ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು ಮುಂದೆ ಮಾ.30 ವಿಶ್ವ ಇಡ್ಲಿ ದಿನ

|
Google Oneindia Kannada News

ಚೆನ್ನೈ, ಮಾರ್ಚ್ 31 : ದಕ್ಷಿಣ ಭಾರತದ ಜನರ ನೆಚ್ಚಿನ ತಿಂಡಿ ಇಡ್ಲಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲಿದೆ. ಹೌದು, ಮಾರ್ಚ್‌ 30ಅನ್ನು 'ವಿಶ್ವ ಇಡ್ಲಿ ದಿನ'ವಾಗಿ ಆಚರಿಸಲು ನಿರ್ಣಯ ಕೈಗೊಳ್ಳಲಾಗಿದೆ. ಸೋಮವಾರ 50 ಕೆಜಿ ಇಡ್ಲಿ ಕತ್ತರಿಸಿ ಮೊದಲ ವಿಶ್ವ ಇಡ್ಲಿ ದಿನವನ್ನು ಆಚರಣೆ ಮಾಡಲಾಗಿದೆ.

ತಮಿಳುನಾಡು ಬಾಣಸಿಗರ ಒಕ್ಕೂಟ ಹಾಗೂ ಆಟೋ ಚಾಲಕ ಇನಿಯವನ್ ಸೇರಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಮುಂದಿನ ವರ್ಷದಿಂದ ಅಮೆರಿಕಾ, ಕೆನಡಾ, ಜರ್ಮನಿಯಲ್ಲಿಯೂ ಇಡ್ಲಿ ದಿನಾಚರಣೆಯನ್ನು ನಡೆಸಲು ಒಕ್ಕೂಟ ನಿರ್ಧರಿಸಿದೆ. [ಇಡ್ಲಿ-ಸಾಂಬಾರ್ ಬೆಳಗ್ಗಿನ ತಿಂಡಿಗೆ ಬೆಸ್ಟ್!]

Idly

ಚೆನ್ನೈನವರಾದ ಇನಿಯವನ್ ಆಟೋ ಚಾಲಕರಾಗಿದ್ದರು. ಆದರೆ, ಅವರಿಗೆ ಇಡ್ಲಿ ತಯಾರಿಸುವುದು ಬಹಳ ಮೆಚ್ಚಿನ ಕೆಲಸವಾಗಿತ್ತು. ಆದ್ದರಿಂದ ಅವರು ಆಟೋ ಚಾಲಕ ವೃತ್ತಿಗೆ ಗುಡ್‌ಬೈ ಹೇಳಿ ಇಡ್ಲಿ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. [ಗಂಟಲಲ್ಲಿ ಸಿಕ್ಕಿಕೊಂಡ ಇಡ್ಲಿ ವ್ಯಕ್ತಿಯ ಪ್ರಾಣ ತಿಂದಿತು!]

ನಿತ್ಯ ಬೇರೆ-ಬೇರೆ ರೀತಿಯ ಇಡ್ಲಿ ತಿನ್ನಬೇಕು ಎಂದು ಹೇಳುವ ಇನಿಯವನ್ ಬಿಟ್‌ರೋಟ್, ಕ್ಯಾರೇಟ್, ಚಾಕೊಲೇಟ್ ಮುಂತಾದವುಗಳಿಂದ ಇಡ್ಲಿಯನ್ನು ತಯಾರಿಸುತ್ತಾರೆ. ಮಾ.30ರಂದು ತಮ್ಮ ಹುಟ್ಟು ಹಬ್ಬದ ದಿನವನ್ನು ಇಡ್ಲಿ ದಿನವಾಗಿ ಆಚರಣೆ ಮಾಡಲು ಅವರು ನಿರ್ಧರಿಸಿದ್ದರು. [ಮಲ್ಲಿಗೆ ಹೂ ಅಲ್ಲವಿದು ಅಕ್ಕಿ ಇಡ್ಲಿ]

ತಮಿಳುನಾಡು ಬಾಣಸಿಗರ ಒಕ್ಕೂಟ ಇನಿಯವನ್ ನಿರ್ಧಾರಕ್ಕೆ ಬೆಂಬಲ ನೀಡಿ ಇಡ್ಲಿಗೆ ಜೈ ಅಂದಿದ್ದಾರೆ. ಆದ್ದರಿಂದ, ಇನ್ನುಮುಂದೆ ಮಾ.30 ವಿಶ್ವ ಇಡ್ಲಿ ದಿನವಾಗಲಿದೆ. ಸೋಮವಾರ ಇನಿಯವನ್ ತಾವು ತಯಾರು ಮಾಡಿದ 50 ಕೆಜಿ ಇಡ್ಲಿಯನ್ನು ಕಟ್ ಮಾಡುವ ಮೂಲಕ ಮೊದಲ ಇಡ್ಲಿ ದಿನವನ್ನು ಸಂಭ್ರಮದಿಮದ ಆಚರಣೆ ಮಾಡಿದ್ದಾರೆ. ಬೆಳಗಿನ ಉಪಹಾರಕ್ಕೆ ನೀವು ಇಡ್ಲಿಯನ್ನು ಇಷ್ಟಪಡುತ್ತೀರಾ?

English summary
Idly finally has its day. From 2015 onwards March 30th will be celebrated as World Idly Day. The idea is promoted by the Tamil Nadu cooking organization.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X