ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಲಲಿತಾ ಸಾವಿನ ತನಿಖೆಗೆ ಸಿದ್ಧ: ಅಪೊಲೊ ಆಸ್ಪತ್ರೆ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಯಲಿತಾ ಅವರ ಚಿಕಿತ್ಸೆಯಲ್ಲಿ ಯಾರ ಹಸ್ತಕ್ಷೇಪವೂ ಆಗಿಲ್ಲ. ಚೆನ್ನೈನಲ್ಲಿನ ಅಪೊಲೊ ಆಸ್ಪತ್ರೆಯ ಮುಖ್ಯಸ್ಥರ ಸ್ಪಷ್ಟನೆ. ಇದೇ ಆಸ್ಪತ್ರೆಯಲ್ಲಿ ತಮ್ಮ ಕೊನೆಯ ದಿನಗಳಲ್ಲಿ ಚಿಕಿತ್ಸೆ ಪಡೆದಿದ್ದ ಜಯಲಲಿತಾ.

|
Google Oneindia Kannada News

ಚೆನ್ನೈ, ಜುಲೈ 19: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ನೀಡಲಾಗಿರುವ ಚಿಕಿತ್ಸೆಯಲ್ಲಿ ಯಾರ ಹಸ್ತಕ್ಷೇಪವೂ ಆಗಿಲ್ಲ. ಎಂದು ಅಪೊಲೊ ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷರು ತಿಳಿಸಿದ್ದಾರೆ.

ಜಯಲಲಿತಾ ಎಸ್ಟೇಟ್ ನ ಉದ್ಯೋಗಿ ಆತ್ಮಹತ್ಯೆಜಯಲಲಿತಾ ಎಸ್ಟೇಟ್ ನ ಉದ್ಯೋಗಿ ಆತ್ಮಹತ್ಯೆ

ಬುಧವಾರ, ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿ. ರೆಡ್ಡಿ, ''ಜಯಲಲಿತಾ ಅವರಿಗೆ ಆಸ್ಪತ್ರೆಯಲ್ಲಿ ನೀಡಲಾದ ಎಲ್ಲಾ ರೀತಿಯ ಚಿಕಿತ್ಸೆಗಳ ಬಗ್ಗೆ ಸೂಕ್ತ ದಾಖಲಾತಿಯನ್ನು ನಾವು ಹೊಂದಿದ್ದೇವೆ. ಅಲ್ಲದೆ, ಅವರಿಗೆ ನೀಡಲಾಗಿರುವ ಚಿಕಿತ್ಸೆಯಲ್ಲಿ ಯಾರ ಹಸ್ತಕ್ಷೇಪವೂ ಆಗಿಲ್ಲ. ಇದನ್ನು ದಾಖಲೆಗಳೇ ಹೇಳುತ್ತವೆ. ಈ ಹಿನ್ನೆಲೆಯಲ್ಲಿ, ನಾವು ಯಾವುದೇ ತನಿಖೆಗೆ ಸಿದ್ಧವಿದ್ದೇವೆ'' ಎಂದು ತಿಳಿಸಿದರು.

no interference treatment apollo hospitals ready probe jayalalithaas death

ಡಿಸೆಂಬರ್ ವೇಳೆಗೆ ಜಯಲಲಿತಾ ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆ ಸಂಭವಿಸಿದ ಹೃದಯಾಘಾತಕ್ಕೆ ಅವರು ಸಾವನ್ನಪ್ಪಿದರು ಎಂದು ಅವರು ವಿವರಿಸಿದರು.

ಐಎಸ್ ಉಗ್ರರೊಂದಿಗೆ ಸಂಪರ್ಕ: ಚೆನ್ನೈನಲ್ಲಿ ವ್ಯಕ್ತಿಯೊಬ್ಬನ ಬಂಧನ ಐಎಸ್ ಉಗ್ರರೊಂದಿಗೆ ಸಂಪರ್ಕ: ಚೆನ್ನೈನಲ್ಲಿ ವ್ಯಕ್ತಿಯೊಬ್ಬನ ಬಂಧನ

ಕಳೆದ ವರ್ಷಾಂತ್ಯದ ಹೊತ್ತಿಗೆ ಜಯಲಲಿತಾ ಅವರ ಸಾವು ಸಂಭವಿಸಿದ್ದರೂ, ಅವರ ಸಾವಿನ ವಿಚಾರ ಮಾತ್ರ ಬೂದಿ ಮುಚ್ಚಿದ ಕೆಂಡದಂತಿದೆ. ಜಯಲಲಿತಾ ಅವರ ಕಟ್ಟಾ ಅಭಿಮಾನಿಗಳು ಪ್ರಕರಣದ ತನಿಖೆ ನಡೆಸಬೇಕೆಂದು ಆಗಾಗ ಆಗ್ರಹಿಸುತ್ತಲೇ ಬಂದಿದ್ದಾರೆ.

ಕಳೆದ ವರ್ಷ ಸೆಪ್ಟಂಬರ್ 22ರಂದು ನಿರ್ಜಲೀಕರಣ (ಡಿ ಹೈಡ್ರೇಷನ್) ಎಂಬ ಕಾರಣಕ್ಕಾಗಿ ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಡಿ. 5ರಂದು ನಿಧನ ಹೊಂದಿದ್ದರು.

English summary
The Chairman of Apollo Hospitals said on Tuesday that there was "no interference" in the treatment given to former Tamil Nadu Chief Minister J. Jayalalithaa and the organization is ready to face any probe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X