ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಿದ ಜಯಂತಿ ನಟರಾಜನ್

By Mahesh
|
Google Oneindia Kannada News

ಚೆನ್ನೈ, ಜ.30: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪಕ್ಷದ ವಿರುದ್ಧ ಕಿಡಿಕಾರಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ ಪಕ್ಷದ ಹಿರಿಯ ನಾಯಕಿ ಜಯಂತಿ ನಟರಾಜನ್ ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ತಮ್ಮ ಪತ್ರದ ಮರ್ಮ ಹಾಗೂ ಕಾಂಗ್ರೆಸ್ ತೊರೆಯುತ್ತಿರುವುದೇಕೆ ಎಂಬುದನ್ನು ವಿವರಿಸಿದರು.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನನಗೆ ನೀಡಿದ ಹುದ್ದೆ ಹಾಗೂ ಗೌರವಕ್ಕೆ ನಾನು ಆಭಾರಿಯಾಗಿದ್ದೇನೆ. ನನ್ನ ಕುಟುಂಬದ ರಕ್ತದಲ್ಲೇ ಕಾಂಗ್ರೆಸ್ ಪಕ್ಷ ಬರೆದಿದೆ. ನಾನು ಚಿಕ್ಕಂದಿನಿಂದಲೂ ಕಾಂಗ್ರೆಸ್ಸಿಗೆ ನಿಷ್ಠಳಾಗಿ ಬೆಳೆದೆ. ಆದರೆ, ನಾನು ಪಕ್ಷ ಸೇರಿದಾಗ ಇದ್ದ ಸಿದ್ಧಾಂತ, ವಾತಾವರಣ ಈಗ ಇಲ್ಲ. ಹೀಗಾಗಿ ನಾನು ಇಲ್ಲಿ ಉಳಿಯಲು ಆಗುತ್ತಿಲ್ಲ ಎಂದು ಜಯಂತಿ ನಟರಾಜನ್ ಬೇಸರ ವ್ಯಕ್ತಪಡಿಸಿದರು. [ಸೋನಿಯಾಗೆ ಜಯಂತಿ ಬರೆದ ಪತ್ರ ಇಲ್ಲಿದೆ]

Jayanthi Natarajan quits Congress

ಜಯಂತಿ ನಟರಾಜನ್ ಅವರು ಪತ್ರದಲ್ಲಿ ಬರೆದಿದ್ದನ್ನೇ ಬಹುತೇಕ ಸುದ್ದಿಗೋಷ್ಠಿಯಲ್ಲಿ ಹೇಳಿದ್ದು ವಿಶೇಷವಾಗಿತ್ತು. ಸುದ್ದಿಗೋಷ್ಠಿ ವಿವರ ಇಲ್ಲಿದೆ:
* ಲೋಕಸಭೆ ಚುನಾವಣೆಗೆ ನೂರು ದಿನ ಇದೇ ಎನ್ನುವಾಗ ನನ್ನನ್ನು ಮೂಲೆಗುಂಪು ಮಾಡಲಾಯಿತು.
* ನಾನು ಏನಾದರೂ ತಪ್ಪು ಮಾಡಿದ್ದರೆ ಶಿಕ್ಷಿಸಲಿ, ಭ್ರಷ್ಟಾಚಾರ ಎಸಗಿದ್ದರೆ ತನಿಖೆ ನಡೆಸಲಿ, ನೇಣಿಗೇರಲು ನಾನು ಸಿದ್ಧ
* ಗಾಂಧಿ ಪರಿವಾರದ ನಿಷ್ಠಾವಂತೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಇದರಲ್ಲಿ ಮುಜುಗರವಿಲ್ಲ.


* ನನ್ನನ್ನು ಯಾರು ಬೆದರಿಸಿಲ್ಲ. ಒತ್ತಡ ಹೇರಿಲ್ಲ. ನನ್ನ ಸ್ವ ಇಚ್ಛೆಯಿಂದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. [ಜಯಂತಿ ನಟರಾಜನ್ ಯಾರು?]
* ಬಿಜೆಪಿಯಾಗಲಿ ಅಥವಾ ತಮಿಳುನಾಡಿನ ಪ್ರಾದೇಶಿಕ ಪಕ್ಷವಾಗಲಿ ಸೇರುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ.
* ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲು ಆಗಲಿಲ್ಲ, ಫಿಕ್ಕಿ ಸಮ್ಮೇಳನದ ಬಗ್ಗೆ ರಾಹುಲ್ ಗೆ ಪತ್ರ ಬರೆದರೆ I am a little busy ಎಂದು ಉತ್ತರಿಸಿದ್ದರು. ವಿನಾಕಾರಣ ವಕ್ತಾರೆ ಸ್ಥಾನದಿಂದ ಕೆಳಗಿಳಿಸಲಾಯಿತು.

* ರಾಜ್ಯ ಕಾಂಗ್ರೆಸ್ ಜೊತೆ ಯಾವುದೇ ವೈಮನಸ್ಯವಿಲ್ಲ. ಹೈಕಮಾಂಡ್ ನಾಯಕರಿಂದ ತುಂಬಾ ನೊಂದಿದ್ದೇನೆ.

* ಒಡಿಶಾದಲ್ಲಿ ವೇದಾಂತ ಸಂಸ್ಥೆ ಗಣಿಗಾರಿಕೆ ವಿಷಯದಲ್ಲಿ ರಾಹುಲ್ ಗಾಂಧಿ ಅವರು ಮೂಗು ತೂರಿಸಿದರು. ಸುಮಾರು 30,000 ಕೋಟಿ ರು ಪ್ರಾಜೆಕ್ಟ್ ಕೈತಪ್ಪುತ್ತಿದೆ ಎಂದು ನನ್ನ ಸಹದ್ಯೋಗಿಗಳು ಒತ್ತಡ ಹೇರಿದರು.


* ಅದರೆ, ನಾನು ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಕ್ಲಿಯರೆನ್ಸ್ ಪ್ರಮಾಣ ಪತ್ರ ನೀಡಿರಲಿಲ್ಲ. ನಾನು ಮಾಡಿದ್ದು ಸರಿ ಎಂದು ಸುಪ್ರೀಂಕೋರ್ಟ್ ಕೂಡಾ ತೀರ್ಪು ನೀಡಿತು.

* ವಿನಾಕಾರಣ ನನ್ನನ್ನು ರಾಹುಲ್ ವಿರುದ್ಧ ಎತ್ತಿ ಕಟ್ಟಲಾಯಿತು. ಫಿಕ್ಕಿ ಸಮ್ಮೇಳನದಲ್ಲಿ ರಾಹುಲ್ ನೀಡಿದ ಹೇಳಿಕೆ ಪಕ್ಷಕ್ಕೆ ಮುಳುವಾಯಿತು.

* ನಾನು ನಾಲ್ಕು ತಲೆಮಾರಿನ ನಾಯಕಿಯಾಗಿ ನಮ್ಮ ಕುಟುಂಬದಿಂದ ಕಾಂಗ್ರೆಸ್ ಗೆ ಸೇರಿದೆ. ನನಗೆ ಈಗ ನನ್ನ ನೆಚ್ಚಿನ ಪಕ್ಷದಲ್ಲೇ ಉಸಿರುಗಟ್ಟಿಸುವಂಥ ವಾತಾವರಣ ಸೃಷ್ಟಿಯಾಗಿರುವುದು ಬೇಸರ ತರಿಸಿದೆ.
* ನಾನು ಬುಡಕಟ್ಟು ಜನಾಂಗ, ಪರಿಸರ ಉಳಿಸಲು ಶ್ರಮಿಸಿದ್ದೇ ತಪ್ಪಾಯಿತೇ? ಇಂದಿರಾ ಗಾಂಧಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾನು ಚಲಿಸಿದೆ.
* ಬಿಜೆಪಿ ಸರ್ಕಾರ ನಾನು ಕ್ಲಿಯೆರನ್ಸ್ ಕೊಟ್ಟ ಯೋಜನೆಗಳನ್ನು ಮಾತ್ರ ಮುಂದುವರೆಸಿ ಪರಿಸರ ಕಾಳಜಿ ಮೆರೆದಿದೆ. ಇದಕ್ಕಾಗಿ ಧನ್ಯವಾದ ಅರ್ಪಿಸುತ್ತೇನೆ.

English summary
Former Union Environment Minister and Congress leader Jayanthi Natarajan on Friday announced that she would quit the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X