ತ.ನಾಡು ಸಿಎಸ್ ರಾಮ್ ಮನೋಹರ್ ರಾವ್ ಔಟ್, ಗಿರಿಜಾ ಇನ್

Written by: ಅನುಷಾ ರವಿ
Subscribe to Oneindia Kannada

ಚೆನ್ನೈ, ಡಿಸೆಂಬರ್ 22: ಹಿರಿಯ ಐಎಎಸ್ ಅಧಿಕಾರಿ ಗಿರಿಜಾ ವೈದ್ಯನಾಥನ್ ಅವರನ್ನು ಮುಖ್ಯಕಾರ್ಯದರ್ಶಿಯಾಗಿ ತಮಿಳುನಾಡು ಸರಕಾರ ಗುರುವಾರ ನೇಮಿಸಿದೆ. ಈ ಹಿಂದೆ ಆ ಹುದ್ದೆ ನಿರ್ವಹಿಸುತ್ತಿದ್ದ ರಾಮ್ ಮೋಹನ್ ರಾವ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಒಂದು ದಿನ ನಂತರ ಈ ಘೋಷಣೆ ಹೊರಬಿದ್ದಿದೆ.

ಡಾ.ಗಿರಿಜಾ ವೈದ್ಯನಾಥನ್ ಅವರು ಜಾಗೃತದಳ ಹಾಗೂ ಆಡಳಿತ ಸುಧಾರಣೆ ಆಯುಕ್ತೆಯಾಗಿಯೂ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಈ ಎರಡೂ ಹುದ್ದೆಗಳನ್ನು ರಾಮ್ ಮೋಹನ್ ರಾವ್ ನಿರ್ವಹಿಸುತ್ತಿದ್ದರು. ಆದಾಯ ಇಲಾಖೆ ಅಧಿಕಾರಿಗಳು ರಾಮ್ ಮೋಹನ್ ರಾವ್ ಮನೆಯೂ ಸೇರಿದಂತೆ ಹದಿಮೂರು ಸ್ಥಳಗಳ ಮೇಲೆ ದಾಳಿ ನಡೆಸಿದ್ದರು.[ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಮನೆ ಮೇಲೆ ಐಟಿ ದಾಳಿ]

Ram Mohan rao ousted, TN gets new Chief Secretary

ಇದರಿಂದ ರಾಜ್ಯ ಸರಕಾರ ಭಾರೀ ಮುಜುಗರಕ್ಕೆ ಈಡಾಗಿತ್ತು. ದಾಳಿ ನಂತರ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ತುರ್ತು ಸಭೆ ನಡೆಸಿದ್ದರು. ಆ ಸಭೆಯಲ್ಲಿ ಮಾಜಿ ಮುಖ್ಯ ಕಾರ್ಯದರ್ಶಿ ಶೀಲಾ ಬಾಲಕೃಷ್ಣನ್ ಸಹ ಭಾಗವಹಿಸಿದ್ದರು. ಆ ಸಭೆಯಲ್ಲಿ ರಾಮ್ ಮೋಹನ್ ರಾವ್ ಅವರನ್ನು ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ತೆಗೆಯುವ ನಿರ್ಧಾರಕ್ಕೆ ಬರಲಾಯಿತು.[ಮುಖ್ಯ ಕಾರ್ಯದರ್ಶಿ ಸಂಬಂಧಿಕರ ಮನೇಲಿ ಸಿಕ್ತು ಕೆಜಿಗಟ್ಟಲೆ ಚಿನ್ನ]

ರಾಮ್ ಮೋಹನ್ ರಾವ್ ಗೆ ಸಂಬಂಧಿಸಿದ ಹದಿಮೂರು ಸ್ಥಳಗಳಲ್ಲಿ ಮೂವತ್ತು ಕೋಟಿಯಷ್ಟು ಮೊತ್ತದ ಹಣವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡರು. ಈ ಹಿಂದೆ ಡಾ.ಗಿರಿಜಾ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಭೂ ಆಡಾಳಿತದ ಆಯುಕ್ತೆ ಆಗಿದ್ದರು.

English summary
The Tamil Nadu government on Thursday appointed senior IAS officer Dr Girija Vaidyanathan as its new Chief Secretary with immediate effect. The move comes a day after Income tax officials conducted raids at the residences of former Chief Secretary Ram Mohan Rao.
Please Wait while comments are loading...