ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕಾರಿ ಆತ್ಮಹತ್ಯೆ, ತಮಿಳುನಾಡು ಮಾಜಿ ಸಚಿವ ಸೆರೆ

|
Google Oneindia Kannada News

ಚೆನ್ನೈ, ಏ.6 : ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿ ಎಸ್‌. ಮುತ್ತು ಕುಮಾರಸ್ವಾಮಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೃಷಿ ಸಚಿವ ಮತ್ತು ಆಡಳಿತಾರೂಢ ಎಐಎಡಿಎಂಕೆ ಮುಖಂಡ ಅಗ್ರಿ ಕೃಷ್ಣಮೂರ್ತಿ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಕೃಷ್ಣಮೂರ್ತಿ ಅವರಿಗೆ ಸಿಐಡಿ ನೋಟಿ ಜಾರಿ ಮಾಡಿತ್ತು. ಶನಿವಾರ ಅವರು ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ಮುಗಿಯುತ್ತಿದ್ದಂತೆ ಶನಿವಾರ ರಾತ್ರಿ ಅವರನ್ನು ಬಂಧಿಸಲಾಗಿದೆ.

Agri Krishnamurthy

ಅಗ್ರಿ ಕೃಷ್ಣಮೂರ್ತಿ ಅವರನ್ನು ಸಿಐಡಿ ಪೊಲೀಸರು ಮ್ಯಾಜಿಸ್ಟ್ರೇಟ್‌ ಮುಂದೆ ಭಾನುವಾರ ಹಾಜರುಪಡಿಸಿದ್ದು, ಅವರನ್ನು 15 ದಿನಗಳ ಕಾಲ ನ್ಯಾಯಾಂಗಬಂಧನಕ್ಕೆ ಒಪ್ಪಿಸಲಾಗಿದೆ. ಈ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. [ಬೆದರಿಕೆ ಹಾಕಿದ ಶಾಸಕ ವರ್ತೂರು ವಿರುದ್ಧ ಲೋಕಾಯುಕ್ತ ತನಿಖೆ]

ಆತ್ಮಹತ್ಯೆಗೆ ಸಚಿವ ಒತ್ತಡ ಕಾರಣ? : ಹಿರಿಯ ಅಧಿಕಾರಿ ಎಸ್‌. ಮುತ್ತು ಕುಮಾರಸ್ವಾಮಿ ಅವರು 45 ದಿನಗಳ ಹಿಂದೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಇಲಾಖೆಯಲ್ಲಿನ ಚಾಲಕರ ನೇಮಕಾತಿಗೆ ಸಂಬಂಧಿಸಿದಂತೆ ಮುತ್ತು ಕುಮಾರಸ್ವಾಮಿ ಮೇಲೆ ಕೃಷ್ಣಮೂರ್ತಿ ಒತ್ತಡ ಹೇರಿದ್ದರು ಎಂದು ಪ್ರತಿಪಕ್ಷಗಳು ಆರೋಪಿಸಿವೆ. [ರವಿ ಕೇಸ್: ವರದಿ ಕೇಳಿದ ಸಿಬಿಐ ಟೀಂ]

ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಡಿಎಂಕೆ, ಕಾಂಗ್ರೆಸ್‌, ಪಿಎಂಕೆ, ಸೇರಿದಂತೆ ಪ್ರತಿಪಕ್ಷಗಳು, ಅಧಿಕಾರಿಯ ಸಾವಿಗೆ ಕೃಷ್ಣಮೂರ್ತಿ ಅವರೇ ಕಾರಣ ಆದ್ದರಿಂದ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸುತ್ತಿವೆ.

English summary
Tamil Nadu Former Agriculture minister Agri Krishnamurthy has been arrested by CID in connection with the alleged suicide of a senior engineering department official S. Muthukumarasamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X