ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೆಸ್ಸೆಸ್ ನಿಂದ ಜಯಲಲಿತಾ ಸಾವು ಎಂದವಳ ವಿರುದ್ಧ ಎಫ್ ಐಆರ್

By Mahesh
|
Google Oneindia Kannada News

ಚೆನ್ನೈ, ಅಕ್ಟೋಬರ್ 01: ತೀವ್ರ ಜ್ವರದಿಂದ ಬಳಲುತ್ತಿರುವ ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರನ್ನು ಆರೆಸ್ಸೆಸ್ ಹತ್ಯೆ ಮಾಡಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಹರಡುತ್ತಿದ್ದ ತಮಿಳಾಚಿ ಎಂಬಾಕೆ ವಿರುದ್ಧ ಎಐಎಡಿಎಂಕೆ ದೂರು ನೀಡಿದೆ. ಪ್ರಕರಣ ದಾಖಲಿಸಿಕೊಂಡರಿವ ಚೆನ್ನೈ ಪೊಲೀಸರು ಎಫ್ಐಆರ್ ಹಾಕಿ ವಿಚಾರಣೆ ನಡೆಸುತ್ತಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯ ಹೆಸರಾಗಿರುವ ತಮಿಳಾಚಿ ಅವರು ಜಯಲಲಿತಾ ಅವರು ಮೃತರಾಗಿದ್ದಾರೆ. ಈ ಬಗ್ಗೆ ನನಗೆ ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.[ಜಯಲಲಿತಾ ಚಿಕಿತ್ಸೆಗೆ ಯುಕೆಯಿಂದ ಬಂದ ತಜ್ಞ ವೈದ್ಯ]

RSS killed Jayalalithaa says Tamizachi, Police file FIR against her

ಮುಖ್ಯಮಂತ್ರಿ ಜಯಲಲಿತಾ ಎರಡು ದಿನದ ಹಿಂದೆಯೇ ಮೃತಪಟ್ಟಿದ್ದಾರೆ. ಜಯಾ ಸಾವಿಗೆ ಆರೆಸ್ಸೆಸ್ ಹತ್ಯೆ ಮಾಡಿದೆ. ತಮಿಳುನಾಡಿನಲ್ಲಿ ಹಿಂಸಾಚಾರ, ಗಲಭೆ ಹಬ್ಬಿಸುವುದು ಆರೆಸ್ಸೆಸ್ ನ ಉದ್ದೇಶ ಎಂಬರ್ಥದಲ್ಲಿ ಫೇಸ್‌ಬುಕ್‌ನಲ್ಲಿ ಬರೆದಿದ್ದರು.['ಅಮ್ಮ' ಜಯಲಲಿತಾರಿಗೆ ನಿಜಕ್ಕೂ ಏನು ಕಾಯಿಲೆ?]

ಸ್ವಾತಿ ಕೊಲೆ ಪ್ರಕರಣ, ಹೊಸೂರು ವಿಶ್ವ ಹಿಂದೂ ಪರಿಷತ್ ಮುಖಂಡ ಸೂರಿ ಕೊಲೆ ಪ್ರಕರಣ, ಹಿಂದೂ ಮನ್ನಣಿ ಕಾರ್ಯಕರ್ತ ಶಶಿಕುಮಾರ್ ಕೊಲೆ ಪ್ರಕರಣಗಳನ್ನು ಫೇಸ್ ಬುಕ್ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದರು. [ಜಯಾ ಸಿಂಗಪುರಕ್ಕೆ ಹೋಗ್ಲಿ ಎಂದಿದ್ದು ಬದ್ಧವೈರಿ ಸ್ವಾಮಿ!]

ಈ ಎಲ್ಲಾ ಪ್ರಕರಣಗಳಲ್ಲೂ ಮುಸ್ಲಿಮರನ್ನು ದೂಷಿಸಲಾಗಿದೆ. ರಾಜ್ಯದಲ್ಲಿ ಹಿಂದು-ಮುಸ್ಲಿಂ ದಂಗೆ ಹಬ್ಬಿಸುವ ಉದ್ದೇಶ ಆರೆಸ್ಸೆಸ್ ನದ್ದಾಗಿದೆ. ಗಲಭೆ ಹಬ್ಬಿಸಲು ಜಯಲಲಿತಾ ಅಡ್ಡಿಯಾಗಿರುವರಣ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಬರೆಯಲಾಗಿದೆ.[ಜಯಲಲಿತಾ ಸಭೆ ನಡೆಸಿದ್ದರ ಫೋಟೋ ಎಲ್ಲಿ: ಕರುಣಾನಿಧಿ]

ಎಐಎಡಿಎಂಕೆ ಐಟಿ ವಿಂಗ್ ಸ್ಪಷ್ಟನೆ: ಮುಖ್ಯಮಂತ್ರಿಯವರ ಆರೋಗ್ಯ ಸ್ಥಿರವಾಗಿದೆ. ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದಿದೆ. ಜಯಲಲಿತಾರ ಆರೋಗ್ಯದ ಬಗ್ಗೆ ವದಂತಿ ಹಬ್ಬಿಸುತ್ತಿರುವ ತಮಿಳಚಿ ವಿರುದ್ಧ ದೂರು ನೀಡಿದ್ದು, ಪೊಲೀಸರು ಐಪಿಸಿ ಸೆಕ್ಷನ್ 153 ಎ, 505 (1) ಹಾಗೂ (2) ಅನ್ವಯ ಪ್ರಕರಣ ದಾಖಲಾಗಿದೆ.

ಜಯಲಲಿತಾ ಅವರು ಸೆಪ್ಟೆಂಬರ್ 22ರಂದು ಚಿಕಿತ್ಸೆಗಾಗಿ ಅಪೋಲೋ ಅಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಯುಕೆಯಿಂದ ನುರಿತ ತಜ್ಜರನ್ನು ಕರೆಸಿಕೊಳ್ಳಲಾಗಿದೆ.

English summary
The Chennai Police registered an FIR against popular social media user Tamizachi for spreading rumours over Tamil Nadu Chief Minister Jayalalithaa's health.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X