ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಲುಕ್ಔಟ್ ನೋಟಿಸ್' ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಕಾರ್ತಿ ಚಿದಂಬರಂ

ತಮ್ಮ ವಿರುದ್ಧ 'ಲುಕ್ ಔಟ್ ನೋಟಿಸ್' ಜಾರಿಗೊಳಿಸಿದ ಸಿಬಿಐ ವಿರುದ್ಧ ಮದ್ರಾಸ್ ಹೈಕೋರ್ಟ್ ಮೊರೆ ಹೋದ ಕಾರ್ತಿ ಚಿದಂಬರಂ. ಕೇಂದ್ರದ ಮಾಜಿ ಸಚಿವರಾದ ಪಿ. ಚಿದಂಬರಂ ಅವರ ಪುತ್ರರಾಗಿರುವ ಕಾರ್ತಿ ಚಿದಂಬರಂ ಅವರ ವಿರುದ್ಧ ಭ್ರಷ್ಟಾಚಾರ

|
Google Oneindia Kannada News

ನವದೆಹಲಿ, ಆಗಸ್ಟ್ 4: ತಮ್ಮ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಜಾರಿಗೊಳಿಸಿರುವ 'ಲುಕ್ಔಟ್ ನೋಟಿಸ್' ವಿರುದ್ಧ ಕಾರ್ತಿ ಚಿದಂಬರಂ ಅವರು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಇದರ ವಿರುದ್ಧ ಸಿಡಿದೆದ್ದಿರುವ ಕಾರ್ತಿ, ಈ ನೋಟಿಸ್ ಕಾನೂನು ಬಾಹಿರವಾಗಿದ್ದು, ಇದಕ್ಕೆ ತಡೆಯಾಜ್ಞೆ ನೀಡಬೇಕೆಂದು ಅವರು ನ್ಯಾಯಪೀಠದ ಮುಂದೆ ಮನವಿ ಸಲ್ಲಿಸಿದ್ದಾರೆಂದು ಕೆಲ ಸುದ್ದಿ ಮೂಲಗಳು ತಿಳಿಸಿವೆ.

ಕಾರ್ತಿ, ಚಿದಂಬರಂ ವಿರುದ್ಧ ಇರೋ ಆರೋಪಗಳೇನು?ಕಾರ್ತಿ, ಚಿದಂಬರಂ ವಿರುದ್ಧ ಇರೋ ಆರೋಪಗಳೇನು?

ಕಾರ್ತಿ ಚಿದಂಬರ್ ಸಲ್ಲಿಸಿರುವ ಅರ್ಜಿಯನ್ನು ಸ್ವೀಕರಿಸಿರುವ ಸಾಲಿಸಿಟರ್ ಜನರಲ್, ಜಿ. ರಾಜಗೋಪಾಲನ್, ಈ ಬಗ್ಗೆ ಸಿಬಿಐ ಹಾಗೂ ಇತರ ತನಿಖಾ ಸಂಸ್ಥೆಗಳಿಗೆ ನೋಟಿಸ್ ಜಾರಿಯಾಗಿರುವ ಬಗ್ಗೆ ಮಾಹಿತಿ ಪಡೆದ ನಂತರ ವಿಚಾರಣೆ ಆರಂಭಿಸುವುದಾಗಿ ತಿಳಿಸಿದ್ದಾರೆ.

ಪಿ ಚಿದಂಬರಂ ಪುತ್ರ ಕಾರ್ತಿ ಕಚೇರಿ ಮೇಲೆ 'ಇಡಿ' ದಾಳಿಪಿ ಚಿದಂಬರಂ ಪುತ್ರ ಕಾರ್ತಿ ಕಚೇರಿ ಮೇಲೆ 'ಇಡಿ' ದಾಳಿ

ಭ್ರಷ್ಟಾಚಾರ ಹಾಗೂ ವಿದೇಶಿ ವಿನಿಮಯ ನಿಯಮಗಳ ಉಲ್ಲಂಘನೆಯ ಆರೋಪಗಳನ್ನು ಎದುರಿಸುತ್ತಿರುವ ಕಾರ್ತಿ ಚಿದಂಬರಂ, ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಪುತ್ರ.

ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಎಫ್ ಐಆರ್ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಎಫ್ ಐಆರ್

ಇವರ ವಿರುದ್ಧ ತನಿಖೆ ನಡೆಸುತ್ತಿರುವ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ಇಡಿ), ಯಾವುದೇ ಕ್ಷಣದಲ್ಲಿ ದೇಶ ಬಿಟ್ಟು ಹೊರಟು ಹೋಗುವ ಸಾಧ್ಯತೆಗಳನ್ನು ಅಂದಾಜು ಮಾಡಿರುವ ಸಿಬಿಐ, ಮುನ್ನೆಚ್ಚರಿಕೆ ಕ್ರಮವಾಗಿ ಈ ನೋಟಿಸ್ ಜಾರಿಗೊಳಿಸಲಾಗಿದೆ.

ಸಿಬಿಐ ಕೂಡ ಕಣ್ಣು

ಸಿಬಿಐ ಕೂಡ ಕಣ್ಣು

ಆರ್ಥಿಕ ಅವ್ಯವಹಾರ, ವಿದೇಶಿ ವಿನಿಮಯ ನಿಯಮಗಳ ಉಲ್ಲಂಘನೆ ವಿಚಾರದಲ್ಲಿ ಕಳೆದ ವರ್ಷ ಡಿಸೆಂಬರ್ ನಲ್ಲಿ ಕಾರ್ತಿ ಚಿದಂಬರಂ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೇ ವರ್ಷ, ಮೇ ತಿಂಗಳಲ್ಲಿ ಕಾರ್ತಿ ಚಿದಂಬರಂ ಹಾಗೂ ಮನೆಗಳ ಮೇಲೆ ಸಿಬಿಐ ಕೂಡಾ ದಾಳಿ ನಡೆಸಿತ್ತು.

ಅಪ್ಪಣೆ ಪಡೆದ ನಂತರವೇ ಪ್ರಯಾಣ

ಅಪ್ಪಣೆ ಪಡೆದ ನಂತರವೇ ಪ್ರಯಾಣ

ಯಾವುದೇ ವ್ಯಾವಹಾರಿಕ, ಕೌಟುಂಬಿಕ, ವೈದ್ಯಕೀಯ ಮುಂತಾದ ಸಕಾರಣಗಳಿಂದ ದೇಶ ಬಿಟ್ಟು ಹೊರಹೋಗುವ ಸಂದರ್ಭ ಎದುರಾದಲ್ಲಿ, ಕಾರ್ತಿ ಚಿದಂಬರಂ ಅವರು, ಮೊದಲು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ (ಇಡಿ) ಗಮನಕ್ಕೆ ಈ ವಿಷಯವನ್ನು ತರಬೇಕಿದೆ. ಈ ತನಿಖಾ ಸಂಸ್ಥೆಗಳ ಒಪ್ಪಿಗೆ ಪಡೆದ ನಂತರವಷ್ಟೇ ಅವರು, ವಿದೇಶಕ್ಕೆ ತೆರಳಬಹುದಾಗಿದೆ ಎಂದು ಲುಕ್ ಔಟ್ ನೋಟಿಸ್ ನಲ್ಲಿ ಸೂಚನೆ ನೀಡಲಾಗಿದೆ.

ಏನಿದು ಲುಕ್ ಔಟ್ ನೋಟಿಸ್?

ಏನಿದು ಲುಕ್ ಔಟ್ ನೋಟಿಸ್?

ಅಪರಾಧ ಪ್ರಕರಣಗಳಲ್ಲಿ ಪೊಲೀಸ್, ಸಿಬಿಐ, ಸಿಐಡಿ, ಇಡಿ, ಆದಾಯ ತೆರಿಗೆ ಇಲಾಖೆ ಅಥವಾ ಇನ್ಯಾವುದೇ ತನಿಖಾ ಸಂಸ್ಥೆಗಳಿಗೆ ಬೇಕಾದ ವ್ಯಕ್ತಿಯೊಬ್ಬರನ್ನು ಇತರ ಸಾಮಾನ್ಯ ಪ್ರಯಾಣಿಕರಂತೆ ಸುಲಭವಾಗಿ ವಿದೇಶಕ್ಕೆ ತೆರಳುವುದನ್ನು ನಿರ್ಬಂಧಗೊಳಿಸುವ ವಿಧಾನವೇ ಲುಕ್ ಔಟ್ ನೋಟಿಸ್.

ಇಲ್ಲಿ ತಪ್ಪಿಸಿಕೊಂಡರೂ ಅಲ್ಲಿ ಸಿಕ್ಕಿಹಾಕಿಕೊಳ್ತಾರೆ

ಇಲ್ಲಿ ತಪ್ಪಿಸಿಕೊಂಡರೂ ಅಲ್ಲಿ ಸಿಕ್ಕಿಹಾಕಿಕೊಳ್ತಾರೆ

ಈ ನೋಟಿಸ್ ಜಾರಿಗೊಂಡವರ ಬಗೆಗಿನ ಎಲ್ಲಾ ರೀತಿಯ ಮಾಹಿತಿಗಳು ಪ್ರಪಂಚದ ಎಲ್ಲಾ ವಿಮಾನ ನಿಲ್ದಾಣಗಳಿಗೆ, ಹಡಗುದಾಣಗಳಿಗೆ ರವಾನೆಯಾಗುತ್ತವೆ. ಹಾಗಾಗಿ, ಸಂಬಂಧಪಟ್ಟ ವ್ಯಕ್ತಿಗಳು ಭಾರತದಲ್ಲಿನ ತನಿಖಾ ಸಂಸ್ಥೆಗಳ ಕಣ್ತಪ್ಪಿಸಿ ವಿದೇಶಕ್ಕೆ ತೆರಳಿದರೂ, ಅಲ್ಲಿ ವಿದೇಶಗಳ ವಿಮಾನ ನಿಲ್ದಾಣಗಳಲ್ಲಿ ನಡೆಸಲಾಗುವ ವಲಸಿಗರ ತಪಾಸಣೆ ಕೇಂದ್ರಗಳಲ್ಲಿ ಇವರು ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳಿರುತ್ತವೆ.

English summary
Karti Chidambaram, son of former Union finance minister P Chidambaram, has approached the Madras high court seeking to quash the the Look Out circular against him by CBI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X