ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪನ್ನೀರ್ ಸೆಲ್ವಂ ರಾಜೀನಾಮೆ, ಸಿಎಂ ಪಟ್ಟಕ್ಕೆ ಶಶಿಕಲಾ ನಟರಾಜನ್

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರನ್ನು ತಮಿಳುನಾಡಿನ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಸಿಎಂ ಪನ್ನೀರ್ ಸೆಲ್ವಂ ರಾಜೀನಾಮೆ ನೀಡಿದ್ದು, ಶಶಿಕಲಾ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ.

By Mahesh
|
Google Oneindia Kannada News

ಚೆನ್ನೈ, ಫೆಬ್ರವರಿ 05: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರನ್ನು ತಮಿಳುನಾಡಿನ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಸಿಎಂ ಪನ್ನೀರ್ ಸೆಲ್ವಂ ರಾಜೀನಾಮೆ ನೀಡಿದ್ದು, ಶಶಿಕಲಾ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಮುಂದಿನ ವಾರದಲ್ಲಿ ಶುಭ ದಿನವೊಂದನ್ನು ನೋಡಿ ಶಶಿಕಲಾ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.

ಭಾನುವಾರ ಮಧ್ಯಾಹ್ನ ನಡೆದ ಎಐಎಡಿಎಂಕೆ ಶಾಸಕಾಂಗ ಸಭೆಯಲ್ಲಿ ಚಿನ್ನಮ್ಮ ಶಶಿಕಲಾ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು. ಶಶಿಕಲಾ ಅವರ ಹೆಸರನ್ನು ಓ ಪನ್ನೀರ್ ಸೆಲ್ವಂ ಅವರು ಪ್ರಸ್ತಾಪಿಸಿದರು. [ಸಿಎಂ ಹುದ್ದೆಗೆ ಶಶಿಕಲಾ: ಪ್ರಧಾನಿ ಮೋದಿ ಭಯ ಕಾಡಿತೇ?]

Sasikala Natarajan is legislative party leader, O Panneerselvam resigns

ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಶಶಿಕಲಾ, ನಿಮ್ಮೆಲ್ಲರ ಆಯ್ಕೆಯಂತೆ ಸಿಎಂ ಆಗಲು ಒಪ್ಪಿಕೊಂಡಿದ್ದೇನೆ. ನಮ್ಮ ಪ್ರೀತಿಯ 'ಅಮ್ಮ' ತೋರಿಸಿದ ಹಾದಿಯಲ್ಲೇ ಸಾಗೋಣ, ಅವರ ಕನಸು ನನಸು ಮಾಡೋಣ ಎಂದಿದ್ದಾರೆ.

ರಾಜ್ಯಪಾಲ ವಿದ್ಯಾಸಾಗರ್ ಅವರಿಗೆ ಶಾಸಕಾಂಗ ಪಕ್ಷದ ನಿರ್ಣಯವನ್ನು ಫ್ಯಾಕ್ಸ್ ಮೂಲಕ ಕಳಿಸಲಾಗಿದೆ. ಶಶಿಕಲಾ ಅವರು ಜ್ಯೋತಿಷಿಗಳ ಸಲಹೆ ಮೇರೆಗೆ ಫೆಬ್ರವರಿ 6, 7 ಅಥವಾ 9ರಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ. ಮರೀನಾ ಬೀಚಿನಲ್ಲಿರುವ ಜಯಲಲಿತಾ ಅವರ ಸಮಾಧಿ ಸ್ಥಳದ ಬಳಿ ಪ್ರಮಾಣ ವಚನ ಸ್ವೀಕಾರ ಸಮಾಂಭ ನಡೆಯುವ ಸಾಧ್ಯೆತೆಯಿದೆ.

English summary
The AIADMK MLAs elected Sasikala Natarajan as the leader of their legislative party in a meeting held at the party headquarters on Sunday. Chief Minister of Tamil Nadu and current legislative party chief O Panneerselvam proposed her name to be elected for the post of legislative party leader after announcing
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X