ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರ ಜಯಾ ಸಾವಿನ ತನಿಖೆ ನಡೆಸಲಿ: ಪನ್ನೀರ್ ಸೆಲ್ವಂ ಆಗ್ರಹ

ಎಐಎಡಿಎಂಕೆ ಪಕ್ಷದಲ್ಲಿ ಕುಟುಂಬ ರಾಜಕೀಯವನ್ನು ತಂದಿದ್ದಾರೆಂದು ಶಶಿಕಲಾ ನಟರಾಜನ್ ವಿರುದ್ಧ ಹರಿಹಾಯ್ದ ಮಾಜಿ ಮುಖ್ಯಮಂತ್ರಿ

|
Google Oneindia Kannada News

ಚೆನ್ನೈ, ಫೆಬ್ರವರಿ 24: ತಮಿಳುನಾಡಿನ ಮುಖ್ಯಮಂತ್ರಿ ಜೆ. ಜಯಲಲಿತಾ ಸಾವು ಪ್ರಕರಣದ ತನಿಖೆ ನಡೆಸಬೇಕು ಎಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಪಕ್ಷದ ಉಚ್ಛಾಟಿತ ನಾಯಕ ಪನ್ನೀರ್ ಸೆಲ್ವಂ ಆಗ್ರಹಿಸಿದ್ದಾರೆ.

ಜಯಲಲಿತಾ ಅವರ ಸಾವಿನ ಬಗ್ಗೆ ಇಡೀ ತಮಿಳುನಾಡಿನ ಜನತೆಯಲ್ಲಿ ಅನೇಕ ಪ್ರಶ್ನೆಗಳಿಗೆ ಈ ಪ್ರಶ್ನೆಗಳಿಗೆ ಸೂಕ್ತ ಉತ್ತರ ದೊರಕಬೇಕೆಂದರೆ ಆ ಬಗ್ಗೆ ನಿಷ್ಪಕ್ಷಪಾತವಾದ ತನಿಖೆಯಾಗಬೇಕು ಎಂದು ಅವರು ಆಶಿಸಿದರು.[ಸಂಕಷ್ಟದಲ್ಲಿರುವ ಶಶಿಕಲಾ ನಟರಾಜನ್ ಮಾಡಿದ 5 ನಿರ್ಣಾಯಕ ತಪ್ಪುಗಳು]

Panner Selvam urges central government to probe into Jayalalitha death

ಆನಂತರ, ಶಶಿಕಲಾ ಅವರ ಸಂಬಂಧಿಗಳಿಗೆ ಎಐಎಡಿಎಂಕೆಯ ಪ್ರಮುಖ ಸ್ಥಾನಗಳಿಗೆ ನೇಮಕ ಮಾಡಿರುವುದರ ವಿರುದ್ಧ ಕಿಡಿಕಾರಿದ ಅವರು, ''ಎಐಎಡಿಎಂಕೆಯ ಸಂಸ್ಥಾಪಕ ಎಂಜಿ ರಾಮಚಂದ್ರನ್ ಅವರು ನಿಧನರಾದಾಗಲೂ ಇಂಥ ಕೌಟುಂಬಿಕ ರಾಜಕಾರಣ ಪಕ್ಷದೊಳಗೆ ಬರುವ ಪ್ರಮೇಯವೇರ್ಪಟ್ಟಿತ್ತು. ಆದರೆ, ಅದಕ್ಕೆ ಅಂದು ಜಯಲಲಿತಾ ಅವರು ತಡೆಯೊಡ್ಡಿದ್ದರು.[ಜಯಲಲಿತಾ ಗೆಳತಿ ಶಶಿಕಲಾ ನಟರಾಜನ್ ಕೈದಿ ನಂಬರ್ 9934]

ಪಕ್ಷದೊಳಗೆ ಕುಟುಂಬ ರಾಜಕಾರಣ ಬರಕೂಡದೆಂಬುದು ಅವರ ನಿಲುವಾಗಿತ್ತು. ಆದರೆ, ಈಗ, ಶಶಿಕಲಾ ಅವರು ಪಕ್ಷದಲ್ಲಿ ತಮ್ಮ ಸಂಬಂಧಿಕರನ್ನು ಕರೆತಂದು ಅವರಿಗೆ ಪ್ರಮುಖ ಸ್ಥಾನಗಳನ್ನು ನೀಡಿರುವುದು ಪಕ್ಷದಲ್ಲಿ ಕುಟುಂಬ ರಾಜಕೀಯಕ್ಕೆ ನಾಂದಿ ಹಾಡಿದಂತಾಗಿದೆ. ಇದರ ವಿರುದ್ಧ ಹೋರಾಡುತ್ತೇವೆ ಎಂದು ಅವರು ತಿಳಿಸಿದರು.

English summary
Tamilnadu former Chief Minister Panneer Selvam urged that the central government probe the mysterious death of former Chief Minister of the state J. Jayalalitha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X