ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನ ಮುಖ್ಯಮಂತ್ರಿ ಇಕೆ ಪಳನಿಸ್ವಾಮಿ ವ್ಯಕ್ತಿಚಿತ್ರ

ಪಳನಿಸ್ವಾಮಿ ಅವರು 12ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗುತ್ತಿದ್ದಾರೆ. ಇಪಿಎಸ್ ಎಂದು ಕರೆಯಲ್ಪಡುವ ಎಡಪ್ಪಾಡಿ ಪಳನಿಸ್ವಾಮಿ ಅವರ ವ್ಯಕ್ತಿಚಿತ್ರ ಇಲ್ಲಿದೆ...

By Mahesh
|
Google Oneindia Kannada News

ಚೆನ್ನೈ, ಫೆಬ್ರವರಿ 16: ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರಿಗೆ ಸರ್ಕಾರ ರಚಿಸುವಂತೆ ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್ ಆಹ್ವಾನ ನೀಡಿದ್ದಾರೆ. ಈ ಮೂಲಕ ಪಳನಿಸ್ವಾಮಿ ಅವರು 12ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗುತ್ತಿದ್ದಾರೆ. ಇಪಿಎಸ್ ಎಂದು ಕರೆಯಲ್ಪಡುವ ಎಡಪ್ಪಾಡಿ ಪಳನಿಸ್ವಾಮಿ ಅವರ ವ್ಯಕ್ತಿಚಿತ್ರ ಇಲ್ಲಿದೆ...

ಅಕ್ರಮ ಆಸ್ತಿ ಪ್ರಕರಣದಲ್ಲಿ ಅಪರಾಧಿ ಎನಿಸಿದ ಮೇಲೆ ಚೆನ್ನೈನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ತೆರಳುವುದಕ್ಕೂ ಮುನ್ನ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರು ಇ ಪಳನಿಸ್ವಾಮಿ ಹೆಸರನ್ನು ಸಿಎಂ ಸ್ಥಾನಕ್ಕೆ ಸೂಚಿಸಿ, ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದ್ದರು.[ತಮಿಳುನಾಡು ಮುಖ್ಯಮಂತ್ರಿಯಾಗಿ ಕೆ ಪಳನಿಸ್ವಾಮಿ]

ದಿವಂಗತ ಸಿಎಂ ಜೆ ಜಯಲಲಿತಾ ಅವರು ಮೂರು ದಶಕಗಳ ಕೆಳಗೆ ತಮ್ಮ ಆಪ್ತ ಬಳಗದಲ್ಲಿ ಒಬ್ಬರಾಗಿ ಪಳನಿಸ್ವಾಮಿ ಅವರನ್ನು ಸೇರಿಸಿಕೊಂಡಿದ್ದರು. ಸದ್ಯ ಲೋಕೋಪಯೋಗಿ, ಹೆದ್ದಾರಿ ಹಾಗೂ ಸಣ್ಣ ಬಂದರು ಖಾತೆ ಸಚಿವರಾಗಿರುವ ಪಳನಿಸ್ವಾಮಿ ಅವರು ಓ ಪನ್ನೀರ್ ಸೆಲ್ವಂರಂತೆ ತಮಿಳರ 'ಅಮ್ಮ' ಜಯಲಲಿತಾ ಅವರ ನಿಷ್ಠಾವಂತ ಸೇನಾನಿ.

ವೈಯಕ್ತಿಕ ಹಿನ್ನಲೆ

ವೈಯಕ್ತಿಕ ಹಿನ್ನಲೆ

62 ವರ್ಷ ವಯಸ್ಸಿನ ಪಳನಿಸ್ವಾಮಿ ಅವರು ಸೇಲಂ ಜಿಲ್ಲೆ, ಎಡಪ್ಪಾಡಿ ತಾಲೂಕಿನ, ನೆಡುಡಂಗಲಂ ಗ್ರಾಮಕ್ಕೆ ಸೇರಿದವರು. ಗೌಂಡರ್ ಸಮುದಾಯ ಮುಖಂಡರಾಗಿ ಹೆಸರು ಮಾಡಿದವರು. ತಮಿಳುನಾಡಿನಲ್ಲಿ ಗೌಂಡರ್ ಸಮುದಾಯ ಒಬಿಸಿಗೆ ಸೇರಿದೆ. ಪತ್ನಿ ಹೆಸರು ರಾಧಾ, ಮಗನ ಹೆಸರು ನಿತಿನ್.

ರಾಜಕೀಯ ಬದುಕು

ರಾಜಕೀಯ ಬದುಕು

1980ರ ದಶಕದಲ್ಲಿ ಎಐಎಡಿಎಂಕೆ ಸೇರಿದ ಪಳನಿ ಸ್ವಾಮಿ ಅವರು ಎಂಜಿ ರಾಮಚಂದ್ರನ್ ಆವರ ಅಕಾಲಿಕ ಸಾವಿನ ನಂತರ ಪಕ್ಷ ಇಬ್ಭಾಗವಾಗುವ ಸ್ಥಿತಿ ತಲುಪಿದಾಗ ಜಯಲಲಿತಾ ಪರ ವಹಿಸಿಕೊಂಡರು.
1989ರಲ್ಲಿ ಅಸೆಂಬ್ಲಿ ಟಿಕೆಟ್ ಪಡೆದು ಮೊದಲ ಬಾರಿಗೆ ಎಡಪ್ಪಾಡಿ ಕ್ಷೇತ್ರದಿಂದ ಗೆಲುವು ಕಂಡರು. ನಂತರ 1991, 2011 ಹಾಗೂ 2016ರಲ್ಲಿ ಚುನಾವಣೆ ಗೆದ್ದು ಶಾಸಕರಾದರು. ಮೇ 2016ರಲ್ಲಿ 42,022 ಅಂತರದ ಮತಗಳಿಂದ ಸುಲಭವಾಗಿ ಜಯ ಗಳಿಸಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದರು.

ಯೋಜನೆಗಳನ್ನು ತಲುಪಿಸಿದವರು

ಯೋಜನೆಗಳನ್ನು ತಲುಪಿಸಿದವರು

ಪಳನಿಸ್ವಾಮಿ ಅವರು ಒಬಿಸಿ ನಾಯಕರಾಗಿ ಬೆಳೆದಿದ್ದು, ರಾಜಕೀಯವಾಗಿಯೂ ಪ್ರಭಾವ ಹೊಂದಿದ್ದಾರೆ. ಜಯಲಲಿತಾ ಅವರ ನಂಬುಗೆಯ ವಲಯದಲ್ಲಿ ಪಳನಿಸ್ವಾಮಿ ಕೂಡಾ ಒಬ್ಬರಾಗಿದ್ದಾರೆ. ಜಿಲ್ಲಾ ಮಟ್ಟದ ಕಾರ್ಯಕರ್ತರ ಜತೆ ಒಡನಾಟ ಹೊಂದಿರುವ ಪಳನಿಸ್ವಾಮಿ ಮುಖಾಂತರ ಗ್ರಾಮಾಂತರ ಭಾಗಗಳಿಗೂ ಜಯಾ ಅವರ ಸರ್ಕಾರದ ಆಶ್ವಾಸನೆ, ಯೋಜನೆಗಳನ್ನು ತಲುಪಿಸಿದವರು.

ಶಶಿಕಲಾ ಆಯ್ಕೆಯ ಸಿಎಂ

ಶಶಿಕಲಾ ಆಯ್ಕೆಯ ಸಿಎಂ

ಡಿಸೆಂಬರ್ 2016ರಲ್ಲಿ ಜಯಲಲಿತಾ ಅವರು ನಿಧನರಾದ ಬಳಿಕ ಸಿಎಂ ಸ್ಥಾನಕ್ಕೆ ಕೇಳಿ ಬಂದ ಹೆಸರುಗಳಲ್ಲಿ ಪಳನಿಸ್ವಾಮಿ ಮೂರನೆಯದ್ದಾಗಿದೆ. ಶಶಿಕಲಾ, ಪನ್ನೀರ್ ಸೆಲ್ವಂ, ಸಂಗೊಟ್ಟಿಯನ್ ಹೆಸರುಗಳು ಬಂದಿತ್ತು.

ಜಯಾ ಆಪ್ತವಲಯದ 'ನಲ್ವರ್ ಅನಿ' ನಾಲ್ವರ ಗುಂಪಿನಲ್ಲಿ ಪಳನಿಸ್ವಾಮಿ ಮುಖ್ಯರಾಗಿದ್ದಾರೆ. ಪನ್ನೀರ್ ಸೆಲ್ವಂ, ವೇಲುಮಣಿ, ತಂಗಮಣಿ ಉಳಿದ ಮೂವರು. ಜಯಾ ಸಾವಿನ ನಂತರ ಸೇಲಂನಲ್ಲಿ ಇತ್ತೀಚೆಗೆ ಜನಬಲ ಕಳೆದುಕೊಂಡಿರುವುದು ಸ್ವಲ್ಪ ಯೋಚನೆಯ ಸಂಗತಿಯಾಗಿದೆ.

English summary
Edappadi K Palanisamy is the chief minister elect of the Tamil Nadu. He was chosen by his party Anna Dravida Munnetra Kazhagam MLAs as the leader of legislature party after Sasikala Natarajan was convicted by Supreme Court in the disproportionate assets case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X