ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೂಡಂಕುಳಂ ವಿದ್ಯುತ್ ರಾಜ್ಯಕ್ಕೆ ಯಾವಾಗ ಸಿಗಲಿದೆ?

By Mahesh
|
Google Oneindia Kannada News

ಚೆನ್ನೈ, ಅ.22: ಕೂಡಂಕುಳಂ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕವನ್ನು ದಕ್ಷಿಣ ವಿದ್ಯುತ್ ಜಾಲದೊಂದಿಗೆ ಬೆಸೆಯಲಾಗಿದೆ. ಭಾರತ-ರಷ್ಯ ಪರಮಾಣು ಸಹಯೋಗದಲ್ಲಿ ಕೈಗೊಳ್ಳಲಾಗಿರುವ ವಿದ್ಯುತ್ ಉತ್ಪಾದನೆ ತಮಿಳುನಾಡಿನ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಕರ್ನಾಟಕ ಸೇರಿದಂತೆ ನೆರೆ ರಾಜ್ಯಗಳು ವಿದ್ಯುತ್ ಹಂಚಿಕೆ ಲೆಕ್ಕಾಚಾರ ಶುರು ಮಾಡಿಕೊಳ್ಳಬೇಕಿದೆ.

ಪ್ರಧಾನಿ ಮನಮೋಹನ್ ಸಿಂಗ್ ಅವರು ಎರಡು ದಿನಗಳ ರಷ್ಯ ಪ್ರವಾಸದಲ್ಲಿರುವ ಸಂದರ್ಭದಲ್ಲೇ ಕೂಡಂಕುಳಂ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕವನ್ನು ದಕ್ಷಿಣ ವಿದ್ಯುತ್‌ ಜಾಲದೊಂದಿಗೆ ಬೆಸೆಯಲಾಗಿರುವುದು ವಿಶೇಷ. [ಮೋದಿ-ಪುಟಿನ್ ರಿಂದ ಅಣು ವಿದ್ಯುತ್ ಸ್ಥಾವರಕ್ಕೆ ಚಾಲನೆ, ಜಯಾ ಸಾಕ್ಷಿ]

ಮಾಸ್ಕೋದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಷ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಮಾತುಕತೆ ನಡೆಸಿ ಕೂಡಂಕುಳಂ ಅಣು ವಿದ್ಯುತ್ ಸ್ಥಾವರದಲ್ಲಿ ಇನ್ನೆರಡು ವಿದ್ಯುದುತ್ಪಾದನಾ ಘಟಕಗಳನ್ನು ಸ್ಥಾಪಿಸುವ ಭರವಸೆ ಹೊರ ಹಾಕಿದ್ದಾರೆ.

ಭಾರತ ಮತ್ತು ರಷ್ಯ ಸರ್ಕಾರಗಳ ಜಂಟಿ ಯೋಜನೆಯಾಗಿರುವ ತಮಿಳುನಾಡಿನ ಕೂಡಂಕುಳಂನ ಪರಮಾಣು ಸ್ಥಾವರಕ್ಕೆ ಇದ್ದ ಎಲ್ಲ ಅಡ್ಡಿ ಆತಂಕಗಳೂ ಕಳೆದ ಮೇ ತಿಂಗಳಿನಲ್ಲೇ ನಿವಾರಣೆಯಾಗಿತ್ತು. ಸುರಕ್ಷತೆ ಬಗ್ಗೆ ಸಾರ್ವಜನಿಕರಿಗೆ ಇದ್ದ ಆತಂಕ ದೂರವಾಗಿ, ಸ್ಥಾವರಕ್ಕೆ ಸುಪ್ರೀಂಕೋರ್ಟ್ ನ್ಯಾಯಪೀಠ ಗ್ರೀನ್ ಸಿಗ್ನಲ್ ನೀಡಿತ್ತು.

Kudankulam nuclear plant begins power generation

ಇದರ ಬೆನ್ನಲ್ಲೇ Atomic Energy Regulatory Board (AERB), Nuclear Power Corporation of India Ltd (NPCIL) ಹಾಗೂ Department of Atomic Energy (DAE) ಕೂಡಂಕುಳಂನ ಅಣು ಸ್ಥಾವರಕ್ಕೆ ಅಂತಿಮ ಕ್ಲಿಯರೆನ್ಸ್ ನೀಡಿತ್ತು.

ಕೂಡಂಕುಳಂನ ಮೊದಲ ಘಟಕವು ಜು.13ರಂದೇ ಕಾರ್ಯಾರಂಭಗೊಂಡಿತ್ತು. ಇದರಿಂದ ಕರ್ನಾಟಕಕ್ಕೆ ಏನು ಲಾಭ? ಏರುತ್ತಿರುವ ವಿದ್ಯುತ್ ದರ ಇಳಿಕೆ ಸಾಧ್ಯವೇ? ವಿದ್ಯುತ್ ಕ್ಷಾಮ ನೀಗುತ್ತದೆಯೇ? ಎಂಬ ಪ್ರಶ್ನೆಗಳು ಎದ್ದಿವೆ.

ಕೂಡಂಕುಳಂ ಯೋಜನೆಯಡಿ 1300 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ನಿಯಮದ ಪ್ರಕಾರ ವಿದ್ಯುತ್ ಸ್ಥಾವರ ಇರುವ ರಾಜ್ಯಕ್ಕೆ ಉತ್ಪಾದನೆಯ ಶೇ 50 ರಷ್ಟು ಉತ್ಪನ್ನ ಸೇರಲಿದ್ದು, ಉಳಿದದ್ದು ಬೇಡಿಕೆ ಆಧಾರದ ಮೇಲೆ ಕೇಂದ್ರ ಸರ್ಕಾರ ಹಂಚಿಕೆ ಮಾಡಲಿದೆ. ಕರ್ನಾಟಕ 220 ಮೆ.ವ್ಯಾ ಹಾಗೂ ಕೇರಳ 133 ಮೆ.ವ್ಯಾ ವಿದ್ಯುತ್ ಬೇಡಿಕೆ ಇಟ್ಟಿದೆ.

2011 ರಿಂದ ಜೂನ್ 2012ಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಶೇ 24 ರಷ್ಟು ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದು, 2013ರಲ್ಲೂ ಪರಿಸ್ಥಿತಿ ಬದಲಾಗಿಲ್ಲ. ವಿದ್ಯುತ್ ಸೋರಿಕೆ, ಪರ್ಯಾಯ ಇಂಧನ ಬಳಕೆಯತ್ತ ಸಾರ್ವಜನಿಕರು ಗಮನ ಹರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

English summary
Kudankulam Nuclear Power Plant, that has come up despite huge protests, on Tuesday. The first unit of the Kudankulam Nuclear Power Plant synchronised with the southern power grid, marking a major milestone in power generation of the Indo-Russian nuclear collaboration in Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X