ ಪೀಪಲ್ ವೆಲ್ ಫೇರ್ ಫ್ರಂಟ್ 14 ಸ್ಥಾನ ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ.[ಪಂಚರಾಜ್ಯಗಳ ಚುನಾವಣೆ: ಹೊರಬಿದ್ದ ಮತ್ತೊಂದು ಸಮೀಕ್ಷೆ]

ಎಐಎಡಿಎಂಕೆ ಮತ ಹಂಚಿಕೆ ಶೇಕಡವಾರು ಶೇ 30ರಷ್ಟು ಸಿಗಲಿದೆ. ಡಿಎಂಕೆ-ಕಾಂಗ್ರೆಸ್ 32%, ಡಿಎಂಡಿಕೆ 8% ಮತ ಪಡೆಯಲಿದೆ. ಬಿಜೆಪಿ ಈ ಬಾರಿಯೂ ಮುಖಭಂಗ ಅನುಭವಿಸಲಿದೆ ಎಂದು ತಿಳಿದು ಬಂದಿದೆ.

2011 ರಲ್ಲಿ ಮತ ಹಂಚಿಕೆ

2011 ರಲ್ಲಿ ಮತ ಹಂಚಿಕೆ

2011 ರಲ್ಲಿ ಮತ ಹಂಚಿಕೆ
* ಎಡಿಎಂಕೆ : 52%
* ಡಿಎಂಕೆ : 40%
* ಬಿಜೆಪಿ : 2%
* ಇತರೆ: 6%

ಟೈಮ್ಸ್ ನೌ ಟಿವಿ- ಸಿವೋಟರ್ ಸಮೀಕ್ಷೆ ಪ್ರಕಾರ ತಮಿಳುನಾಡಿನಲ್ಲಿ ಮತ್ತೊಮ್ಮೆ ಜಯಲಲಿತಾ ಅವರು ಸರ್ಕಾರ ಸ್ಥಾಪಿಸಲಿದ್ದಾರೆ.
ಪುದುಚೇರಿಯಲ್ಲಿ ಕಾಂಗ್ರೆಸ್- ಡಿಎಂಕೆ

ಪುದುಚೇರಿಯಲ್ಲಿ ಕಾಂಗ್ರೆಸ್- ಡಿಎಂಕೆ

ಪುದುಚೇರಿಯಲ್ಲಿ ಕಾಂಗ್ರೆಸ್- ಡಿಎಂಕೆ: 30 ಅಸೆಂಬ್ಲಿ ಸ್ಥಾನಗಳ ಪೈಕಿ 17 ಸ್ಥಾನಗಳು ಕಾಂಗ್ರೆಸ್ ಹಾಗೂ ಡಿಎಂಕೆ ಪಲಾಗಲಿದೆ. ಸದ್ಯಕ್ಕೆ ಎಐಎನ್ ಆರ್ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಮುಂಬರುವ ಚುನಾವಣೆಯಲ್ಲಿ ಕೇವಲ 7 ಸ್ಥಾನ ಪಡೆಯಲಿದೆ.

ಮಾರ್ಚ್ ತಿಂಗಳಿನಲ್ಲಿ ನಡೆಸಿದ ಸಮೀಕ್ಷೆ

ಮಾರ್ಚ್ ತಿಂಗಳಿನಲ್ಲಿ ನಡೆಸಿದ ಸಮೀಕ್ಷೆ

ಸಿವೋಟರ್ ಮಾರ್ಚ್ ತಿಂಗಳಿನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಎಐಎಡಿಎಂಕೆಗೆ 116 ಸ್ಥಾನ ಲಭಿಸಲಿದೆ ಎನ್ನಲಾಗಿತ್ತು. ಡಿಎಂಕೆಗೆ 101 ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದು ತಿಳಿದು ಬಂದಿತ್ತು. ಶೇಕಡಾವಾರು ಮತಗಳ ಪೈಕಿ
* ಎಐಎಡಿಎಂಕೆಗೆ 39% from 41% ,
* ಡಿಎಂಕೆ: 32% from 40%,
* ಬಿಜೆಪಿ: 4% from 5%

ಮತಯಂತ್ರದಲ್ಲಿ NOTA (ನೋಟಾ) ಬಟನ್/ಚಿನ್ಹೆ

ಮತಯಂತ್ರದಲ್ಲಿ NOTA (ನೋಟಾ) ಬಟನ್/ಚಿನ್ಹೆ

ತಮಿಳುನಾಡು (234 ಕ್ಷೇತ್ರಗಳು) 5.8 ಕೋಟಿ ಮತದಾರರು
* ಏಪ್ರಿಲ್ 22ರಿಂದ ಚುನಾವಣೆ ಪ್ರಕ್ರಿಯೆ ಆರಂಭ.
* ಮೇ 16, ಸೋಮವಾರದಂದು ಮತದಾನ.

ಪುದುಚೇರಿ (30 ಕ್ಷೇತ್ರಗಳು) 9.27 ಲಕ್ಷ ಮತದಾರರು
* ಏಪ್ರಿಲ್ 22ರಿಂದ ಚುನಾವಣೆ ಪ್ರಕ್ರಿಯೆ ಆರಂಭ.
* ಮೇ 16, ಸೋಮವಾರದಂದು ಮತದಾನ.

English summary
The pre-poll survey conducted by Times Now-India-TV-CVoter has predicted the return of the AIADMK to power in Tamil Nadu with its supremo J Jatalalithaa becoming the chief minister of the state for the record sixth time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X