ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀರಂಗಂನಲ್ಲಿ ಕನ್ನಡ ಹರಿದಾಸ ಸಾಹಿತ್ಯದ ಡಿಂಡಿಮ

ಮುಳಬಾಗಿಲು ಶ್ರೀಪಾದರಾಜರ ಮಠ ಹಾಗೂ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೇದಿಕ್ ಸೈನ್ಸ್ ಟ್ರಸ್ಟ್ ನಿಂದ ಆಯೋಜನೆಯಲ್ಲಿ ತಮಿಳುನಾಡಿನಲ್ಲಿ ಕನ್ನಡ ಹರಿದಾಸ ಸಾಹಿತ್ಯದ ಡಿಂಡಿಮ ಬಾರಿಸಲಾಯಿತು. ಶ್ರೀರಂಗಂನಲ್ಲಿ ವ್ಯಾಸೋತ್ಸವನ್ನು ಆಚರಿಸಲಾಯಿತು

By Mahesh
|
Google Oneindia Kannada News

ಶ್ರೀರಂಗಂ(ತಮಿಳುನಾಡು), ಮಾರ್ಚ್ 24: ಮುಳಬಾಗಿಲು ಶ್ರೀಪಾದರಾಜರ ಮಠ ಹಾಗೂ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೇದಿಕ್ ಸೈನ್ಸ್ ಟ್ರಸ್ಟ್ ನಿಂದ ಆಯೋಜನೆಯಲ್ಲಿ ತಮಿಳುನಾಡಿನಲ್ಲಿ ಕನ್ನಡ ಹರಿದಾಸ ಸಾಹಿತ್ಯದ ಡಿಂಡಿಮ ಬಾರಿಸಲಾಯಿತು. ಶ್ರೀರಂಗಂನಲ್ಲಿ ವ್ಯಾಸೋತ್ಸವನ್ನು ವಿಜೃಂಭಣೆಯಿಂದ ಮಾರ್ಚ್ 21, 22ರಂದು ದಾಸ ಸಾಹಿತ್ಯ ಉತ್ಸವದ ಮೂಲಕ ಆಚರಿಸಲಾಯಿತು.

ವ್ಯಾಸರಾಜ ಗುರುಸಾರ್ವಭೌಮರು ಶ್ರೀರಂಗಂನಲ್ಲಿ ರಚಿಸಿ ಸಮರ್ಪಿಸಿದ ಸ್ಮರಣಾರ್ಥ ಮತ್ತು ಶ್ರೀಪಾದರಾಜ ಮಠದಿಂದ ಪ್ರಕಾಶನಗೊಂಡಿರುವ ವಿದ್ವಾನ್ ಬೆಮ್ಮೆತ್ತಿ ವೆಂಕಟೇಶಾಚಾರ್ಯರಿಂದ ಸಂಪಾದಿತ ಪರಿಪೂರ್ಣ ಚಂದ್ರಿಕಾ ಗ್ರಂಥದ ಕೊನೆಯ ಸಂಪುಟದ ಲೋಕಾರ್ಪಣೆಯ ಅಂಗವಾಗಿ ಮಾ. 21, 22 ಮತ್ತು 23ರಂದು ರಾಷ್ಟ್ರೀಯ ವ್ಯಾಸೋತ್ಸವ' ಆಯೋಜಿಸಿತ್ತು.

National institute of Vedic sciences Vyasaraja Utsav Srirangam

ಶ್ರೀಪಾದರಾಜರ ಮಠದ ಕೇಶವನಿಧಿ ತೀರ್ಥರು ವ್ಯಾಸ ದಾಸ ಸಾಹಿತ್ಯ ಸಂಸ್ಕೃತಿ ಮಹೋತ್ಸವಕ್ಕೆ ಚಾಲನೆ ನೀಡಿದರು. ತಂಬಿಹಳ್ಳಿ ವಿದ್ಯಾಸಾಗರ ಮಾಧವತೀರ್ಥರು, ಭಂಡಾರಕೇರಿ ವಿದ್ಯೇಶತೀರ್ಥರು, ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆ.ಎಸ್‌ಆರ್‍ಪಿ ಎಜಿಡಿಪಿ ಭಾಸ್ಕರ್ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಜೆ ಶ್ರೀವ್ಯಾಸರಾಜ ಗ್ರಂಥ ಮತ್ತು ಚಿತ್ರಪಟವನ್ನು ಆನೆಯ ಮೇಲಿಟ್ಟು ರಂಗನಾಥಸ್ವಾಮಿ ದೇವಾಲಯದ ಮಹಾದ್ವಾರದಿಂದ ನಾಲ್ಕು ಚಿತ್ತರೈ ಬೀದಿಗಳ ಮೂಲಕ ವ್ಯಾಸರಾಜ ಮಠದವರೆಗೆ ಅದ್ದೂರಿ ಮೆರವಣಿಗೆ, ನಂತರ ಕೊವಿಲಡಿ ಮಧ್ವಪ್ರಸಾದ್ ಮತ್ತು ಶ್ರೀಮತಿ ಸರಸ್ವತಿ ಶ್ರೀಪತಿ ರವರಿಂದ ದಾಸ ಸಾಹಿತ್ಯ ಸಿರಿ - ಸಂಗೀತ ಝರಿ ಏರ್ಪಡಿಸಲಾಗಿತ್ತು.

ವಿದ್ವಾಂಸರಾದ ಪ್ರೊ. ಡಿ.ಪ್ರಹ್ಲದಾಚಾರ್ಯ, ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ, ಡಾ. ಅರಳುಮಲ್ಲಿಗೆ ಪಾರ್ಥಸಾರಥಿ, ಡಾ.ಎ.ವಿ ನಾಗಸಂಪಿಗೆ ಅಧ್ಯಕ್ಷತೆಯಲ್ಲಿ ವ್ಯಾಸ ದಾಸ ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ವಿವಿಧ ಗೋಷ್ಠಿ ನಡೆಯಿತು, ಮೂರು ದಿನವೂ ಸಂಜೆ ಸಂಗೀತ ವಿದ್ವಾಂಸರಿಂದ ದಾಸ ಸಾಹಿತ್ಯ ಸಂಗೀತ ಝರಿ ( ಶ್ರೀ ವ್ಯಾಸರಾಜರು ಮತ್ತು ಶ್ರೀಪಾದರಾಜರ ರಚನೆ ಆಧಾರಿತ ಕೃತಿ) ಆಯೋಜನೆಗೊಂಡಿತ್ತು.

National institute of Vedic sciences Vyasaraja Utsav Srirangam

ಮೈಸೂರಿನ ವಿದ್ವಾಂಸ ಡಾ.ಎನ್.ಕೆ.ರಾಮಶೇಷನ್, ಎ.ಆರ್ ರಘುರಾಮ, ಚತುರ್ವೇದಿ ವೇದವ್ಯಾಸಾಚಾರ್ಯ , ಸುಬ್ರಾಯ ಭಟ್ಟ , ಪುರಿಯ ಗೌಡೀಯ ಮಠದ ಹರಿಪ್ರಿಯ ದಾಸ, ಡಾ.ವಾಸುದೇವ ಅಗ್ನಿಹೋತ್ರಿ, ಡಾ ಸುಭಾಶ್ ಖಾಕಂಡಕಿ , ಹೆಚ್ ಬಿ ಲಕ್ಷ್ಮಿನಾರಾಯಣ , ಕೃಷ್ಣ ,ಪ್ರಾಣೇಶ್ ಮತ್ತಿತರರು ಭಾಗವಹಿಸಿದ್ದರು. ರಾಜಲಕ್ಷ್ಮೀ ಪಾರ್ಥಸಾರಥಿ ಅಧ್ಯಕ್ಷತೆಯಲ್ಲಿ ಮಹಿಳಾ ಗೋಷ್ಠಿಯೂ ನಡೆಯಿತು.

English summary
National institute of Vedic sciences in association with Panchamoola Bridavan and Sripadaraja math conducted Vyasaraja Utsav at Srirangam, Tamil Nadu on March 21, 22,2017, Here is a report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X