ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈದುರಂತ: ಆಮ್ಲಜನಕ ಸಿಗದೆ, ಆಸ್ಪತ್ರೆಯಲ್ಲಿ 14 ರೋಗಿಗಳು ಸಾವು

By Mahesh
|
Google Oneindia Kannada News

ಬೆಂಗಳೂರು, ಡಿ. 04: ಭಾರಿ ಮಳೆಗೆ ಸಿಲುಕಿ ನಲುಗುತ್ತಿರುವ ಚೆನ್ನೈ ನಗರದಲ್ಲಿ ಶುಕ್ರವಾರ ತುಂತುರು ಮಳೆ ಸುರಿಯುತ್ತಿದೆ. ಹಲವೆಡೆ ಜನರು ರಸ್ತೆಗಿಳಿದು ಧೈರ್ಯವಾಗಿ ಓಡಾಡುತ್ತಿದ್ದಾರೆ. ಅದರೆ, ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದು ಭಾರಿ ದುರಂತಕ್ಕೆ ನಾಂದಿ ಹಾಡಿದೆ.

ಚೆನ್ನೈ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಮ್ಲಜನಕ ಪೂರೈಕೆ ಸಮರ್ಪಕವಾಗಿ ಸಿಗದ ಕಾರಣ 14 ಜನ ರೋಗಿಗಳು ಸಾವನ್ನಪ್ಪಿರುವ ದುರಂತ ಘಟನೆ ಸಂಭವಿಸಿದೆ. ಮಿಯೋಟ್ ಇಂಟರ್ ನ್ಯಾಷನಲ್ ಆಸ್ಪತ್ರೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.[ಚೆನ್ನೈ: ತಾಯಿ ಶವದ ಮುಂದೆ 20 ಗಂಟೆ ಕೂತಿದ್ದ ಮಗಳು]

Chennai 14 die 75 patients were in a highly critical state

ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ತಮಿಳುನಾಡಿನ ಆರೋಗ್ಯ ಇಲಾಖೆ ಕಾರ್ಯದರ್ಶಿ, ಇದೊಂದು ದುರ್ಘಟನೆಯಾಗಿದ್ದು, ಕೂಡಲೇ ಖಾಸಗಿ ಆಸ್ಪತ್ರೆಯಿಂದ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸಲಾಗುತ್ತಿದೆ.[ಚೆನ್ನೈ ಅಣ್ತಮ್ಮಂದಿರಿಗೆ ಟ್ವಿಟ್ಟರ್ ಮಿತ್ರರಿಂದ ನೆರವು]

75ಕ್ಕೂ ಅಧಿಕ ರೋಗಿಗಳ ದೇಹ ಸ್ಥಿತಿ ವಿಷಮವಾಗಿದೆ. 57 ರೋಗಿಗಳು ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಎಲ್ಲವೂ ನಿಯಂತ್ರಣದಲ್ಲಿದೆ ಎಂದಿದ್ದಾರೆ.

ಮಳೆ ಹಾವಳಿ ಆರಂಭವಾದಾಗಿನಿಂದಲೂ ಸುಮಾರು 575ಕ್ಕೂ ಅಧಿಕ ರೋಗಿಗಳಿಗೆ ಮಿಯೋಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಿ, ನಿಜವಾದ ಕಾರಣವನ್ನು ತಿಳಿದುಕೊಳ್ಳಲಾಗುವುದು ಹಾಗೂ ಬೇರೆ ಯಾವ ಆಸ್ಪತ್ರೆಯಲ್ಲೂ ಈ ರೀತಿ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿ ರಾಧಾಕೃಷ್ಣನ್ ಹೇಳಿದ್ದಾರೆ.

English summary
Chennai: 18 die at Miot International hospital in Chennai after oxygen supply failed in ICU. More than 75 patients were in a highly critical state confirms Tamil Nadu Health Secy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X