ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಾ ಸೊಸೆ ದೀಪಾರಿಂದ ಫೆ.24ರಂದು ಹೊಸ ಪಕ್ಷ ಘೋಷಣೆ

ಜಯಲಲಿತಾ ಸೋದರನ ಮಗಳು ದೀಪಾ ಜಯಕುಮಾರ್ ರಾಜಕೀಯಕ್ಕೆ ಎಂಟ್ರಿಕೊಡಲು ಸಿದ್ದತೆ ನಡೆಸುತ್ತಿರುವುದು ಈಗ ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.

By Mahesh
|
Google Oneindia Kannada News

ಚೆನ್ನೈ, ಜನವರಿ 17: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಸೋದರನ ಮಗಳು ದೀಪಾ ಜಯಕುಮಾರ್ ರಾಜಕೀಯಕ್ಕೆ ಎಂಟ್ರಿಕೊಡಲು ಸಿದ್ದತೆ ನಡೆಸುತ್ತಿರುವುದು ಈಗ ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.

ಎಐಎಡಿಎಂಕೆ ಪಕ್ಷದಲ್ಲಿ ಶಶಿಕಲಾಗೆ ಪರ್ಯಾಯ ಮಹಿಳಾ ಶಕ್ತಿಯಾಗಿ ಬೆಳೆಯಲಿದ್ದಾರೆಯೇ, ಪಕ್ಷದಲ್ಲಿ ಒಡಕು ಮೂಡಿದೆಯೇ? ಎಂಬ ಪ್ರಶ್ನೆಗಳು ಎದ್ದಿವೆ. ಫೆಬ್ರವರಿ 24ಕ್ಕೆ ಉತ್ತರ ಸಿಗಲಿದೆ.

ಚೆನ್ನೈನ ಮರೀನಾ ಬೀಚ್ ನಲ್ಲಿ ಮಂಗಳವಾರ(ಜನವರಿ 17) ನಡೆದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಅವರ 100ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ರಾಜಕೀಯ ಪ್ರವೇಶ ಮಾಡುತ್ತಿರುವುದಾಗಿ ದೀಪಾ ಜಯಕುಮಾರ್ ಘೋಷಿಸಿದರು.

ದೀಪಾ ಮುಂದಿನ ಆಯ್ಕೆ?: ನನ್ನ ಮುಂದೆ ಎರಡು ಆಯ್ಕೆಗಳಿವೆ ಎಐಎಡಿಎಂಕೆ ಸೇರುವುದು ಅಥವಾ ಹೊಸ ಪಕ್ಷ ಕಟ್ಟುವುದು. ನಾನು ಈ ಬಗ್ಗೆ ನನ್ನ ಬೆಂಬಲಿಗರ ಜತೆ ಚರ್ಚೆ ಮಾಡಿ ನಿರ್ಧಾ ಕೈಗೊಳ್ಳುತ್ತೇನೆ. ಅಮ್ಮ ಜಯಲಲಿತಾ ಅವರ ಹುಟ್ಟುಹಬ್ಬದ ದಿನ(ಫೆ.24)ದಂದು ಈ ಬಗ್ಗೆ ನಿರ್ಣಯ ಪ್ರಕಟಿಸುತ್ತೇನೆ ಎಂದು ದೀಪಾ ಘೋಷಿಸಿದರು.

ಶಶಿಕಲಾ ನಟರಾಜನ್ ಕುಟುಂಬದ ಬಗ್ಗೆ

ಶಶಿಕಲಾ ನಟರಾಜನ್ ಕುಟುಂಬದ ಬಗ್ಗೆ

ಶಶಿಕಲಾ ನಟರಾಜನ್ ಕುಟುಂಬದವರ ಹೇಳಿಕೆಯನ್ನು ಖಂಡಿಸಿದ ದೀಪಾ, ಜಯಲಲಿತಾ ಅವರನ್ನು ಯಾರೂ ಸಂರಕ್ಷಿಸಬೇಕಾಗಿರಲಿಲ್ಲ. ಅಮ್ಮ ಅವರ ಕೃಪೆಯಿಂದ ಎಲ್ಲರೇ ಹೊರತೂ, ಶಶಿಕಲಾ ಅವರಿಂದ ಆಮ್ಮ ಅವರ ಏಳಿಗೆ ಆಗಲಿಲ್ಲ. ನಾನು ಈ ಬಗ್ಗೆ ಇಲ್ಲಿ ಹೇಳಲಾರೆ. ನಾನು ಚುನಾಯಿತಳಾಗಿ ಅಸೆಂಬ್ಲಿ, ಸಂಸತ್ತಿಗೆ ಪ್ರವೇಶಿಸಿದ ಮೇಲೆ ಎಲ್ಲವನ್ನು ವಿವರಿಸುವೆ ಎಂದರು.

ಎಐಎಡಿಎಂಕೆ ಒಂದು ಕುಟುಂಬದ ಸ್ವತ್ತಲ್ಲ

ಎಐಎಡಿಎಂಕೆ ಒಂದು ಕುಟುಂಬದ ಸ್ವತ್ತಲ್ಲ

ಎಐಎಡಿಎಂಕೆ ಒಂದು ಕುಟುಂಬದ ಸ್ವತ್ತಲ್ಲ. ನಾವೆಲ್ಲರೂ ಪಕ್ಷದ ಸ್ವತ್ತು. ಜಯಲಲಿತಾ ಹಾಗೂ ಎಂಜಾರ್ ಅವರು ಪಕ್ಷ ಹಾಗೂ ಜನರ ಆಶೋತ್ತರಕ್ಕೆ ತಕ್ಕಂತೆ ಬದುಕಿದವರು. ಅವರ ಮಾರ್ಗದಲ್ಲೇ ನಾನು ಸಾಗುವೆ ಎಂದ ದೀಪಾ.

ಜಯಲಲಿತಾ ಅವರ ಸಾವಿಗೆ ಶಶಿಕಲಾ ಅವರೇ ಕಾರಣ

ಜಯಲಲಿತಾ ಅವರ ಸಾವಿಗೆ ಶಶಿಕಲಾ ಅವರೇ ಕಾರಣ

ಜಯಲಲಿತಾ ಅವರ ಸಾವಿಗೆ ಶಶಿಕಲಾ ಅವರೇ ಕಾರಣ ಎಂದು ನೇರವಾಗಿ ಮಾಧ್ಯಮಗಳ ಮುಂದೆ ಆರೋಪಿಸಿದ್ದ ದೀಪಾ, ಕೆಲವು ದಿನಗಳ ಹಿಂದೆಯೇ ರಾಜಕೀಯ ರಂಗ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿದ್ದರು. ತಾವು ರಾಜಕೀಯಕ್ಕೆ ಪ್ರವೇಶಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಶಿಕಲಾ ಅವರಿಗೆ ನೇರವಾಗಿ ತಿರುಗೇಟು ನೀಡಿದ್ದರು.

ಜಯಲಲಿತಾರನ್ನೇ ಹೋಲುವ 42 ವರ್ಷದ ದೀಪಾ

ಜಯಲಲಿತಾರನ್ನೇ ಹೋಲುವ 42 ವರ್ಷದ ದೀಪಾ

ಸೋದರತ್ತೆ ಜಯಲಲಿತಾರನ್ನೇ ಹೋಲುವ 42 ವರ್ಷದ ದೀಪಾರಿಗೆ ಪಕ್ಷದ ಒಂದು ಬಣ ಭಾರೀ ಬೆಂಬಲ ವ್ಯಕ್ತಪಡಿಸಿದ್ದು, ತಮಿಳುನಾಡಿನ ಭವಿಷ್ಯದ ಉಜ್ವಲ ರಾಜಕಾರಣಿ ಎಂದೇ ಬಿಂಬಿಸಿದೆ. ಜಯಲಲಿತಾ ಅವರಂತೆಯೇ ಸೀರೆ ತೊಟ್ಟು ಹಾವಭಾವಗಳನ್ನು ಅನುಕರಿಸುವ ದೀಪಾ ಅವರಲ್ಲಿ ನಾವು ಕಳೆದುಕೊಂಡ ಅಮ್ಮನನ್ನು ಕಾಣುತ್ತೇವೆ ಎಂದು ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಹೇಳುತ್ತಿದ್ದಾರೆ.

English summary
Over a month after the death of Jayalalithaa, her niece Deepa Jayakumar on Tuesday confirmed that she would make her foray into Tamil Nadu politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X