ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

#suchileaks ಟ್ವೀಟ್ ಪ್ರಕರಣಕ್ಕೆ ಹೊಸ ಟ್ವಿಸ್ಟ್

#suchileaks ಟ್ವೀಟ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಚಿತ್ರಾ ಅವರ ವಕೀಲರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

By Mahesh
|
Google Oneindia Kannada News

ಚೆನ್ನೈ, ಮಾರ್ಚ್ 06 : ಜಲ್ಲಿಕಟ್ಟು, ಧನುಷ್ ಅಪ್ಪ ಅಮ್ಮ ಯಾರು? ಪೆಪ್ಸಿ ಕೋಲಾ ಬ್ಯಾನ್, ಹೈಡ್ರೋ ಕಾರ್ಬನ್ ಯೋಜನೆ ವಿರುದ್ಧ ಪ್ರತಿಭಟನೆ, ರಜನಿ ರಾಜಕೀಯಕ್ಕೆ ಎಂಟ್ರಿ ಈ ಎಲ್ಲಾ ಸುದ್ದಿಗಳು ಕೊಚ್ಚಿ ಹೋಗುವಂತೆ ಮಾಡಿರುವ #suchileaks ಟ್ವೀಟ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಚಿತ್ರಾ ಅವರ ವಕೀಲರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

'ನನ್ನ ಟ್ವಿಟರ್ ಖಾತೆ ಹ್ಯಾಕ್ ಆಗಿದೆ. ನಾನು ನನ್ನ ಖಾತೆಯನ್ನು ನಿಷ್ಕ್ರಿಯಗೊಳಿಸಿದರೂ ಮತ್ತೆ ಆಕ್ಟಿವೇಟ್ ಆಗುತ್ತಿದೆ. ನಾನು ಖಾತೆಯನ್ನು ಸಂಪೂರ್ಣ ಅಳಿಸಿ ಹಾಕಲು ಸಾಧ್ಯವಿಲ್ಲ. ನನ್ನನ್ನು ಫಾಲೋ ಮಾಡುತ್ತಿರುವ ಅನೇಕರಿಗೆ ಬೇಸರ ಆಗುತ್ತಿದೆ ಎಂಬ ಕಾರಣಕ್ಕಾಗಿ ಸುಮ್ಮನಿದ್ದೇನೆ' ಎಂದು ಆರ್ ಜೆ ಕಮ್ ಗಾಯಕಿ ಸುಚಿತ್ರಾ ಅವರು ಹೇಳಿದ್ದರು.

ಸುಚಿತ್ರಾಗೂ ಅವರ ಖಾತೆಯಿಂದ ಹೊರ ಬರುತ್ತಿರುವ ಆಶ್ಲೀಲ ಚಿತ್ರ, ವಿಡಿಯೋಗಳಿಗೂ ಸಂಬಂಧವಿಲ್ಲ. ಆದರೆ, ಆಕೆ ಮಾನಸಿಕ ಸ್ಥಿತಿ ಅಷ್ಟು ಸರಿಯಿಲ್ಲ, ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿರುವ ಸುಚಿತ್ರಾ ಅವರ ಪತಿ ನಟ ಕಾರ್ತಿಕ್ ಕುಮಾರ್ ಅವರು ಪ್ರತಿಕ್ರಿಯಿಸಿದ್ದರು. ಯಾವುದು ಸತ್ಯ? ಯಾವುದು ಮಿಥ್ಯ? ಎಂಬ ಚರ್ಚೆಯೊಳಗೆ ಕಾಲಿವುಡ್ ನ ಕಾಮಕಂಡ ಬಯಲಾಗಿದೆ...

ತಾರೆಗಳ ಬಣ್ಣ ಕಳಚಿದಾಗ

ತಾರೆಗಳ ಬಣ್ಣ ಕಳಚಿದಾಗ

ಸಿನಿಮಾರಂಗದ ಜನಪ್ರಿಯ ತಾರೆಗಳಾದ ರಜನಿಕಾಂತ್ ಅಳಿಯ ಧನುಷ್, ನಟಿಯರಾದ ತ್ರಿಷಾ ಕೃಷ್ಣನ್, ಹನ್ಸಿಕಾ ಮೋಟ್ವಾನಿ, ನಟಿ, ಗಾಯಕಿ ಅಂಡ್ರಿಯಾ, ನಟಿ ಸಂಚಿತಾ ಶೆಟ್ಟಿ, ಗಾಯಕಿ ಚಿನ್ಮಯಿ ಶ್ರೀಪಾದ, ನಟ ರಾಣಾ ದಗ್ಗುಬಾಟಿ, ಸಂಗೀತಗಾರ ಅನಿರುದ್ಧ್ ರವಿಚಂದರ್ ಅವರ ಖಾಸಗಿ ಮಾಹಿತಿ, ವೈಯಕ್ತಿಕ ಚಿತ್ರಗಳು, ವಿಡಿಯೋಗಳು ಸೋರಿಕೆಯಾಗಿವೆ. ಕಾಲಿವುಡ್ ನ ಒಂದು ವರ್ಗ ವ್ಯವಸ್ಥಿತವಾಗಿ ಈ ಸ್ಟಾರ್ ಗಳ ಬಣ್ಣ ಕಳಚಲು ಖೆಡ್ಡಾ ತೋಡಿದ್ದಾರೆ.

ಇದು ಕುತಂತ್ರವೇ ಅಥವಾ ಸೇಡಿನ ಕ್ರಮವೇ?

ಇದು ಕುತಂತ್ರವೇ ಅಥವಾ ಸೇಡಿನ ಕ್ರಮವೇ?

ಗಾಯಕಿ ಸುಚಿತ್ರಾ ಅವರಿಗೂ ರಜನಿಕಾಂತ್ ಅಳಿಯ ಧನುಷ್ ಅವರಿಗೂ ಕಿತ್ತಾಟವಾಗಿದ್ದರಿಂದ ಈ ರೀತಿ ಚಿತ್ರಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ. ಮುಖ್ಯ ಟಾರ್ಗೆಟ್ ಧನುಷ್ ಆಗಿದ್ದರೂ ಅವರ ಜತೆಗಾರರ ಖಾಸಗಿ ವಿಷಯಗಳನ್ನು ಬಯಲು ಮಾಡುವ ಮೂಲಕ ತಾರೆಗಳ ಕಾಮಕಾಂಡಕ್ಕೆ ಮುನ್ನುಡಿ ಬರೆಯಲಾಗಿದೆ ಎಂಬ ಸುದ್ದಿಯಿದೆ. ಆದರೆ, ಇದೇನು ನನ್ನ ಕ್ಲೈಂಟ್ ಸುಚಿತ್ರಾಗೆ ತಿಳಿದಿಲ್ಲ ಎಂದು ವಕೀಲ ಗಣೇಶ್ ಹೇಳಿದ್ದಾರೆ.

ಗಣೇಶ್ ಹೇಳಿದ್ದೇನು?

ಗಣೇಶ್ ಹೇಳಿದ್ದೇನು?

ವಕೀಲ ಗಣೇಶ್ ಕೆ ಅವರು,

ಸುಚಿತ್ರಾ ಅವರ ಅಕೌಂಟ್ ಹ್ಯಾಕ್ ಆಗಿ ನಾಲ್ಕು ತಿಂಗಳಾಗಿದೆ. ಆಕೆ ಲಾಗ್ ಇನ್ ಮಾಡಲು ಕೂಡಾ ಆಗಿಲ್ಲ. ಟ್ವಿಟ್ಟರ್ ಐಡಿಯಿಂದ ಕೆಟ್ಟ ಸಂದೇಶಗಳು ಹೊರ ಬರುತ್ತಿವೆ ನೋಡು ಎಂದು ಗೆಳತಿಯೊಬ್ಬರು ಮಾಹಿತಿ ನೀಡಿದ ಮೇಲೆ ಚೆಕ್ ಮಾಡಿದ್ದಾರೆ. ಆದರೆ, ಟ್ವಿಟ್ಟರ್ ಖಾತೆಗೆ ಲಾಗ್ ಇನ್ ಆಗಲು ತಜ್ಞರ ನೆರವು ಪಡೆದರೂ ಪ್ರಯೋಜನವಾಗಿಲ್ಲ.
ಹ್ಯಾಕ್ ಆಗಿರುವುದು ಖಾತ್ರಿ

ಹ್ಯಾಕ್ ಆಗಿರುವುದು ಖಾತ್ರಿ

ಅಂತೂ ಇಂತೂ ಲಾಗಿನ್ ಆದರೂ ಆಘಾತ ಕಾದಿತ್ತು. ಅಕೌಂಟ್ ಡೀ ಆಕ್ಟಿವೇಟ್ ಮಾಡುವ ಬಟನ್ ಕಾಣುತ್ತಿರಲಿಲ್ಲ. ಖಾತೆಯ ಅಧಿಕೃತ ಹಿಡಿತ ಕೈ ತಪ್ಪಿದ ಬಳಿಕ ಸುಚಿತ್ರಾ ಅವರು ಟ್ವಿಟ್ಟರ್ ಸಂಸ್ಥೆಗೂ ದೂರು ನೀಡಿದರು. ಸದ್ಯಕ್ಕೆ ಅವರ ಖಾತೆ ನಿಷ್ಕ್ರಿಯವಾಗಿದೆ.(ಚಿತ್ರದಲ್ಲಿ ನೋಡಿ) ಸದ್ಯಕ್ಕೆ ಚಾಲನೆಯಲ್ಲಿರುವ ಖಾತೆಗಳೆಲ್ಲವೂ ನಕಲಿ ಯಾವುದನ್ನು ನಂಬಬೇಡಿ ಎಂದು ವಕೀಲ ಗಣೇಶ್ ಹೇಳಿದ್ದಾರೆ.

English summary
Playback singer Suchitra Karthik Kumar’s twitter account have caused much uproar over the last couple of days. Suchitra’s lawyer, Ganesh Kanna reacted that her account got hacked four weeks ago and she is not linked with #Suchileaks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X