ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಾ ಸಾವಿನ ಸುದ್ದಿ ಹಬ್ಬಿದ್ದು ಅಪೋಲೋ ಆಸ್ಪತ್ರೆಯಿಂದಲೇ?

ತಮಿಳುನಾಡಿನ ಮುಖ್ಯಮಂತ್ರಿ, ಅಭಿಮಾನಿಗಳ ಪಾಲಿನ 'ಅಮ್ಮ', ಪುರಚ್ಚಿ ತಲೈವಿ ಎನಿಸಿಕೊಂಡಿದ್ದ ಜೆ ಜಯಲಲಿತಾ ಅವರು ಸೋಮವಾರ ಸಂಜೆ ಕೊನೆಯುಸಿರೆಳೆದಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.ಸುದ್ದಿಯನ್ನು ಸಂಪೂರ್ಣವಾಗಿ ಅಪೋಲೋ ಆಸ್ಪತ್ರೆ ಅಲ್ಲಗೆಳೆದಿದೆ.

By Mahesh
|
Google Oneindia Kannada News

ಚೆನ್ನೈ, ಡಿಸೆಂಬರ್ 05: ತಮಿಳುನಾಡಿನ ಮುಖ್ಯಮಂತ್ರಿ, ಅಭಿಮಾನಿಗಳ ಪಾಲಿನ 'ಅಮ್ಮ', ಪುರಚ್ಚಿ ತಲೈವಿ ಎನಿಸಿಕೊಂಡಿದ್ದ ಜೆ ಜಯಲಲಿತಾ ಅವರು ಸೋಮವಾರ ಸಂಜೆ ಕೊನೆಯುಸಿರೆಳೆದಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. [ತಮಿಳುನಾಡಿನ 'ಅಮ್ಮ' ಜೆ ಜಯಲಲಿತಾ ವಿಧಿವಶ]

ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರ ಬಂದಿಲ್ಲ, ತಮಿಳುನಾಡಿನ ಸುದ್ದಿವಾಹಿನಿಗಳಿಂದ ಹೊರ ಬಂದ ಸುದ್ದಿಯನ್ನು ಸಂಪೂರ್ಣವಾಗಿ ಅಪೋಲೋ ಆಸ್ಪತ್ರೆ ಅಲ್ಲಗೆಳೆದಿದೆ. [ಜಯಾ ಟಿವಿಯಿಂದಲೇ ಮೊದಲಿಗೆ ಗಾಳಿ ಸುದ್ದಿ ಹಬ್ಬಿದ್ದು!]

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರಿಗೆ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಭಾನುವಾರ(ಡಿಸೆಂಬರ್ 04) ಸಂಜೆ ಹೃದಯಾಘಾತಕ್ಕೊಳಗಾದ ಬಳಿಕ ತೀವ್ರ ನಿಗಾ ಘಟಕದಲ್ಲಿದ್ದಾರೆ.[ಜೆಜೆ ಬಗ್ಗೆ 6 ಗಂಟೆಗೆ ಘೋಷಣೆ ನಿರೀಕ್ಷಿಸಿ ಎಂದ ಸ್ವಾಮಿ]

Tamil Nadu CM J Jayalalithaa Passes Away

ಅಪೋಲೋ ಆಸ್ಪತ್ರೆ ವೈದ್ಯರು, ಏಮ್ಸ್ ತಜ್ಞರು, ಲಂಡನ್ನಿನ ಡಾ. ರಿಚರ್ಡ್ ಕೂಡಾ ಏನು ಮಾಡಲಾಗಲಿಲ್ಲ. ECMO ಸೇರಿದಂತೆ ಯಾವುದೇ ಜೀವ ರಕ್ಷಕ ಸಾಧನಗಳು ಪ್ರಯೋಜನಕ್ಕೆ ಬರಲಿಲ್ಲ. ಕೋಟ್ಯಂತರ ತಮಿಳರ ಪಾಲಿನ 'ಅಮ್ಮ' ಚಿರನಿದ್ರೆಗೆ ಜಾರಿ ಬಿಟ್ಟರು ಎಂಬ ಸುದ್ದಿಯನ್ನು ಅಪೋಲೋ ಆಸ್ಪತ್ರೆ ಸಿಇಒ ಸಂಗೀತಾ ರೆಡ್ಡಿ ಅಲ್ಲಗೆಳೆದಿದ್ದಾರೆ.

Tamil Nadu CM J Jayalalithaa Passes Away

ವಿವಾದಗಳು, ಭ್ರಷ್ಟಾಚಾರಗಳ ಜತೆಗೆ ಬೆಳೆದ ಜಯಲಲಿತಾ ಅವರು ಜೈಲುವಾಸವನ್ನು ಅನುಭವಿಸಿದರು. ಆದರೆ, ಅಧಿಕಾರ ಸಿಕ್ಕಾಗಲೆಲ್ಲಾ ಜನಪ್ರಿಯ ಯೋಜನೆಗಳನ್ನು ಘೋಷಿಸಿ ಜನಮನ ಗೆದ್ದರು, ಅದೇ ರೀತಿ ಸಾವನ್ನು ಗೆದ್ದು ಬರುತ್ತಾರೆ ಎಂಬ ನಂಬಿಕೆ ಅಭಿಮಾನಿಗಳಲ್ಲಿದೆ

ಜಯಲಲಿತಾ ಅವರಿಗೆ ಏನೇನು ಕಾಯಿಲೆ ಇದೆ ಎಂಬುದರ ಬಗ್ಗೆ ಊಹಾಪೋಹ ಸುದ್ದಿಗಳು ಹಬ್ಬುತ್ತಲೇ ಇರುತ್ತದೆ. ಇಲ್ಲಿ ತನಕ ಎಐಎಡಿಎಂಕೆ ಕೂಡಾ ಈ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ.


ಕಿಡ್ನಿ ವೈಫಲ್ಯ, ಹೃದಯಾಘಾತ, ಕೋಮಾಕ್ಕೆ ಜಾರಿದರು ಎಂದು ಅಧಿಕೃತ ಪ್ರಕಟಣೆ ಸಿಕ್ಕಿದೆ. ಆದರೆ, ಸಾವಿನ ಸುದ್ದಿ ಹರಡಿದ ಬಳಿಕ ಎಐಎಡಿಎಂಕೆ ಕಚೇರಿಯಲ್ಲಿ ಧ್ವಜವನ್ನು ಅರ್ಧಕ್ಕೆ ಇಳಿಸಲಾಗಿತ್ತು. ನಂತರ ಧ್ವಜವನ್ನು ಮೇಲಕ್ಕೇರಿಸಿದ್ದಾರೆ

English summary
Tamil Nadu Chief Minister passed away at the Apollo hospital according to TV reports. Apollo hospital denied the reports. She had suffered a cardiac arrest on Sunday following which her condition remained extremely critical. She has been in hospital for the past 72 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X