ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರ ಬೆದರಿಕೆ, ಗಾಯಕಿ ಚಿನ್ಮಯಿ ಬೆಂಬಲಕ್ಕೆ 1 ಲಕ್ಷ ಸಹಿ

By Suneel
|
Google Oneindia Kannada News

ಚೆನ್ನೈ, ಮಾರ್ಚ್ 24: ಜನಪ್ರಿಯ ಗಾಯಕಿ ಚಿನ್ಮಯಿ ಶ್ರೀಪಾದ, ತಮಗೆ ಬಂದಿದ್ದ ಅತ್ಯಾಚಾರ ಬೆದರಿಕೆ ಕರೆಗಳ ಟ್ವಿಟರ್ ಹ್ಯಾಂಡಲ್ ಖಾತೆಗಳನ್ನು ಬ್ಲಾಕ್ ಮಾಡಲು ಆನ್ ಲೈನ್ ಕೋರಿಕೆ ಅರ್ಜಿ ಆರಂಭಿಸಿದ್ದಾರೆ. ಈ ಅರ್ಜಿಗೆ ಈಗಾಗಲೇ ಒಂದು ಲಕ್ಷ ಸಹಿಗಳು ದೊರೆತಿದ್ದು, ಶುಕ್ರವಾರ ಬೆಳಿಗ್ಗೆ ವೇಳೆಗೆ Chage.org ಅರ್ಜಿಗೆ 98,171 ಜನರ ಬೆಂಬಲವು ದೊರೆತಿದೆ.

ಗಾಯಕಿ ಚಿನ್ಮಯಿ ಶ್ರೀಪಾದ ಆನ್ ಲೈನ್ ಅರ್ಜಿಯನ್ನು ಮಾರ್ಚ್ 7 ರಂದು ಆರಂಭಿಸಿದ ನಂತರ ಮೈಕ್ರೋ ಬ್ಲಾಗಿಂಗ್ ಸೈಟ್ ನಲ್ಲಿ ನಿರಂತರ ಅತ್ಯಾಚಾರ ಬೆದರಿಕೆ ಹೆದರಿಸಿದ್ದಾರಂತೆ. ಅವರ ಅರ್ಜಿ ಪ್ರಕಾರ ಹಲವು ಟ್ವಿಟರ್ ಬಳಕೆದಾರರು ಆಸಿಡ್ ದಾಳಿ ಮಾಡುವುದಾಗಿ ಮತ್ತು ಇತರೆ ರೀತಿಯಲ್ಲಿ ದಾಳಿ ಮಾಡುವುದಾಗಿ ವಾರ್ನ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Singer Chinmayi's petition to shut down abusive Twitter accounts gets nearly 1 lakh signatures

ಆದರೆ, ಆನ್ ಲೈನ್ ಅರ್ಜಿ ಮುಖಾಂತರ ಜನರ ಬೆಂಬಲ ಪಡೆದಿರುವ ಚಿನ್ಮಯಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

"ಹಲವು ಮಹಿಳೆಯರು ಈ ವೇದಿಕೆಯನ್ನು ತ್ಯಜಿಸಿದ್ದು, ಟ್ವಿಟ್ಟರ್ ಬಳಸುವುದನ್ನು ನಿಲ್ಲಿಸಿದ್ದಾರೆ. ನಾನು ಮಾತ್ರ ಪೊಲೀಸ್ ದೂರು ದಾಖಲಿಸಿ ಹೋರಾಟ ಮಾಡುತ್ತೇನೆ' ಎಂದು ಚಿನ್ಮಯಿ ಗುಡುಗಿದ್ದಾರೆ. ಅಲ್ಲದೇ "ತಮಗೆ ಬೆದರಿಕೆ ಹಾಕಿದವರನ್ನು ಅಭಿಮಾನಿಗಳು ಗುರುತಿಸಿದ್ದು, ಅವರಲ್ಲಿ ಮೂವರನ್ನು ಬಂಧಿಸಲಾಗಿದೆ. ಈ ಮೂವರು 10 ದಿನಗಳ ಕಾಲ ಜೈಲಿನಲ್ಲಿ ಕಳೆಯಬೇಕಿದೆ' ಎಂದಿದ್ದಾರೆ. ತಮಗೆ ಬೆದರಿಕೆ ಕರೆಗಳನ್ನು ಸ್ವೀಕರಿಸಿರುವ ಘಟನೆಯಿಂದ ಆಕ್ರೋಶಕ್ಕೆ ಒಳಗಾಗಿರುವ ಚಿನ್ಮಯಿ, ದಶಲಕ್ಷ ಗಟ್ಟಲೇ ಸಾಮಾನ್ಯ ಮಹಿಳೆಯರ ಕಥೆ ಏನು?, ಅತ್ಯಾಚಾರ ಬೆದರಿಕೆ ಎದುರಿಸುತ್ತಿರುವ ಹಲವರಿಗೆ ಯಾರ ಬೆಂಬಲವು ಇರುವುದಿಲ್ಲ ಎಂಬ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

"ಈ ವೇದಿಕೆ ಮಹಿಳೆಯರಿಗೆ ಹಿಂಸೆ ನೀಡುವುದನ್ನು ಉತ್ತೇಜಿಸಲು ಅಲ್ಲ ಎಂಬ ಜವಾಬ್ದಾರಿಯನ್ನು ಟ್ವಿಟರ್ ಖಚಿತಪಡಿಸಿಕೊಳ್ಳಬೇಕಿದೆ' ಎಂದು ಗಾಯಕಿ ಹೇಳಿದ್ದಾರೆ. ಜೊತೆಗೆ 'ತಾವು ಕೈಗೊಂಡಿರುವ ಆನ್ ಲೈನ್ ದೂರಿನ ಅರ್ಜಿ 'ಮಹಿಳೆಯರಿಗೆ ಅತ್ಯಾಚಾರ ಬೆದರಿಕೆ ಟ್ವೀಟ್ ಮಾಡುವ ಅತಿಹೆಚ್ಚು ಖಾತೆಗಳನ್ನು ನಿರ್ಬಂಧಿಸುವುದರೊಂದಿಗೆ, ಸೈಬರ್ ಕಿರುಕುಳ ವಿರುದ್ಧ ಮಹತ್ವದ ಸಂದೇಶ ನೀಡಲಿದೆ" ಎಂದು ವಿವರಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಚಿನ್ಮಯಿ ಅವರ ಅರ್ಜಿಯನ್ನು 1.50 ಲಕ್ಷ ಬೆಂಬಲಿಗರ ಸಹಿ ದೊರೆತ ನಂತರ ಟ್ವಿಟರ್ ಸಿಇಓ ಜಾಕ್ ಡಾರ್ಸೆ ಗೆ ತಲುಪಿಸಲಾಗುತ್ತದೆಯಂತೆ.

English summary
Singer Chinmayi's petition was started by the singer on March 7, soon after she was faced with a series of rape threats on the micro-blogging site.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X