ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಲಲಿತಾ ಮಗಳ ಫೋಟೋ ಎಲ್ಲಾ ಫೇಕ್ ನಂಬಬೇಡಿ!

ಈಕೆ ತಮಿಳುನಾಡಿನ ಸಿಎಂ ಜಯಲಲಿತಾ ಅವರ ಸ್ವಂತ ಮಗಳು' ಎಂದು ಹೇಳಿ ಸೀರೆಯುಟ್ಟ ಯುವತಿಯೊಬ್ಬರ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

By Mahesh
|
Google Oneindia Kannada News

ಚೆನೈ, ಡಿಸೆಂಬರ್ 12: 'ಈಕೆ ತಮಿಳುನಾಡಿನ ಸಿಎಂ ಜಯಲಲಿತಾ ಅವರ ಸ್ವಂತ ಮಗಳು' ಎಂದು ಹೇಳಿ ಸೀರೆಯುಟ್ಟ ಯುವತಿಯೊಬ್ಬರ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಮ್ಮ ಮೊಬೈಲ್ ಗೂ ಫಾರ್ವರ್ಡ್ ಮೆಸೇಜ್ ಬಂದಿರಲೂ ಬಹುದು. ಆದರೆ, ಇದೆಲ್ಲವೂ ಸುಳ್ಳು ಸುದ್ದಿ, ಆಕೆ ಜಯಲಲಿತಾ ಅವರ ಮಗಳಲ್ಲ ಎಂದು ತಿಳಿದು ಬಂದಿದೆ.

ಕಳೆದ ಒಂದು ವಾರದಿಂದ ಫೇಸ್ಬುಕ್, ವಾಟ್ಸಪ್ ನಲ್ಲಿ ಹರಿದಾಡುತ್ತಿದ್ದ ಈ ಫೇಕ್ ಫೋಟೋ ಬಗ್ಗೆ ಗಾಯಕಿ ಚಿನ್ಮಯಿ ಶ್ರೀಪಾದ ಸ್ಪಷ್ಟನೆ ನೀಡಿದ್ದಾರೆ. ಆಕೆ ಮೃದಂಗ ವಿದ್ವಾನ್ ವಿ ಬಾಲಾಜಿ ಅವರ ಕುಟುಂಬಕ್ಕೆ ಸೇರಿದವರು. ಜಯಲಲಿತಾ ಅವರಿಗೂ ಆಕೆಗೂ ಸಂಬಂಧವಿಲ್ಲ ಎಂದಿದ್ದಾರೆ.

A fake viral post announcing that J Jayalalithaa had a daughter has come under severe criticism in Tamil Nadu. Popular playback singer Chinmayi Sripad took to Facebook to last out at the post.

ಗಾಳಿ ಸುದ್ದಿಯಲ್ಲಿ ಏನಿದೆ?: ಈ ಫೋಟೊದಲ್ಲಿರುವವರ ಹೆಸರು ಶ್ರೀಹರ್ಷ ಈಕೆ ಜಯಲಲಿತಾ ಅವರ ಮಗಳು, 70ರ ದಶಕದಲ್ಲಿ ಜಯಲಲಿತಾ ಅವರು ಮದುವೆಯಾಗಿದ್ದು, ಜಯಾ ಅವರಿಗೆ ಜನಿಸಿದ ಮಗಳು ಇವರು ಎಂದು ಸುಳ್ಳು ಸುದ್ದಿ ಪ್ರಸಾರವಾಗಿತ್ತು.

ಆದರೆ, ಈ ಬಗ್ಗೆ ಕಿಡಿಕಾರಿದ ಗಾಯಕಿ ಚಿನ್ಮಯ್ ಶ್ರೀಪಾದ, ಸುಳ್ಳು ಸುದ್ದಿ ಹಬ್ಬಿಸುವ ಮೊದಲು ವಿಷಯದ ಸತ್ಯಾಸತ್ಯತೆ ಅರಿತುಕೊಳ್ಳಿ ಎಂದು ಫೇಸ್ ಬುಕ್ ನಲ್ಲಿ ವಾಟ್ಸಪ್ ನಲ್ಲಿ ಬಂದ ಚಿತ್ರ ಸಮೇತ ಸ್ಪಷ್ಟನೆ ನೀಡಿದ್ದಾರೆ.

ಗೂಗಲ್ ಗೂ ಗೂಗ್ಲಿ ಹಾಕಿದ್ದ ಈ ಚಿತ್ರ ಸರ್ಚ್ ಮಾಡಿದಾಗಲೂ ಎಲ್ಲರಿಗೂ ಗೊಂದಲ ಮೂಡಿಸುವಂತೆ ಕಣ್ಮುಂದೆ ಕಾಣಿಸುತ್ತಿತ್ತು. ಜಯಾ ಅವರಿಗೂ ಈಕೆಗೂ ಇವರ ಮುಖ ಹೋಲಿಕೆಯಿಂದ ಜನರು ಸುಲಭವಾಗಿ ನಂಬುವಂತೆ ಸುದ್ದಿ ಹರಡಿತ್ತು. ಜಯಾ ಅವರ ಅನಾರೋಗ್ಯ ಹಾಗೂ ಸಾವಿನ ಸುದ್ದಿ ಬಗ್ಗೆ ಗಾಳಿಸುದ್ದಿ ಹಬ್ಬಿಸುವವರ ವಿರುದ್ಧ ಎಐಎಡಿಎಂಕೆ ಕ್ರಮಕ್ಕೆ ಮುಂದಾಗಿತ್ತು.ಈಗ ಈ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕೂಡಾ ಕಾರ್ಯಾಚರಣೆಗೆ ಇಳಿದಿದೆ.

English summary
A fake viral post announcing that J Jayalalithaa had a daughter has come under severe criticism in Tamil Nadu. Popular playback singer Chinmayi Sripad took to Facebook to last out at the post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X