ರೈತರಿಗೆ 1 ಕೋಟಿ ರು ನೀಡಿದ ಸೂಪರ್ ಸ್ಟಾರ್ ರಜನಿಕಾಂತ್

By:
Subscribe to Oneindia Kannada

ಚೆನ್ನೈ, ಜೂನ್ 18: ತಮಿಳುನಾಡಿನಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸೂಪರ್‌ ಸ್ಟಾರ್ ರಜನಿಕಾಂತ್‌ ಕೈ ಜೋಡಿಸಿದ್ದಾರೆ.
ದಕ್ಷಿಣ ಭಾರತದ ನದಿ ಜೋಡಣೆಗಾಗಿ 1 ಕೋಟಿ ರೂ. ಸಹಾಯಧನ ನೀಡಿದ್ದಾರೆ.

ಪಿ ಆಯಕಣ್ಣು ನೇತೃತ್ವದ 16 ರೈತರಿದ್ದ ನಿಯೋಗವನ್ನು ಭಾನುವಾರಂದು ರಜನಿಕಾಂತ್ ಅವರು ಭೇಟಿ ಮಾಡಿ ಮಾತುಕತೆ ನಡೆಸಿದರು.

Rajinikanth meets farmers, assures support for linking rivers and pledges ₹1 crore

ದೊಡ್ಡ ನದಿಗಳಾದ ಗೋದಾವರಿ, ಕೃಷ್ಣ, ಪಲರು ಮತ್ತು ಕಾವೇರಿ ನದಿ ಸೇರಿದಂತೆ ಪ್ರಮುಖ ನದಿಗಳ ಜೋಡಣೆಗಾಗಿ ರೈತರು ನೀಡಿರುವ ಪ್ರಸ್ತಾವನೆಗೆ ರಜನಿಯವರ ಬೆಂಬಲ ಘೋಷಿಸಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ.

ಸೂಪರ್‌ ಸ್ಟಾರ್‌ ರಜನಿಕಾಂತ್‌ ರಾಜಕೀಯಕ್ಕೆ ಬರುವುದಾಗಿ ಮೂನ್ಸೂಚನೆ ನೀಡಿದ್ದು, ಮುಂದಿನ ತಿಂಗಳು ಇದಕ್ಕೆ ಸಂಬಂಧಿಸಿದಂತೆ ಅಧಿಕೃತ ಹೇಳಿಕೆ ಹೊರಡಿಸುವ ಸಾಧ್ಯತೆಯಿದೆ.

English summary
Tamil Superstar Rajinikanth meets farmers, assures support for linking rivers and pledges ₹1 crore Rajinikanth on Sunday met a delegation of 16 farmers led by P. Ayyakannu and assured them his support for their plea to interlink rivers.
Please Wait while comments are loading...